ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯ ಮತ್ತು ಸೌಂದರ್ಯಕ್ಕೂ ಅಪಾರವಾದ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು. ಮೊಡವೆ ಸಮಸ್ಯೆಗಳು ಮತ್ತು ಚರ್ಮದ ತೊಂದರೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬೆಳ್ಳುಳ್ಳಿಯನ್ನು ನೈಸರ್ಗಿಕ ಪರಿಹಾರವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ. ಅದರಲ್ಲಿರುವ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು ದೇಹದ ಒಳಗೂ ಹೊರಗೂ ಉತ್ತಮ ಪರಿಣಾಮ ಬೀರುತ್ತವೆ.
ಕೂದಲಿನ ಆರೈಕೆಯಲ್ಲಿ ಬೆಳ್ಳುಳ್ಳಿಯ ಬಳಕೆ ವಿಶೇಷವಾಗಿದೆ. ಬೆಳ್ಳುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ದಪ್ಪ ಪೇಸ್ಟ್ ಮಾಡಬೇಕು. ಅದಕ್ಕೆ ಹತ್ತು ಹನಿಗಳಷ್ಟು ಪುದೀನಾ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ಹಗುರವಾದ ಶಾಂಪೂ ಇರುವ ಬಾಟಲಿಗೆ ಸೇರಿಸಿ ಬಳಸಬಹುದು. ವಾರದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಬಳಸಬಾರದು. ಈ ವಿಧಾನವು ತಲೆಚರ್ಮದ ಸೋಂಕುಗಳನ್ನು ಕಡಿಮೆ ಮಾಡಿ ಕೂದಲು ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಬೆಳ್ಳುಳ್ಳಿಯಲ್ಲಿರುವ ವಿಟಮಿನ್ ಸಿ, ಸೆಲೆನಿಯಂ, ಆಲಿಸಿನ್, ಸತು ಮತ್ತು ತಾಮ್ರ ಮುಂತಾದ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೂ ಬಹಳ ಉಪಕಾರಿ. ಇದರಲ್ಲಿರುವ ಪ್ರಬಲ ಆ್ಯಂಟಿ ಬ್ಯಾಕ್ಟಿರಿಯಲ್ ಗುಣಗಳು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತವೆ. ಈಗಾಗಲೇ ಇರುವ ಮೊಡವೆಗಳು ಬೇಗ ಗುಣಮುಖವಾಗಲು ಮತ್ತು ಕಲೆ ಉಳಿಯದಂತೆ ನೋಡಿಕೊಳ್ಳಲು ಸಹಕಾರಿಯಾಗುತ್ತವೆ. ವಿಶೇಷವಾಗಿ ಸತ್ತು ಅಂಶವು ಮೊಡವೆಯ ಒಳಗಿರುವ ಕೀವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬೆಳ್ಳುಳ್ಳಿ ಎಣ್ಣೆಯನ್ನು ನಿಮ್ಮ ಮುಖಲೇಪದಲ್ಲಿ ಕೆಲವು ಹನಿಗಳನ್ನು ಸೇರಿಸಿ ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು.
ಇದರ ಜೊತೆಗೆ, ಬೆಳ್ಳುಳ್ಳಿಯನ್ನು ವಿಟಮಿನ್ ಇ, ಆಲೀವ್ ಆಯಿಲ್ ಮತ್ತು ಮೊಟ್ಟೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಇದು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಕೂದಲು ಬಲವಾಗಲು, ಹೊಳಪು ಹೆಚ್ಚಲು ಮತ್ತು ಒಣಗುವಿಕೆ ಕಡಿಮೆಯಾಗಲು ಇದು ಸಹಕಾರಿಯಾಗಿದೆ. ಬೆಳ್ಳುಳ್ಳಿಯ ಪ್ರಮುಖ ಗುಣವೆಂದರೆ ಅದರ ಆ್ಯಂಟಿಮೈಕ್ರೋಬಿಯಲ್ ಸಾಮರ್ಥ. ಇದು ತಲೆಚರ್ಮದಲ್ಲಿ ಇರುವ ಬ್ಯಾಕ್ಟಿರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ನಾಶಪಡಿಸಿ ಕೂದಲು ಬೆಳವಣಿಗೆಗೆ ಅನುಕೂಲಕರ ಪರಿಸರವನ್ನು ಸೃಷ್ಟಿಸುತ್ತದೆ. ಹೀಗಾಗಿ ನಿಯಮಿತವಾಗಿ ಬಳಸಿದರೆ ಕೂದಲು ಉದುರುವಿಕೆ ಕಡಿಮೆಯಾಗಬಹುದು.
ಆರೋಗ್ಯದ ದೃಷ್ಟಿಯಿಂದಲೂ ಬೆಳ್ಳುಳ್ಳಿ ಬಹಳ ಮಹತ್ವದ್ದು. ವೈದ್ಯರು ಸಹ ಬೆಳ್ಳುಳ್ಳಿಯ ಎಣ್ಣೆಯನ್ನು ಕೊಲೆಸ್ಟ್ರಾಲ್ ನಿಯಂತ್ರಣ. ಹೃದಯದ ಆರೋಗ್ಯ ರಕ್ಷಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಜೀರ್ಣಶಕ್ತಿ ಸುಧಾರಿಸಲು ಬಳಸಲು ಸಲಹೆ ನೀಡುತ್ತಾರೆ. ಇದಲ್ಲದೆ, ಇದರಲ್ಲಿರುವ ಬಲವಾದ ಆ್ಯಂಟಿಬ್ಯಾಕ್ಟಿರಿಯಲ್ ಮತ್ತು ಆ್ಯಂಟಿ-ಫಂಗಲ್ ಗುಣಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಕಾರಿಯಾಗುತ್ತವೆ. ಒಟ್ಟಾರೆ, ಬೆಳ್ಳುಳ್ಳಿ ನೈಸರ್ಗಿಕವಾಗಿ ದೊರೆಯುವ ಅತ್ಯುತ್ತಮ ಔಷಧೀಯ ಪದಾರ್ಥಗಳಲ್ಲಿ ಒಂದಾಗಿದೆ. ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ಬಳಸಿದರೆ ಕೂದಲು, ಚರ್ಮ ಮತ್ತು ದೇಹದ ಆರೋಗ್ಯವನ್ನು ಸಮಗ್ರವಾಗಿ ಸುಧಾರಿಸಬಹುದು. ಆದರೆ ಸಂವೇದನಾಶೀಲ ಚರ್ಮ ಅಥವಾ ಅಲರ್ಜಿ ಇರುವವರು ಬಳಸುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ.
(ಆಧಾರ)
ಎ ಐ ಆಧಾರಿತ ಚಿತ್ರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!