ಮಣ್ಣು ಅದೇ ಅಸಲೀ ಹೊನ್ನು
ಲೇಖಕರು: ನಾಗೇಶ ಹೆಗಡೆ
₹40.00
ಲಭ್ಯವಿದೆ
ಪುಸ್ತಕದ ಬಗ್ಗೆ
ನಿಮಗಿದು ಗೊತ್ತೆ? ಇಡೀ ಭೂಮಿಯ ಮೇಲಿರುವ ಜನಸಂಖ್ಯೆಗಿಂತ ಒಂದು ಚಮಚೆಯಷ್ಟು ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳ ಸಂಖ್ಯೆ ಜಾಸ್ತಿ ಇರುತ್ತದೆ. ಅವೆಲ್ಲ ಸೂಕ್ಷ್ಮಜೀವಿಗಳು ಬದುಕಿದ್ದರೆ ಮಾತ್ರ ನಾವೂ ಬದುಕಿರುತ್ತೇವೆ. ಏಕೆಂದರೆ ಆರೋಗ್ಯವಂತ ಮಣ್ಣಿನಲ್ಲಿ ಮಾತ್ರ ನಮ್ಮ ಹೊಟ್ಟೆ ತುಂಬಿಸುವ ಆಹಾರ ಬೆಳೆಯುತ್ತದೆ; ನಮ್ಮ ಜೀವದ್ರವ ಎನಿಸಿದ ನೀರು ಶುದ್ಧವಾಗಿರುತ್ತದೆ.
ಮನುಷ್ಯನಿಂದಾಗಿ ಅತ್ಯಂತ ಜಾಸ್ತಿ ಪೆಟ್ಟು ತಿನ್ನುವ ವಸ್ತುವೆಂದರೆ ಮಣ್ಣು. ಅದನ್ನು ನಾವು ಅಗೆಯುತ್ತೇವೆ, ಕೊಚ್ಚುತ್ತೇವೆ, ಗೀರುತ್ತೇವೆ, ತೋಡುತ್ತೇವೆ, ತಳ್ಳುತ್ತೇವೆ, ಸುಡುತ್ತೇವೆ, ಗಣಿಗಾರಿಕೆ ಮಾಡುತ್ತೇವೆ. ಅದರ ಮೇಲೆ ಕಸ ಸುರಿಯುತ್ತೇವೆ, ಬಿಸಿ ಸುರಿಯುತ್ತೇವೆ, ವಿಕಿರಣ ಸುರಿಯುತ್ತೇವೆ, ವಿಷ ತುಂಬುತ್ತೇವೆ! ಆದರೆ ಮಣ್ಣಿಗೆ ಜೀವ ತುಂಬುವವರು ಮಾತ್ರ ತೀರ ಕಡಿಮೆ.
ಮಣ್ಣಿನ ಬಗೆಗಿನ ತಿಳುವಳಿಕೆಯನ್ನು ಅಚ್ಚುಕಟ್ಟಾಗಿ ಈ ಸಂಕಲನದಲ್ಲಿ ವಿವರಿಸಲಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹40.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.