ಓಷಧ ಕುಮಾರ ಮೊದಲಾದ ಬೋಧಿಸತ್ವನ ಕಥೆಗಳು
ಲೇಖಕರು: ಜಿ ಪಿ ರಾಜರತ್ನಂ
ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-೫೬೦೦೦೯
₹64.00
₹80.00
20% ರಿಯಾಯಿತಿ
ಲಭ್ಯವಿದೆ
₹೧೬ ಉಳಿತಾಯ (20% ರಿಯಾಯಿತಿ)
ಪುಸ್ತಕದ ಬಗ್ಗೆ
ಭಗವಂತನಾದ ಬುದ್ಧನು ಯಾವ ದಿವ್ಯಜ್ಞಾನವನ್ನು ಪಡೆದು 'ಬುದ್ಧ' ಎನ್ನಿಸಿದನೋ ಅದಕ್ಕೆ 'ಬೋಧಿ' ಎಂದು ಹೆಸರು. ಬೋಧಿ ಎಂಬ ಈ ದಿವ್ಯಜ್ಞಾನ ಒಂದು ಜನ್ಮದಲ್ಲಿ ತಟಕ್ಕನೆ ಉಂಟಾಗ ತಕ್ಕದ್ದಲ್ಲ. ಅದು ಅನೇಕ ಜನ್ಮಗಳಲ್ಲಿ, ಕೋಟ್ಯಂತರ ಜನ್ಮಗಳಲ್ಲಿ, ನಿರಂತರವಾದ ಪ್ರಯತ್ನದಿಂದ, ಎಡೆಬಿಡದ ಸಾಧನೆಯಿಂದ, ಕೊಂಚಕೊಂಚವಾಗಿ ಕೂಡಿಕೊಂಡ ಕೋಟಿ ಸೂರರ ಪ್ರಕಾಶದಂತೆ ಮೈದೋರುವ ಆಧ್ಯಾತ್ಮಿಕವಾದ ತೇಜಸ್ಸು ಈ 'ಬೋಧಿ'. ಇಂತಹ ಬೋಧಿ ಯನ್ನು ಸಂಪಾದಿಸಲು ಬೇಕಾದ ಆಧ್ಯಾತ್ಮಿಕ ಶಕ್ತಿ ಉಳ್ಳವರು, 'ಸತ್ವ' ಉಳ್ಳವರು. ಇವರೇ 'ಬೋಧಿಸತ್ತ್ವ'ರು. ಗೌತಮನೆಂದು ನಮಗೆ ತಿಳಿದು ಬಂದಿರುವ ಬುದ್ಧನು ಹಲವಾರು ಕೋಟಿ ವರ್ಷಗಳ ಕಾಲ, ಬೋಧಿಸತ್ತ್ವನಾಗಿ ಅಸಂಖ್ಯಾತ ವಾದ ಜನ್ಮಗಳನ್ನೆತ್ತಿ, ತನ್ನ ನಿಶ್ಚಲತೆಯಿಂದ, ದೃಢತೆಯಿಂದ ಕಡೆಗೆ ಬುದ್ದ ನಾದನು, ಸಂಬುದ್ಧನಾದನು, ಸಮ್ಯಕ್ ಸಂಬುದ್ಧನಾದನು.
ಬೋಧಿಸತ್ತ್ವನ ಕತೆಗಳನ್ನು, ಎಂದರೆ ಬುದ್ಧನ ಹಿಂದಿನ ಜನ್ಮನ ಕತೆ ಗಳನ್ನು, “ಜಾತಕ ಕತೆಗಳು" ಎಂದು ಕರೆಯುತ್ತಾರೆ. ಜಾತಕ ಎಂದರೆ "(ಬುದ್ಧನ ಹಿಂದಿನ) ಜನ್ಮಕ್ಕೆ ಸಂಬಂಧಪಟ್ಟದ್ದು' ಎಂದು ಅರ್ಥ. ಹಿಂದಿನ ಜನ್ಮಗಳುಂಟು ಎಂಬುದನ್ನು ನಂಬದವರು ಕೂಡ ಈ ಕತೆಗಳನ್ನು ಓದಿ ಸಂತೋಷಪಡಬಹುದು. ಈ ಕತೆಗಳಲ್ಲಿ ಪಾತ್ರಗಳು ಪ್ರಾಣಿಗಳಾಗಲಿ, ಮನುಷ್ಯರಾಗಲಿ, ಆ ಪಾತ್ರಗಳ ನಡವಳಿಕೆಯಿಂದ ಲೋಕಕ್ಕೆ ವ್ಯವಹಾರನೀತಿ ತಿಳಿದು ಬರುತ್ತದೆ.
ವ್ಯಕ್ತಿಯ ಸ್ವಾಸ್ಥ್ಯಕ್ಕೂ ಸಮಾಜದ ಭದ್ರತೆಗೂ ಅತ್ಯವಶ್ಯಕವಾದ ವ್ಯಾವಹಾರಿಕ ನೀತಿ, ವ್ಯಾವಹಾರಿಕ ನೈರ್ಮಲ್ಯ-ಈ ಕತೆಗಳ ಒಳಗಿರುವ ತಿರುಳಿನ ರಸ. ಬುದ್ಧನು ದಾನಮಾಡಿದ ಈ ಧರ್ಮರಸವನ್ನು ಪಾನಮಾಡಿ ನಮ್ಮ ಜನ ಪುಷ್ಟಿ ಹೊಂದಲಿ.
-ಜಿ. ಪಿ. ರಾಜರತ್ನಂ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹64.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.