ನನ್ನ ಅಂಗಳದಲ್ಲಿ
ರಂಗೋಲಿ ಇಡಲಿಕ್ಕೆ
ದೊಣ್ಣೆ ನಾಯಕನ
ಹಂಗೇಕೆ?
ನನ್ನ ಬಾಳ ಬೆಳಗುವ
ಪುಟ್ಟ ಹಣತೆಗೆ
ಯಾರ ಸಹಿಯ
ಪಡೆಯಲೇಕೆ?
ನೀ ಹಾಕುವ ತಿಂಗಳ
ಮೊಬೈಲ್ ಕರೆನ್ಸಿಗಳಲ್ಲಿ
ತುಂಬದೆ ಬಡವನ ಹೊಟ್ಟೆ,
ನಿನ್ನ ಸ್ವಾರ್ಥವ ಮರೆಮಾಚಲು
ನಮ್ಮ ಬೆಳಕನ್ನೇಕೆ ದಾನ ಕೊಟ್ಟೆ?
ಹಬ್ಬ ಮಾಡುವ ಮನಕೆ
ಬೆಂಕಿ ಹಚ್ಚುವವರ
ಇನ್ನೆಷ್ಟು ದಿನ ಸಹಿಸಲಿ?
ನಾನವರ ಗಡ್ಡ
ಬಯಸುವುದಾದರೆ
ಸಮತೆಯ ಒಡೆಯದಿರು,
ಹಣತೆಗೆ ಬೆಂಕಿ ಇಡುವವರ
ಗಡ್ಡಕ್ಕೆ ಬೆಂಕಿ ಇಡು ದಡ್ಡ!
ರಕ್ತ ಚೆಲ್ಲುವುದ ಕಂಡೂ
ಜಾಣ ಮೌನದಲಿರುವವರ
ಮೌನದ ಕತ್ತಲೆಯಲಿ
ಬೆಳಗುವ ಹಣತೆಯ ನಂದಿಸುವ
ದುರ್ಬುದ್ಧಿಯೇ
ಮೊದಲು ಆರಲಿ!
ಬೆಂಕಿ ಇಡುವವರ ಬಿಟ್ಟು
ಹಣತೆ ಹಚ್ಚುವವರ,
ಬೆಳಕು ನಂದಿಸುವವರ ವಿರುದ್ಧ
ದಿನವೂ ದಿಕ್ಕಾರವಿರಲಿ!
✍️ ಉಮೇಶ ಮುಂಡಳ್ಳಿ, ಭಟ್ಕಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!