ಮುಖಪುಟ / ಪುಸ್ತಕ ಸಂಪದ / ಸುಜಾತ
ಸುಜಾತ

ಸುಜಾತ

ಲೇಖಕರು: ಪ್ರೇಮಾ ಭಟ್

₹130.00 ₹165.00 21% ರಿಯಾಯಿತಿ ಲಭ್ಯವಿದೆ
₹೩೫ ಉಳಿತಾಯ (21% ರಿಯಾಯಿತಿ)

ಪುಸ್ತಕದ ಬಗ್ಗೆ

‘ಬೆಕ್ಕಿನ ಕಣ್ಣು’ ಎಂಬ ಹೆಸರಿನಲ್ಲಿ ಚಲನಚಿತ್ರವಾದ ಕಾದಂಬರಿ - ಸುಜಾತ ಪುಸ್ತಕದ ಬೆನ್ನುಡಿಯಲ್ಲಿ ಕಂಡದ್ದು… "ಅದಾವ ಪ್ರೇತ ನನ್ನ ಮುಂದೆ ಬರಲಿ ನೋಡಿಯೇಬಿಡುತ್ತೇನೆ." ಮನೆಯೆಲ್ಲ ಪ್ರತಿಧ್ವನಿಸುವಂತೆ ಕೂಗು ಹಾಕಿ ಧೈರ್ಯವಾಗಿದ್ದೇನೆ ಎಂದು ಪ್ರೇತಕ್ಕೆ ಹೇಳುವ ದಾಟಿಯಲ್ಲಿ ಕೂಗಿಕೊಂಡಿದ್ದ. ಮಾವನ ಈ ಕೂಗಿಗೆ ಒಂದು ಕ್ಷಣ ಪ್ರಮೋದೆಯೂ ಬೆಚ್ಚಿದಳು. ಸುಶೀಲೆ ಬಹಳ ಆತುರಪಡುತ್ತಿದ್ದಾಳೆ ಎನಿಸಿತು. ಇಷ್ಟೆಲ್ಲ ಕೆಲಸವನ್ನು ಹೇಳಿದ ದಿನವೇ ಮಾಡುತ್ತಾಳೆಂದು ಭಾವಿಸಿರಲಿಲ್ಲ ಪ್ರಮೋದೆ. ಹುಚ್ಚು ಹುಡುಗಿ ಎಷ್ಟು ಆತುರ ಅವಳಿಗೆ ಎಲ್ಲಿಯಾದರೂ ಮಾವನಿಗೆ ಅನುಮಾನ ಬಂತೆ? ಎಂದು ವಿಚಾರ ಮಾಡಿದಳು. ಎಲ್ಲಿಯಾದರೂ ಮಾವನಿಗೆ ಗೊತ್ತಾಗಿಬಿಟ್ಟರೆ ನನ್ನ ಗತಿ ಏನು? ಒಂದೇ ಕ್ಷಣ ಹೆದರಿದ್ದು ಪ್ರಮೋದೆ ಮತ್ತೆ ತನಗೆ ತಾನೇ ಧೈರ್ಯ ತಂದುಕೊಂಡಳು. 'ಹಾಗೊಂದು ವೇಳೆ ಗೊತ್ತಾದರೆ ಕೊಲ್ಲುವುದಕ್ಕಿಂತ ಹೆಚ್ಚಿನದನ್ನು ಏನನ್ನು ತಾನೆ ಮಾಡುತ್ತಾನೆ ಮಾವ? ಸುಮ್ಮನೆ ಇದ್ದರೂ ಕೊಲ್ಲುವುದೇ ಸೈ ಅದಕ್ಕಿಂತ ಪ್ರಯತ್ನಿಸಿ ದಾರಿಗೆ ತರುವುದು ಹೇಗೆ? ಹ್ಯಾಗೂ ಸಾಯುವುದು ಖಂಡಿತವೆಂದಾದ ಮೇಲೆ ಪ್ರಯತ್ನ ಮಾಡಲಿಕ್ಕೆ ಏನು ಅಂಜಿಕೆ? ಮನೆಯಲ್ಲಿ ಕಾವೇರಿ ಚೆನ್ನಾಗಿ ಹೆದರಿದ್ದಾಳೆಂದು ಅರ್ಥವಾಗಿತ್ತು.”
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹130.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?