ಸುಮಾರು ಐದಾರು ವರ್ಷಗಳ ಹಿಂದೆ ಅಲೆನ್ ಗ್ಯಾನ್ದಲ್‌ಮನ್ ಎಂಬ ನ್ಯೂಯರ್ಕ್ ನಿವಾಸಿಗೆ ಲಿಮ್ ರೋಗ ಬಂತಂತೆ. ಆಗ ಅವರು ಹೆಂಪ್ ಸಸ್ಯದ ಔಷಧವನ್ನು ಬಳಸಿ ಅದರಿಂದ ಗುಣಮುಖರಾದರಂತೆ. ಆ ನಂತರ ಬೇಸಾಯವನ್ನು ಪ್ರಾರಂಭಿಸಿದರಂತೆ. ಈಗ ನ್ಯೂಯಾರ್ಕ್ ನಾದ್ಯಂತ ಸುಮಾರು ೧೦೦೦ ಜನ ರೈತರಿಗೆ, ಸುಮಾರು ೨೪,೦೦೦ ದಿಂದ ೨೮,೦೦೦ ಎಕ್ರೆ ತನಕ ಈ ಹೆಂಪ್ ಬೆಳೆಸಲು ಪರವಾನಿಗೆ ದೊರೆತಿದೆಯಂತೆ.  ಹೆಂಪ್ ಒಂದು ಸೆಣಬು ಜಾತಿಯ ಸಸ್ಯವಾಗಿದ್ದು, ನಾರು ಮತ್ತು ಆಹಾರ ಬಳಕೆಗೆ ಉಪಯೋಗವಾಗುವ ಸಸ್ಯವಂತೆ. ಇದರಿಂದ ಬಟ್ಟೆಯ ನಾರನ್ನೂ ತಯಾರಿಸುತ್ತಾರಂತೆ.

ಲಿಮ್ ರೋಗ (Lyme disease) ಅಂದರೆ ಕೀಲು ಗಂಟು ನೋವು ಮುಂತಾದ ಪ್ರಾರಂಭಿಕ ಚಿನ್ಹೆಗಳಿಂದ  ಪ್ರಾರಂಭವಾಗುವ ರೋಗವಾಗಿದ್ದು, ಇದು ಉಣುಂಗು (ಟಿಕ್) ಮೂಲಕ ಹರಡುತ್ತದೆ. ಈ ರೋಗವನ್ನು  ಗುಣಪಡಿಸುವಲ್ಲಿ ಈ ಹೆಂಪ್ ಸಸ್ಯದಿಂದ ತಯಾರಿಸುವ ಔಷಧಿ ನೆರವಾಗುತ್ತದೆಯಂತೆ. ಆಗ ಅಲೆನ್ ಗ್ಯಾನ್ಡಲ್‌ಮನ್ ೩೭ ವರ್ಷದ  ಶಾಲಾ ಶಿಕ್ಷಕನಾಗಿದ್ದು, ಒಬ್ಬ ಸಾವಯವ ಕೃಷಿಕರೂ ಸಹ, ಇವರು ಈ ರೋಗ ಬಂದ ಸಮಯದಲ್ಲಿ ಇದರ ಔಷಧಿ ಬಳಸಿ ಗುಣಮುಖರಾಗಿದ್ದರಂತೆ.

ಆದರೆ ಇದು ಒಂದು ಮತ್ತು ತರಿಸುವ ( ಗಾಂಜಾ ತರಹದ್ದು) ಬೆಳೆಯಾಗಿದ್ದು, ಇದರಲ್ಲಿ ಔಷಧೀಯ ಗುಣವೂ ಇರುವ ಕಾರಣ ಇದನ್ನು ಕೆಲವು ನೊಂದಾಯಿತ ರೈತರ ಮೂಲಕ ನೊಂದಾಯಿತ ಪ್ರದೇಶದಲ್ಲಿ ಮಾತ್ರ ವಾಣಿಜ್ಯಿಕವಾಗಿ ಬೆಳೆಸುವರೇ ನ್ಯೂಯಾರ್ಕ್ ದೇಶದ ಆಡಳಿತ ಒಪ್ಪಿಗೆ ನೀಡಿದೆ. ನ್ಯೂಯಾರ್ಕ್ ದೇಶದಲ್ಲಿ ಹೆಂಪ್ ಎಂಬ ಸಸ್ಯ ತನ್ನ ಔಷಧೀಯ ಗುಣಕ್ಕಾಗಿ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಂತೆ ನಮ್ಮ ದೇಶದಲ್ಲೂ ಇಂಥಹ ಹಲವಾರು ವಿಶಿಷ್ಟ ಗುಣದ ಔಷಧೀಯ ಸಸ್ಯಗಳು ಇವೆ. ಇವುಗಳನ್ನು ಔಷಧ ರೂಪದಲ್ಲಿ ಸಿದ್ದ ಉತ್ಪನ್ನ ತಯಾರಿಸುವವರು ಮುಂದೆ ಬಂದರೆ ಇಲ್ಲಿಯೂ ಇದು ಒಂದು ಆದಾಯ ತರಬಲ್ಲ ಬೆಳೆಯಾಗಬಹುದು.

ಸೆಣಬು ಅಥವಾ ಕೈಗಾರಿಕಾ ಸೆಣಬು, ಕೈಗಾರಿಕಾ ಮತ್ತು ಉಪಭೋಗ್ಯ ಬಳಕೆಗಾಗಿ ವಿಶೇಷವಾಗಿ ಬೆಳೆಯುವ ಕ್ಯಾನಬಿಸ್ ಸಟಿವಾ ತಳಿಗಳ ಸಸ್ಯಶಾಸ್ತ್ರೀಯ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದು. ಬಿದಿರಿನ ಜೊತೆಗೆ, ಸೆಣಬು ಭೂಮಿಯ ಮೇಲೆ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಒಂದಾಗಿದೆ. 

ಈ ಸಸ್ಯಗಳನ್ನು ಬೆಳೆಸುವಲ್ಲಿ ಜಾಗೃತೆ ಅವಶ್ಯಕ, ಏಕೆಂದರೆ ಇದು ಮೊದಲೇ ಹೇಳಿರುವಂತೆ ಗಾಂಜಾ ರೀತಿಯ ಮತ್ತೇರಿಸುವ ವಸ್ತುವನ್ನು ಉತ್ಪಾದಿಸುವ ಗಿಡ. ಸರಕಾರದ ಸೂಕ್ತ ನಿರ್ದೇಶನ ಮತ್ತು ಭದ್ರತೆಯಲ್ಲಿ ಬೆಳೆಸಬೇಕಾಗಿ ಬರಬಹುದು.

ಚಿತ್ರ ಮತ್ತು ಮಾಹಿತಿ ಕೃಪೆ: ರಾಧಾಕೃಷ್ಣ ಹೊಳ್ಳ