ಮಹಾರಾಷ್ಟದ ನಾಗಪುರದಲ್ಲಿ ವಾಯುಪಡೆಯ ಅಧಿಕಾರಿಯೊರ್ವರ ಪತ್ನಿಗೆ ಮತ್ತು ಬರಿಸಿ, ಅತ್ಯಾಚಾರ ಎಸಗಿ ಬಲವಂತದ ಮತಾಂತರ ಪ್ರಕರಣ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬಲವಂತದ ಮತಾಂತರ ಕೂಡದು ಎಂಬ ಭಾವನೆ ಜಾಗೃತವಾಗಿರುವ ಸಂದರ್ಭದಲ್ಲಿ ಮತ್ತು ಮತಾಂತರ ವಿರೋಧಿ ಪ್ರಬಲ ಕಾಯ್ದೆಯನ್ನು ಜಾರಿಗೆ ತರಬೇಕೆಂಬ ಕೂಗಿನ ನಡುವೆಯೂ ಇಂಥ ಪ್ರಕರಣಗಳು ಸಂಭವಿಸುತ್ತಿರುವುದು ಮತಾಂಧತೆಯ ಪರಾಕಾಷ್ಠೆ ಮತ್ತು ಕಾನೂನಿನ ಭಯ ಇಲ್ಲದಿರುವುದರ ಸಂಕೇತ. ಅದರಲ್ಲೂ ವಾಯುಪಡೆಯ ಅಧಿಕಾರಿಯೊರ್ವರ ಪತ್ನಿ ಕೂಡ ಸುರಕ್ಷಿತವಲ್ಲ ಎಂಬುದು ಇನ್ನೂ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಗಳು ಸಮಾಜಘಾತುಕ ಕೃತ್ಯಕ್ಕೆ ಇಳಿದವರೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪ್ರಕರಣ ದೇಶಕ್ಕೆ ಅತ್ಯಂತ ಪ್ರಬಲವಾದ ಮತಾಂತರ ವಿರೋಧಿ ಕಾನೂನಿನ ಅವಶ್ಯಕತೆಯನ್ನು ಎತ್ತಿತೋರಿಸುತ್ತದೆ.
ಮತಾಂಧತೆಯ ತೀವ್ರತೆ ನಾನಾ ಆಕಾರಗಳನ್ನು ಹೊತ್ತು ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಅತ್ಯಾಚಾರ, ಮಾಧಕವಸ್ತುಗಳ ಬಳಕೆಗಳಿಂದ ಕಾನೂನು-ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ. ಇವೆಲ್ಲದರ ತರುವಾಯ ಕೂಡ ಮತಾಂತರ ವಿರೋಧಿ ಕಾಯ್ದೆ ಜಾರಿಗೆ ವಿರೋಧಗಳು ವ್ಯಕ್ತವಾಗುತ್ತಿರುವುದು ದುರಂತ ರಾಜಕೀಯ ಪಕ್ಷಗಳು ಸೆಕ್ಯುಲರ್ ಭ್ರಮೆಯಿಂದ ಕಾಯ್ದೆಗೆ ವಿರೋಧವನ್ನು ವ್ಯಕ್ತಪಡಿಸುತ್ತಾರೆಯೇ ವಿನಾ ಅಪರಾಧ ಪ್ರಕರಣಗಳಿಗೆ ಕೊನೆ ಹಾಡುವ ಮನಸ್ಸು ಮಾಡುತ್ತಿಲ್ಲ. ತನ್ನ ಇಚ್ಛೆಗೆ ವಿರುದ್ಧವಾಗಿ ಮಾಡುವ ಮತಾಂತರ ಸಮಾಜದ ಶಾಂತಿಗೆ ಭಂಗ ತರುವುದಷ್ಟೇ ಅಲ್ಲದೆ, ಸೌಹಾರ್ಧದ ಹಾದಿಗಳನ್ನು ಮುಚ್ಚುತ್ತಾ ಬರುತ್ತದೆ. ಪರಸರ ಸಂಶಯ, ಅಸಹನೆಗಳು ಉಂಟಾಗುತ್ತದೆ. ಇವೆಲ್ಲದರ ಪರಿಹಾರಕ್ಕೆ ಯೋಗ್ಯ ಕಾನೂನೊಂದೇ ಪರಿಹಾರ. ಕಾನೂನಿನ ಭಯವೊಂದೇ ವ್ಯತ್ಯಾಸ ಮತ್ತು ಸೌಹಾರ್ಧ ಸಮಾಜವನ್ನು ನಿರ್ಮಿಸಬಲ್ಲದು. ಈ ಕಾಲಘಟ್ಟದಲ್ಲೂ ಇಂಥ ಪ್ರಕರಣಗಳು ನಡೆಯುತ್ತವೆ ಎಂದರೆ ಅವಷ್ಟು ಶೀಘ್ರವಾಗಿ ಕಾನೂನು ಜಾರಿಗೆ ಬರಲೇ ಬೇಕಿದೆ.
ಬಲವಂತದ ಮತಾಂತರ ಕಾಯ್ದೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಆಯ್ಕೆಗೆ ಅಡ್ಡಿಯಾಗದು. ಯಾವ ರೀತಿಯಲ್ಲೂ ಅದು ಸಂವಿಧಾನದಾಹಿರವಲ್ಲ, ಬಲವಂತದ ಅಥವಾ ಮೋಸದ ಮತಾಂತರಗಳನ್ನು ತಡೆಯಲು ಕೆಲವು ರಾಜ್ಯಗಳು ಜಾರಿಗೆ ತಂದ ಕಾಯ್ದೆಗಳು ಈಗಾಗಲೇ ಯಶಸ್ವಿಯಾಗಿವೆ. ಬಲವಂತ, ಒತ್ತಾಯ ಮತ್ತು ಆಮಿಷದ ಮೂಲಕ ಮಾಡುವ ಮತಾಂತರಗಳನ್ನು ಮಾತ್ರ ಕಾಯ್ದೆ ನಿಷೇಧಿಸುತ್ತದೆ. ಕಾಯ್ದೆ ದುರ್ಬಲ ವರ್ಗ, ಅಪ್ರಾಪ್ತರು ಮತ್ತು ಸಾಮಾಜಿಕವಾಗಿ ಆಸುರಕ್ಷಿತರನ್ನು ರಕ್ಷಿಸಲು ಬಳಕೆಯಾಗುತ್ತಿದೆ. ಹೆಚ್ಚುವರಿ ಶಿಕ್ಷೆಯನ್ನೂ ಕಾನೂನಿನಲ್ಲಿ ಅಳವಡಿಸಬೇಕಿದೆ. ಇದುವರೆಗೆ ರಾಜ್ಯಗಳು ಜಾರಿಗೆ ತಂದ ಕಾಯ್ದೆಗಳಿಂದ ಯಾದ ರಾಜ್ಯಗಳಲ್ಲೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಉದಾಹರಣೆಗಳಿಲ್ಲ, ಜೊತೆಗೆ ಮತಾಂತರ ಮತ್ತು ಸ್ವ ಇಚ್ಛೆಯ ಧಾರ್ಮಿಕ ಆಯ್ಕೆ ನಡುವಿನ ಗೊಂದಲಗಳು ಉಂಟಾಗಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಕೆಲವು ವಿಮರ್ಶಕರು ಸಗಿರುವ ದಂಡಸಂಹಿತೆ ಸಾಕಾಗಬಹುದು ಎನ್ನುತ್ತಾರೆ. ಆದರೆ ಅದರ ಕಣ್ಣಮುಂದೆಯೇ ನಾಗಪುರದ ಘಟನೆ ನಡೆಯಿತು ಎಂಬುದನ್ನು ನೋಡಬೇಕಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೮-೦೬-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!