ಪ್ರವಾಸಿಗರ ಕಣ್ಮಣಿ ದೇಶವಾದ ಸಿಂಗಾಪುರಕ್ಕೆ ಜೀವಮಾನದಲ್ಲಿ ಒಮ್ಮೆಯಾದರೂ ಹೋಗಬೇಕು ಎನ್ನುವುದು ಬಹುತೇಕರ ಕನಸು. ಸಿಂಗಾಪುರ ಎಂಬ ಹೆಸರು ಬರಲು ಕಾರಣವೇನು ಗೊತ್ತೇ? ಸುಳಿವು ಆ ಹೆಸರಿನಲ್ಲೇ ಇದೆ. ಸಿಂಗ ಎಂದರೆ ‘ಸಿಂಹ’ ಮತ್ತು ಪುರ ಎಂದರೆ ‘ನಗರ’. ಈ ಹೆಸರು ಬಂದದ್ದು ಸಂಸ್ಕೃತ ಮೂಲದಿಂದ. ೧೪ನೇ ಶತಮಾನದಲ್ಲಿ ಸುಮಾತ್ರಾದ ಶ್ರೀ ಟ್ರೈಬುವಾನಾ ಎಂಬ ರಾಜಕುಮಾರನು ಈ ದೇಶಕ್ಕೆ ಭೇಟಿ ನೀಡಿದಾಗ ಹಲವಾರು ಸಿಂಹಗಳನ್ನು ಕಂಡನಂತೆ. ಈ ಸಿಂಹಗಳು ಮಂಗಳಕರ ಎಂದು ನಂಬಿದ ಆ ರಾಜಕುಮಾರನು ಆ ದೇಶಕ್ಕೆ ‘ಸಿಂಹ ನಗರ’ ಅಥವಾ ಸಿಂಹ ಪುರ ಎಂದು ಹೆಸರಿಸಿದನು. ಕ್ರಮೇಣ ಸಿಂಹ ಪುರ ಜನರ ಬಾಯಿಯಲ್ಲಿ ಸಿಂಗಾಪುರ ಎಂದಾಯಿತು. ಇದೊಂದು ಕಥೆಯಾದರೆ ಸಿಂಗಾಪುರ ಹೆಸರು ಬಂದ ಬಗ್ಗೆ ಇನ್ನೂ ಕೆಲವು ಅಂಶಗಳಿವೆ. ಮುಂದೆ ಎಂದಾದರೂ ಬರೆಯುವೆ. ಏನೇ ಆಗಲಿ, ಸಿಂಗಾಪುರ ಒಂದು ಮಾಯಾನಗರಿ. ನಿಮ್ಮ ಊರಿನ ಹೆಸರಿಗೂ ಒಂದು ಕಥೆಯಿರಲೇ ಬೇಕಲ್ಲವೇ? ಬೇಗ ಹೇಳಿ ಪ್ಲೀಸ್…

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ