ಪ್ರತೀ ವರ್ಷ ಜೂನ್-ಜುಲೈ ತಿಂಗಳಲ್ಲಿ ‘ಬ್ರಹ್ಮ ಕಮಲ’ ಎನ್ನುವ ಸೊಗಸಾದ, ಆಹ್ಲಾದಕರ ಸುವಾಸನೆಯನ್ನು ಬೀರುವ ಹೂವು ಅರಳುತ್ತದೆ. ಈ ವರ್ಷ ನಮ್ಮ ನೆರೆಮನೆಯವರ ಅಂಗಳದ ಕೈತೋಟದಲ್ಲಿ ಒಂದೇ ರಾತ್ರಿ ಒಂದೆರಡಲ್ಲ ಬರೋಬ್ಬರಿ ಹದಿನೇಳು ಬ್ರಹ್ಮಕಮಲಗಳು ಅರಳಿ ನಿಂತಿದ್ದವು. ಅಚ್ಚರಿಯ ವಿಷಯವೆಂದರೆ ಈ ಹೂವು ಅರಳುವುದು ತಡ ರಾತ್ರಿಯಲ್ಲಿ ಸುಮಾರು ೯ ಗಂಟೆಗೆ ಅರಳಲು ಪ್ರಾರಂಭಿಸಿದರೆ ಹತ್ತು ಗಂಟೆ ಹೊತ್ತಿಗೆ ಸಂಪೂರ್ಣವಾಗಿ ಅರಳಿರುತ್ತದೆ. ದುಃಖದ ವಿಷಯವೆಂದರೆ ಈ ಹೂವಿನ ಆಯಸ್ಸು ಸಹಾ ಒಂದೇ ರಾತ್ರಿ. ಬೆಳಿಗ್ಗೆ ಆಗುವಾಗ ಮುದುಡಿ ಹೋಗಿರುತ್ತದೆ.
ನಮ್ಮ ನೆರೆಮನೆಯಲ್ಲಿ ಒಂದು ದಿನ ಮೂರು, ಮತ್ತೊಂದು ದಿನ ೧೭, ಕೊನೆಗೆ ಐದು ಬ್ರಹ್ಮ ಕಮಲಗಳು ಅರಳಿದ್ದವು. ಈ ಆಕರ್ಷಕ ಹೂವಿನ ಸೊಬಗನ್ನು ನೀವೂ ಆನಂದಿಸಿ…

ಚಿತ್ರಗಳು: ಡಾ. ಅಪರ್ಣಾ ನಾಯಕ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!