ನಮ್ಮ ಊರಿನ ರಸಿಕರು
ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
₹145.00
ದಾಸ್ತಾನು ಖಾಲಿ
ಪುಸ್ತಕದ ಬಗ್ಗೆ
ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ-ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ-ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ. ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ; ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.
ಮತ್ತೆ ಲಭ್ಯವಾದಾಗ ನಿಮಗೆ ಇಮೇಲ್ ಮೂಲಕ ತಿಳಿಸುತ್ತೇವೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.