ಸೋಲುತ್ತಿದೆ ಸಹ್ಯಾದ್ರಿ
ಲೇಖಕರು: ಅಖಿಲೇಶ್ ಚಿಪ್ಪಳಿ
ಪ್ರಕಾಶಕರು: ಭೂಮಿ ಬುಕ್ಸ್
₹150.00
ಲಭ್ಯವಿದೆ
ಪುಸ್ತಕದ ಬಗ್ಗೆ
12 ಕೋಟಿ ವರ್ಷಗಳಿಂದ ಕೋಟ್ಯಂತರ ಜೀವಿಗಳಿಗೆ ಆಸರೆ ಕೊಟ್ಟು ಜಪ್ಪೆನ್ನದೆ ನಿಂತ ಸಹ್ಯಾದ್ರಿ (ಪಶ್ಚಿಮಘಟ್ಟ) ಪರ್ವತಮಾಲೆಗೆ ಈಗ ನಮ್ಮಿಂದಾಗಿ ಸಂಕಟಗಳ ಸರಮಾಲೆ ಎದುರಾಗಿದೆ.
ಒಂದೆಡೆ ಸಾಲುಸಾಲು ಸರ್ಕಾರಿ ಅಭಿವೃದ್ಧಿ ಯೋಜನೆಗಳು, ಇನ್ನೊಂದೆಡೆ ಲಾಭಕೋರ ಉದ್ಯಮಗಳು; ಜೊತೆಗೆ ಖಾಸಗಿಯವರ ಎಗ್ಗಿಲ್ಲದ ಲಗ್ಗೆಗಳು. ಸಾಲದ್ದಕ್ಕೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮೇಘಸ್ಫೋಟ, ಚಂಡಮಾರುತ, ಬರಗಾಲ, ಭೂಕುಸಿತ. ಕಳೆದ ಐದು ವರ್ಷಗಳಲ್ಲಿ 5000ಕ್ಕೂ ಹೆಚ್ಚು ಕಡೆ ಭೂಕುಸಿತಗಳಾಗಿವೆ. ಶಿಥಿಲ ಶಿಲಾಸ್ತರಗಳಿಗೆ ಅಭಿವೃದ್ಧಿಯ ಕೀಲೆಣ್ಣೆ ಸುರಿಯುತ್ತಿದ್ದೇವೆ.
ತತ್ತರಿಸುತ್ತಿರುವ ಜೀವಲೋಕದ ಮೌನ ಆಕ್ರಂದನಗಳನ್ನು ಅಕ್ಷರಗಳ ಶಂಖನಾದದ ಮೂಲಕ ಇಲ್ಲಿ ಹೊಮ್ಮಿಸಿದ್ದಾರೆ ಅಖಿಲೇಶ್ ಚಿಪ್ಪಳಿ. ಸಹ್ಯಾದ್ರಿಯ ಮಡಿಲಿನಿಂದ ಬಂದ ಈ ಎಚ್ಚರಿಕೆಯ ದನಿ ನಮಗೆಲ್ಲ ಕೇಳಿಸಬೇಕು. ಸೋಲಬಾರದು ಸಹ್ಯಾದ್ರಿ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹150.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.