ಬೆಸ್ತರ ಕರಿಯ
ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
₹115.00
ಲಭ್ಯವಿದೆ
ಪುಸ್ತಕದ ಬಗ್ಗೆ
ಈ ಪುಸ್ತಕದಲ್ಲಿ ಪ್ರಕಟವಾಗಿರುವ ಚಿತ್ರಗಳು ಈಗಾಗಲೇ ಕರ್ನಾಟಕ, 'ಜೀವನ' 'ಪೌರವಾಣಿ'ಯ ವಾರ್ಷಿಕ ಸಂಚಿಕೆ-ಇವುಗಳಲ್ಲಿ ಪ್ರಕಟವಾಗಿದ್ದವು. ಅವುಗಳ ಸಂಪಾದಕರಿಗೆ ಕೃತಜ್ಞನಾಗಿದ್ದೇನೆ. ಕೊನೆಯ ಎರಡು ಚಿತ್ರಗಳು ಅಚ್ಚಾಗುತ್ತಿರುವುದು ಇದೇ ಮೊದಲು.
ಈ ಚಿತ್ರಗಳನ್ನು ಕುರಿತು ಒಂದು ಮಾತು; ಇಂದಿನ ಸ್ಥಿತಿಯನ್ನು ವರ್ಣಿಸುವ “ಶಾನುಭಾಗನ ಸಾವು" "ಪಟ್ ಪಿಶಾಚ" "ರಂಗನ ಭೂತ", "ಅನ್ನದಾನಿ" ಇವುಗಳಲ್ಲಿಯ ಪಾತ್ರಗಳು ನಮ್ಮ ಜನ ಜೀವನಕ್ಕೆ ಸಂಬಂಧಿಸಿದುವಾದರೂ ಯಾವ ಒಬ್ಬ ವ್ಯಕ್ತಿಯನ್ನೂ ಕುರಿತು ಬರೆದವಲ್ಲ. ಇವುಗಳನ್ನು ಯಾವುದಾದರೂ ಒಂದು ವ್ಯಕ್ತಿಗೆ ಗಂಟುಹಾಕಲು ವಾಚಕರು ಪ್ರಯತ್ನಿಸುವುದು ಅಸಮಂಜಸ. “ನಮ್ಮ ಎಮ್ಮೆಗೆ ಮಾತು ತಿಳಿಯುವುದೇ' ಎಂಬ ಪ್ರಬಂಧದಲ್ಲಿ ನನ್ನ ಹೆಂಡತಿಯ ಸೀರೆಯನ್ನು ನಾನು ಉಟ್ಟುಕೊಂಡಿದ್ದೆ ಎಂಬ ಮಾತಿನಲ್ಲಿ ಎಷ್ಟು ಸತ್ಯ ಅಥವ ಅಸತ್ಯ ಇದೆಯೋ ಈ ಪ್ರಬಂಧದ ವ್ಯಕ್ತಿಗಳೂ ಹಾಗೆಯೇ ತಮಗೆ ಗುರುತಿರುವ ಶಾನುಭಾಗನನ್ನೋ, ಜಿಲ್ಲಾಧಿಕಾರಿಯನ್ನೋ, ಕಾಳಸಂತೆಯಲ್ಲಿ ದುಡ್ಡು ಮಾಡಿದ ಅನ್ನದಾನಿಯನ್ನೋ ಇಲ್ಲಿಯ ಪಾತ್ರಗಳಿಗೆ ಹೊಂದಿಸಲು ಪ್ರಯತ್ನಿಸುವುದು ಶುದ್ಧ ಅನ್ಯಾಯ. ಜಪ, ತಪ, ಅನುಷ್ಠಾನ ಎಂಬುದು ಒಂದು ತಮಿಳು ಪ್ರಬಂಧದ ತಲೆಬರಹ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹115.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.