ಮುಖಪುಟ / ಪುಸ್ತಕ ಸಂಪದ / ಮಾಟ-ಮಂತ್ರ-ತಂತ್ರ: ಒಂದು ಅಧ್ಯಯನ
ಮಾಟ-ಮಂತ್ರ-ತಂತ್ರ: ಒಂದು ಅಧ್ಯಯನ

ಮಾಟ-ಮಂತ್ರ-ತಂತ್ರ: ಒಂದು ಅಧ್ಯಯನ

ಲೇಖಕರು: ಡಾ. ಪೂರ್ಣಿಮಾ ಭಟ್ ಕೆ.

₹490.00 ಲಭ್ಯವಿದೆ

ಪುಸ್ತಕದ ಬಗ್ಗೆ

ಶ್ರೀಮತಿ ಪೂರ್ಣಿಮಾ ಭಟ್ ಅವರು ಪಿಎಚ್.ಡಿ. ಪದವಿಗಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ "ಮಾಟ-ಮಂತ್ರ-ತಂತ್ರ" ಕುರಿತ ಪ್ರಬಂಧವು ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಬೆಲೆಯುಳ್ಳ ಹೊಸ ಸೇರ್ಪಡೆ ಮಾಡಿದೆ. ಕರ್ನಾಟಕದಲ್ಲಿ ಈವರೆಗೆ ಈ ವಿಷಯ ಕುರಿತಂತೆ ಅಧ್ಯಯನವಾಗಲಿ, ಗಮನಾರ್ಹ ಬರಹಗಳಾಗಲಿ ಬಂದಿರಲಿಲ್ಲ. ಯಾಕೆಂದರೆ ಬಹುಶಃ ಅತ್ಯಂತ ಜಟಿಲ ಹಾಗೂ ಅನೇಕ ಸಂದಿಗ್ಧತೆಗಳನ್ನು ಕೂಡಿಕೊಂಡಿರುವ ವಿಷಯ ಎಂಬ ಕಾರಣವಿರಬಹುದು. ಈ ಹರಸಾಹಸಕ್ಕೆ ತೊಡಗಿದವರು ಶ್ರೀಮತಿ ಕೆ. ಪೂರ್ಣಿಮಾ ಭಟ್ ಅವರು. ಸ್ನಾತಕೋತ್ತರ ಎಂ.ಎ. ಕನ್ನಡ ಪದವೀಧರರಾದ ಇವರು ಆಯುರ್ವೇದದಲ್ಲಿ ಪದವಿ ಪಡೆದು ಸುದೀರ್ಘ ಕಾಲ ವೈದ್ಯಕೀಯ ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಾಗಿರುದರಿಂದ. 'ಮಾಟ-ಮಂತ್ರ-ತಂತ್ರ' ವಿಷಯದ ಅಧ್ಯಯನಕ್ಕೆ ಅರ್ಥಪೂರ್ಣವಾದ ಹಿನ್ನೆಲೆ ಒದಗಿಸಿರುವುದೇ ಪ್ರಸ್ತುತ ಪ್ರಬಂಧದ ಗುರುತ್ವಕ್ಕೆ ಕಾರಣವಾಗಿದೆ. ವ್ಯಾಪಕವಾದ ಕ್ಷೇತ್ರಕಾರ್ಯದಿಂದಾಗಿ ಮಹತ್ವದ ವಿಷಯ ಸಂಗ್ರಹದ ದಾಖಲಾತಿ-ಈ ಪ್ರಬಂಧದ ವೈಶಿಷ್ಟ್ಯವೂ ಹೌದು. ವಿಷಯ ಸಂಗ್ರಹ- ವರ್ಗೀಕರಣ-ವಿಶ್ಲೇಷಣೆ ವಿವೇಚನೆಯಲ್ಲಿ ಸಂದರ್ಭ ಸಿದ್ಧಾಂತ-ಅನ್ವಯಿಕ ವಿಮರ್ಶಾ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದು ಮಹತ್ವದ್ದಾಗಿದೆ. ಈಗಾಗಲೇ ಆಯುರ್ವೇದದಲ್ಲಿ ಬರುವ ಕಾಯಿಲೆ ನಂಬಿಕೆಗಳನ್ನು ಕುರಿತು ಅನೇಕ ಗ್ರಂಥಗಳನ್ನು ಪ್ರಕಟಿಸಿರುವ ಶ್ರೀಮತಿ ಪೂರ್ಣಿಮಾ ಭಟ್ ಅವರಿಗೆ 'ಮಾಟ- ಮಂತ್ರ-ತಂತ್ರ' ವಿಷಯದಲ್ಲೂ ಭಾಷೆ ತೊಡಕಾಗಿಲ್ಲ. ಬರವಣಿಗೆಯ ಅಚ್ಚುಕಟ್ಟುತನ ವಿಷಯ ನಿರೂಪಣೆಯ ರೀತಿ ಔಚಿತ್ಯಪೂರ್ಣವಾಗಿದೆ. ಒಟ್ಟಾರೆ ಈ ಪ್ರಬಂಧವು ಪಿಎಚ್.ಡಿ ಪದವಿಗೆ ಅರ್ಹವಾಗಿದ್ದು-ಜಾನಪದ ಕ್ಷೇತ್ರಕ್ಕೆ ಉತ್ತಮ ಕೊಡುಗೆಯೂ ಆಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹490.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?