ಬಾಳಿಗೊಂದು ನಂಬಿಕೆ
ಲೇಖಕರು: ಡಿ ವಿ ಜಿ
₹125.00
ಲಭ್ಯವಿದೆ
ಪುಸ್ತಕದ ಬಗ್ಗೆ
ನನ್ನ ಸ್ವಂತ ನಂಬಿಕೆಯನ್ನು ಒಂದು ಪ್ರಬಂಧದಲ್ಲಿ ಸಮಗ್ರವಾಗಿಯೂ ಕಾರಣ ಮಿವರಣೆಯೊಡನೆಯೂ ರೂಪಗೊಳಿಸಬೇಕೆಂಬ ಆಲೋಚನೆ ಬಹುದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆ ಕೆಲಸವನ್ನು ಈ ಸಣ್ಣ ಪುಸ್ತಕದಲ್ಲಿ ತಕ್ಕಮಟ್ಟಿಗೆ ಪ್ರಯತ್ನಿಸಿದೆ.
ನಮ್ಮ ಬದುಕು ಚೆನ್ನಾಗಿ ಸಾಗಿ, ಸಾರ್ಥಕವಾಗಬೇಕಾದರೆ ನಮಗೆ ಒಂದು ಒಳ್ಳೆಯ ಗುರಿಯ ತಿಳಿವಳಿಕೆಯೂ, ಆ ಗುರಿಯನ್ನು ಮುಟ್ಟಿಸಬಲ್ಲ ದಾರಿಯ ತಿಳಿವಳಿಕೆಯೂ ಇರಬೇಕು. ಅಂಥ ಜೀವನಯಾತ್ರೆಯ ನಕಾಶೆಯೊಂದನ್ನು ಗುರುತು ಮಾಡಲು ಈ ಲೇಖನದಲ್ಲಿ ಯತ್ನಿಸಿದೆ.
ಅದು ಸುಲಭಸಾಧ್ಯವಾದ ಯೋಚನೆಯಲ್ಲ; ನಮ್ಮ ಪುರಾತನ ಮಹನೀಯರು ನಮಗೆ ತಕ್ಕ ಗುರಿಗೊತ್ತುಗಳನ್ನು ತಿಳಿಸಿಕೊಟ್ಟಿದ್ದಾರೆ ಎಂಬುದು ದಿಟ. ಆದರೆ ಈ ಹೊತ್ತು ಲೋಕ ಹೇಗಿದೆ? ಹತ್ತಾರು ಹೊಸಹೊಸ ಶಾಸ್ತ್ರಗಳೂ, ಹೊಸಹೊಸ ಮತಗಳೂ ತಲೆಯೆತ್ತಿ, ಹತ್ತಾರು ದಿಕ್ಕುಗಳಿಗೆ ನಮ್ಮ ಬುದ್ಧಿ ಮನಸ್ಸುಗಳನ್ನು ಸೆಳೆದಾಡಿ, ಹಳೆಯ ನಿಶ್ಚಯವನ್ನು ಹೋಗಲಾಡಿಸಿ, ಹೊಸ ಸಂದೇಹ ಸಂಕ್ಷೋಭೆಗಳನ್ನು ಹರಡಿವೆ. ಈ ಹೊಸ ವಿಜ್ಙಾನ ವಿಕ್ಷಿಪ್ತವಾದ ವಾತಾವರಣದಲ್ಲಿ ನಾವು ನಾವು ನಮ್ಮ ಜೀವನ ಸಮಸ್ಯಗಳನ್ನು ಪುನರ್ವಿಚಾರದಿಂದ ವಿಮರ್ಶೆ ಮಾಡಬೇಕಾಗಿದೆ.
ಇದು ಪಂಡಿತರಿಗಾಗಿ ಬರೆದ ಗ್ರಂಥವಲ್ಲ. ದೇಶದಲ್ಲಿ ಬಹುಮಂದಿಯಾದ ಅತಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆದ ಬರವಣಿಗೆ ಇದು.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹125.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.