ಶಕುನದ ಹಕ್ಕಿ (ಕಾದಂಬರಿ)
ಲೇಖಕರು: ಹೇಮಂತ್ ಪಾರೇರಾ (ಹೇಮಂತ್ ಕುಮಾರ್ ಪಿ.ಸಿ.)
₹400.00
ಲಭ್ಯವಿದೆ
ಪುಸ್ತಕದ ಬಗ್ಗೆ
ಶಕುನದ ಹಕ್ಕಿ" ಕಾದಂಬರಿಯ ಕರ್ತೃವಾದ ಹೇಮಂತ್ ಪಾರೇರಾರವರು ಕೊಡಗಿನ ಕಾಡಂಚಿನಲ್ಲಿರುವ ಕ್ರಿಯಾಶೀಲ ಮನುಷ್ಯ. ಪುಟ್ಟದಾದ ಕಾಫಿ ತೋಟದ ನಡುವಿನಿಂದ ಎದ್ದು ಬರುತ್ತಿರುವ ಪ್ರತಿಭೆ. ನಿಸರ್ಗದ ಮಡಿಲಿನಲ್ಲಿ ಬೆಳೆದ ಕಾರಣ ಅವರ ಬರಹಗಳಲ್ಲಿ ನಿಸರ್ಗದ ದಟ್ಟ ಪ್ರಭಾವವನ್ನು ಕಾಣಬಹುದು. ಈ ಕಾದಂಬರಿಯೂ ನಿಸರ್ಗದ ಮಡಿಲಿನಲ್ಲಿ ಜನ್ಮ ತಾಳಿದೆ. ನಗರವಾಸಿ ಓದುಗರಿಗೆ ಹೊಸ ಪರಿಸರದ ಪರಿಚಯವನ್ನು ಈ ಪುಸ್ತಕ ನೀಡಬಹುದು. ಲೇಖಕರು ಕವಿಯೂ ಆಗಿರುವ ಕಾರಣ ಅಲ್ಲಲ್ಲಿ ಕಾವ್ಯ ಛಾಯ ಕಂಡುಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
"ಮೌನಮುರಿದ ಕನವರಿಕೆಗಳು", "ಒಲವಿನ ಸವಾರಿ", "ಬೆಳ್ಳಿ ಗೆಜ್ಜೆ" ಕೃತಿಗಳ ಮೂಲಕ ಓದುಗರ ಮನಸ್ಸಿಗೆ ಹತ್ತಿರವಾದ ಲೇಖಕರು.ಮನುಷ್ಯ ಸಂಬಂಧಗಳ ಆಳ ಮತ್ತು ಸಮಾಜದ ನೈಜ ಚಿತ್ರಣವನ್ನು ತಮ್ಮ ಬರಹಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.
ಹಳ್ಳಿಗಳಲ್ಲಿ ಸಮಯ ಕೊಲ್ಲಲು ಹಲವು ಹವ್ಯಾಸಗಳನ್ನು ಜನರು ಹೊಂದಿರುತ್ತಾರೆ. ಹವ್ಯಾಸಗಳು ಅತಿರೇಕಕ್ಕೆ ಹೋದಾಗ ಏನೇನು ಅನಾಹುತಗಳಾಗಬಹುದು ಎನ್ನುವುದನ್ನು ಲೇಖಕರು ಚಿತ್ರಿಸಿದ್ದಾರೆ. ಹೊರನೋಟಕ್ಕೆ ಕಾದಂಬರಿಯ ಘಟನೆಗಳು ಸಣ್ಣವು ಎಂದು ಅನಿಸಿದರೂ ಕೂಡ ಅಂತಿಮವಾಗಿ ತಲುಪುವ ಜಾಗವಿದೆಯಲ್ಲ, ಅದು ಬೆಚ್ಚಿ ಬೆಳೆಸುವಂತದ್ದು. ಸಣ್ಣ ಸಣ್ಣ ಘಟನೆಗಳ ಎಳೆಯನ್ನು ಒಟ್ಟು ಮಾಡಿ ನೋಡಿದಾಗ ಅಲ್ಲೊಂದು ಆಶ್ಚರ್ಯ ಮತ್ತು ಭಯದ ಚಿಹ್ನೆ ಹುಟ್ಟುತ್ತದೆ. ವಿದ್ಯಾವಂತ ಕೃಷಿಕರ ಬದುಕಿನ ಹಲವು ಮಜಲುಗಳನ್ನು ಈ ಪುಸ್ತಕ ಸ್ವಾರಸ್ಯಕರವಾಗಿ ತೋರಿಸಿಕೊಡುತ್ತದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹400.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.