ಪುತ್ತೂರು-ಮುಕ್ಕೂರು ಸಮೀಪದ ಕೋಡಿಬೈಲು ನಿವಾಸಿ ಅವನಿ ಕೋಡಿಬೈಲು ವಿದ್ವತ್ ಅಂತಿಮ ಹಂತದ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯ ಲ್ಲಿ ತೇರ್ಗಡೆ ಹೊಂದಿದ್ದಾಳೆ. ಗಂಗೂ ಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಅಂತಿಮ ಹಂತದ ವಿದ್ವತ್ ಪರೀಕ್ಷೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರು ವಿದೂಷಿ ಪ್ರಣತಿ ಚೈತನ್ಯ ಪದ್ಯಾಣ ಅವರಲ್ಲಿ ನೃತ್ಯಾಭ್ಯಾಸ ಮಾಡಿದ್ದಾರೆ.

ಈಗಾಗಲೇ ಇವರು ದೂರದರ್ಶನ ಚಂದನ ವಾಹಿನಿಯ ಸ್ಥಳೀಯ ಶಾಸ್ತ್ರೀಯ ನೃತ್ಯ ಆಡಿಷನಲ್ಲಿ ಆಯ್ಕೆ ಯಾಗಿ ದೂರದರ್ಶನ ದ ವಿ ಗ್ರೇಡ್ ಕಲಾವಿದೆಯಾಗಿ ಅಧಿಕೃತ ಮಾನ್ಯತೆ ಪಡೆದುಕೊಂಡಿರುತ್ತಾರೆ. ಇವರು ಬಾಲ್ಯದಿಂದಲೇ ನೃತ್ಯಭ್ಯಾಸ ಮಾಡುತ್ತಿದ್ದು ಸತತ ಹದಿನಾಲ್ಕು ವರ್ಷಗಳ ಕಾಲ ನೃತ್ಯವನ್ನು ಆರಾದಿಸುತ್ತಾ ಇದೀಗ ವಿದೂಷಿ ಅವನಿ ಕೋಡಿಬೈಲು ಆಗಿ ಹೊರಹೊಮ್ಮಿ ಹುಟ್ಟೂರಿಗೂ ಶಿಕ್ಷಕರಿಗೂ ಕುಟುಂಬಕ್ಕೂ ಕೀರ್ತಿ ತಂದಿರುತ್ತಾರೆ ಇವರು ಪುತ್ತೂರು ಕಾನಾವು ಕೋಡಿಬೈಲಿನ ರಾಮಚಂದ್ರ ಕೋಡಿಬೈಲು ಹಾಗೂ ಸಾಹಿತಿ ಕವಯಿತ್ರಿ ಅಶ್ವಿನಿ ಕೋಡಿಬೈಲು ಅವರ ಪುತ್ರಿಯಾಗಿದ್ದಾಳೆ.

ಕಲಿಕಾ ಅವದಿಯಲ್ಲಿಯೇ ಅನೇಕ ರಾಜ್ಯ ಹಾಗೂ ಗಡಿನಾಡು ಕೇರಳದಲ್ಲಿ ನೃತ್ಯಾರ್ಪಣೆ ನಡೆಸಿರುತ್ತಾರೆ.ಸ್ವತಃ ನೃತ್ಯ ಸಂಯೋಜನೆ ಮಾಡಿ ಅನೇಕ ನೃತ್ಯಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ.