ಗೆಲುವಿನ ಏಣಿ
ಲೇಖಕರು: ಶುಭಲಕ್ಷ್ಮಿ ಆರ್ ನಾಯಕ
₹110.00
₹140.00
21% ರಿಯಾಯಿತಿ
ಲಭ್ಯವಿದೆ
₹೩೦ ಉಳಿತಾಯ (21% ರಿಯಾಯಿತಿ)
ಪುಸ್ತಕದ ಬಗ್ಗೆ
ಜೀವನದಲ್ಲಿ ಯಶಸ್ಸು ಎಂಬುದು ಒಂದೇ ದಿನದಲ್ಲಿ ದೊರೆಯುವ ವರವಲ್ಲ, ಅದು ಗುರಿ, ಪರಿಶ್ರಮ, ಭರವಸೆ, ಶಿಸ್ತು, ಅತ್ಮವಿಶ್ವಾಸ ಮತ್ತು ನೈತಿಕತೆಯಂತಹ ಅನೇಕ ಮೆಟ್ಟಿಲುಗಳನ್ನು ಏರಿ ತಲುಪಬೇಕಾದ ಶಿಖರ. ಅಂತಹ ಯಶಸ್ಸಿನ ಪಥವನ್ನು ಸರಳವಾಗಿ, ಪ್ರೇರಣಾತ್ಮಕವಾಗಿ ಹಾಗೂ ಬದುಕಿನ ಅನುಭವಗಳ ಬೆಳಕಿನಲ್ಲಿ ಪರಿಚಯಿಸುವ ಕೃತಿ 'ಗೆಲುವಿನ ಏಣಿ'.
ಈ ಕೃತಿಯ ಲೇಖಕಿ ಶುಭಲಕ್ಷ್ಮಿ ಆರ್. ನಾಯಕ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ತಮ್ಮದೇ ಆದ ಛಾಪು ಮೂಡಿಸಿರುವ ಪ್ರತಿಭಾವಂತ ಲೇಖಕಿ, ಕವನ, ಗಜಲ್, ಮುಕ್ತಕ, ಚುಟುಕು, ಷಟ್ಟದಿ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿರುವ ಅವರು, ಈ ಕೃತಿಯ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳ ಕುರಿತು ಓದುಗರೊಂದಿಗೆ ಹೃದಯಸ್ಪರ್ಶಿ ಸಂವಾದ ನಡೆಸಿದ್ದಾರೆ.
ಸರಳ ಭಾಷೆ, ನಿರೂಪಣೆ ಹಾಗೂ ಪ್ರೇರಣಾದಾಯಕ ವಿಚಾರಧಾರೆಗಳು ಈ ಕೃತಿಯ ಪ್ರಮುಖ ಆಕರ್ಷಣೆ ಇಂದಿನ ವೇಗದ ಜಗತ್ತಿನಲ್ಲಿ ಯಶಸ್ಸಿನ ವ್ಯಾಖ್ಯಾನವೇ ಬದಲಾಗುತ್ತಿರುವ ಸಂದರ್ಭದಲ್ಲಿ, ಈ ಕೃತಿ ಯಶಸ್ಸಿನ ನಿಜವಾದ ಅರ್ಥವನ್ನು ತಿಳಿಸುತ್ತದೆ. ಸೋಲನ್ನು ಮೆಟ್ಟಿಲಾಗಿಸಿಕೊಂಡು ಮುಂದೆ ಸಾಗುವ ಧೈರ್ಯ, ಕತ್ತಲಲ್ಲೂ ಭರವಸೆಯ ದೀಪ ಹಚ್ಚುವ ಮನೋಬಲ ಮತ್ತು ನಿರಂತರ ಪ್ರಯತ್ನದ ಮಹತ್ವವನ್ನು ಪ್ರತಿಯೊಂದು ಲೇಖನವೂ ನೆನಪಿಸುತ್ತದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹110.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.