ಸಮುದ್ರ ಮಾತಾಡಿತು
ಲೇಖಕರು: ನಾಗರಾಜ ಖಾರ್ವಿ ಕಂಚುಗೋಡು
₹101.00
₹130.00
22% ರಿಯಾಯಿತಿ
ಲಭ್ಯವಿದೆ
₹೨೯ ಉಳಿತಾಯ (22% ರಿಯಾಯಿತಿ)
ಪುಸ್ತಕದ ಬಗ್ಗೆ
ಕಡಲೆಂದರೆ ಬಿಡದೇ ಕಾಡುವ ಕನಸಾಗಿ, ಕೌತುಕವಾಗಿ, ಅನ್ನ ನೀಡಿ ಪೊರೆಯುವ ಮಾತೆಯಾಗಿ, ಮುಂದೆ ಈ ಕಡಲಿನಲ್ಲೇ ಬದುಕಿನ ಕನಸುಗಳನ್ನು ಹೊಸೆಯುತ್ತ ಸಣಿಸುತ್ತ ಇಂದು ಸಾರ್ಥಕ ಬದುಕಿನ ಹೆಜ್ಜೆಗಳನ್ನಿಡುತ್ತಾ ಸಾಗುತ್ತಿರುವ ಕವಿ ಕ್ರಿಯಾಶೀಲ ಶಿಕ್ಷಕ, ಅಂಕಣಗಾರ, ಅಂತಾರಾಷ್ಟ್ರೀಯ ಖ್ಯಾತಿಯ ಈಜುಗಾರ, ಸರಳೆ ಸಹಜ ಸ್ವಭಾವದ ನನ್ನ ಅತ್ಯಂತ ಪ್ರೀತಿಯ ಶಿಷ್ಯ ನಾಗರಾಜ ಖಾರ್ವಿಯವರನ್ನು ಈ ಕಡಲು ದಟ್ಟವಾಗಿ ಪ್ರಭಾವಿಸಿದ ಪರಿ ಅಚ್ಚರಿ ಮೂಡಿಸಿದೆ. ಅಂಕಣಗಳನ್ನು ಒಂದೊಂದಾಗಿ ಓದುತ್ತಿದ್ದಂತೆ ಕಡಲಿನ ಅಗಾಧತೆಯ, ವೈವಿಧ್ಯತೆಯ ಹಾಗೂ ವೈಶಿಷ್ಟ್ಯತೆಯ ಕುರಿತಾದ ವಿಚಾರಗಳೆಲ್ಲ ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ. ಪ್ರತಿ ಅಂಕಣದಲ್ಲೂ ತಮ್ಮಸರಳ, ಸಹಜ ಹಾಗೂ ಖಚಿತವಾದ ಭಾಷೆಯಲ್ಲಿ ಕಡಲಿನ ಕುರಿತಾದ ಮಾಹಿತಿಯ ತುಣುಕೊಂದನ್ನು ನಮಗೆ ಪರಿಣಾಮಕಾರಿಯಾಗಿ ರವಾನಿಸಿ ಬಿಡುವುದರ ಅನುಭವವಾಗುತ್ತದೆ.
"ಇಂದು ಸಂಜೆ ನಾವು ನೋಡುವ ಸಮುದ್ರ, ನಾಳೆ ಬೆಳಗ್ಗೆ ಕಾಣುವ ಸಮುದ್ರ ದೃಷ್ಟಿಗೋಚರಕ್ಕೆ ಒಂದೇ ರೀತಿ ಕಂಡರೂ, ಅದರೊಳಗೆ ನಡೆಯುವ ಮಂಥನ ನಮ್ಮ ಗಮನಕ್ಕೆ ಬರುವುದೇ ಇಲ್ಲ...' ಎನ್ನು ವ ಸಾಲುಗಳಲ್ಲಿ ಕಡಲಿನ ಒಳಮರ್ಮವನ್ನು ಅರಿತುಕೊಂಡು ವಿಶ್ಲೇಷಣೆಗೆ ಒಡ್ಡುವ ಪರಿ ನಿಜಕ್ಕೂ ಮಾರ್ಮಿಕವಾದದ್ದು. ಮೀನುಗಾರಿಕೆಯಲ್ಲಿ ಬಲೆಯ ಪಾತ್ರದ ಮಹತ್ತ್ವವನ್ನು ತಿಳಿಸುತ್ತ, ಯಾವ ನೂಲಿನ ಬಲೆಯಿಂದ ಯಾವ ಮೀನು ಹಿಡಿಯಬಹುದು ಎಂಬ ಅರಿವಿರಬೇಕು; ಬಲೆಯ ಬಣ್ಣದಿಂದ ಅಗುವ ತೊಂದರೆಗಳು ಬಲೆಯ ಕಣ್ಣಿನ ಅಗಲ, ಹರಿದ ಬಲೆಯನ್ನು ರಿಪೇರಿ ಮಾಡುವ ಸಾಮರ್ಥ್ಯ, ಬಲೆಯ ವಿಧಾನಗಳು, ಬಲೆ ಬೀಸುವ ಸಾಮರ್ಥ್ಯ ಎಲ್ಲವೂ ಇದ್ದರೆ ಮಾತ್ರ ಆತ ಬೀಸುವ ಬಲೆಗೆ ಮೀನು ಸಿಗುವುದು; ಇಲ್ಲದಿದ್ದರೆ ಬಲೆಯೂ ಖಾಲಿ, ಹೊಟ್ಟೆಯೂ ಖಾಲಿ ಎನ್ನುವಲ್ಲಿ ಮೀನುಗಾರಿಕೆಯನ್ನು ಆಶ್ರಯಿಸಿದವರ ಬದುಕಿನ ಸಂಕಷ್ಟಗಳನ್ನು ತೆರೆದಿಡುತ್ತ, ಅವಲ್ಲಿರಬೇಕಾದ ಜ್ಞಾನ ಕೌಶಲಗಳ ಕುರಿತಾಗಿ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ. ಇಂತಹ ಮೌಲಿಕ ಅಂಕಣಗಳ ಹಕ್ಕುದಾರರಾದ ಬಹುಮುಖ ಪ್ರತಿಭೆಯ ನಾಗರಾಜ ಖಾರ್ವಿಯವರ ಭವಿಷ್ಯದ ಬದುಕು ಸದಾ ಕ್ರಿಯಾಶೀಲವಾಗಿರಲಿ. ಇನ್ನಷ್ಟು ಉಜ್ವಲವಾಗಿ ಪ್ರಕಟಗೊಳ್ಳಲಿ ಎಂದು ಮನಸಾರೆ ಹಾರೈಸುವೆ.
ಡಾ. ರಾಜೇಂದ್ರ ಎಸ್ ನಾಯಕ್ (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹101.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.