ದಿ. 4/5/2026ರಂದು ನನ್ನ ಹಿರಿಯ ಸಹೋದರಾದ ಸುರೇಶ್ ನಾಡಿಗ್ ರೊಡನೆ ದಂಪತಿಗಳ ಸಮೇತ ಬೆಂಗಳೂರು ಇಂದ ವಂದೇ ಭಾರತ್ ರೈಲಿನಲ್ಲಿ ಗುರುವಾಯೂರು ಪ್ರವಾಸ ಕೈಗೊಂಡೆವು. ವಂದೇ ಭಾರತ್ ರೈಲು ಬೆಂಗಳೂರು ಕೆಂಪೇಗೌಡ ರೈಲು ನಿಲ್ದಾಣವನ್ನು ಬೆಳಿಗ್ಗೆ 5.10ಕ್ಕೆ ಹೊರಟು ತ್ರಿಶ್ಶೂರ್ ಗೆ ಮಧ್ಯಾಹ್ನ 12.20ಕ್ಕೆ ಬಂದು ತಲುಪಿತು.
ವಂದೇಭಾರತ್ ರೈಲು ಹೊರಡುತ್ತಿದ್ದ ಹಾಗೆ ಪ್ರತಿಯೊಬ್ಬರಿಗೂ 1ಲೀ ಕುಡಿಯುವ ನೀರಿನ ಬಾಟಲ್ ಕೊಡುತ್ತಾರೆ. 6.00ಗಂಟೆಗೆ ಬಿಸಿ ಬಿಸಿ ಕಾಫಿ / ಟೀ ಕೊಡುತ್ತಾರೆ. ರೈಲು ಕೋಚ್ ಬಹಳ ಸ್ವಚ್ಛ ಹಾಗೂ ಟಾಯ್ಲೆಟ್ ಗಳನ್ನು ಸ್ವಚ್ಛಗೊಳಿಸಲು ಅದಕ್ಕಾಗಿ ಒಬ್ಬ ವ್ಯಕ್ತಿ ನೇಮಿಸಲಾಗಿರುತ್ತದೆ. 7.00ಗಂಟೆ ಬೆಳಗಿನ ಉಪಾಹಾರದಲ್ಲಿ ಇಡ್ಲಿ, ವಡೆ ಮತ್ತು ಪೊಂಗಲ್ ನೀಡಲಾಗುವುದು. ತದನಂಥರ ಕಾಫೀ /ಟೀ ಕೊಡುತ್ತಾರೆ. ರೈಲು ನಿಲ್ದಾಣ ತ್ರಿಸ್ಸುರು ಇಂದ ಗುರುವಾಯೂರು ಸುಮಾರು 30 ಕಿ ಮೀ ದೂರ ಇದ್ದು, ಇಲ್ಲಿಂದ ಖಾಸಗಿ ಬಸ್, ಸರ್ಕಾರಿ ಬಸ್ ಇರುತ್ತದೆ. ನಾವು 4 ಜನ ಇದ್ದುದರಿಂದ ಒಂದು ಟ್ಯಾಕ್ಸಿ ಗೊತ್ತುಪಡಿಸಿ (ರೂ. 1500/-) ಗುರುವಾಯೂರುನಲ್ಲಿ ಹೋಟೆಲ್ ಗೋಕುಲ್ ಶಬರಿಯನ್ನು ತಲುಪಿದೆವು. ದಾರಿಯ ಮಧ್ಯ ಹೋಟೆಲ್ Pishorady (pure veg) ನಲ್ಲಿ ಊಟ ಮಾಡಿದ್ದೆವು.
ಹೋಟೆಲ್ ಗೋಕುಲ್ ಶಬರಿಯಲ್ಲಿ ಮಧ್ಯಾಹ್ನ 3.00ಗಂಟೆಗೆ ಕೋಣೆಗಳನ್ನು ನೀಡಲಾಗುತ್ತದೆ. ಈ ಹೋಟೆಲ್ ಸಂಪೂರ್ಣ AC ಯಿಂದ ಕೂಡಿರುತ್ತದೆ. ಈ ಹೋಟೆಲ್ ಬಾಡಿಗೆ ರೂ. 2,500/-ಗಳಾಗಿರುತ್ತದೆ. ಮೊದಲೇ ಕೋಣೆಗಳನ್ನು ಕಾಯ್ದಿರಿಸಿದ್ದೆವು. ಹೋಟೆಲ್ ಇಂದ ಗುರುವಾಯೂರು ದೇವಸ್ಥಾನಕ್ಕೆ ನಡೆದುಕೊಂಡು ಹೋಗಿ ಬರಬಹುದು.
ಗುರುವಾಯೂರು ಶ್ರೀ ಕೃಷ್ಣನನ್ನು ಹಿಂದೆ ಬೃಹಸ್ಪತಿ ಗುರುಗಳು ಮತ್ತು ವಾಯುದೇವರು ಪ್ರತಿಷ್ಟಾ ಪಿಸಿರುವುದರಿಂದ ಗುರುವಾಯೂರು ಎಂದು ಕರೆಯಲಾಗುತ್ತದೆ. ಇಲ್ಲಿಯ ವಿಶೇಷ ಶ್ರೀ ಕೃಷ್ಣನನ್ನು ತುಪ್ಪದ ದೀಪದ ಎದುರು ದರ್ಶನ ಮಾಡುವುದು ಒಂದು ವಿಶೇಷ. ಈ ದೇವಾಲಯ ಸುತ್ತಲೂ ಹಣತೆಯಲ್ಲಿ ತುಪ್ಪವನ್ನು ಹಾಕುತ್ತಾರೆ. ನಮ್ಮಲ್ಲಿ ಹಾಗೆ ಎಣ್ಣೆ ಉಪಯೋಗಿಸುವುದಿಲ್ಲ. ಇನ್ನೊಂದು ಮುಖ್ಯ ಸಂಗತಿ ಏನೆಂದರೆ ಇಲ್ಲಿ ಶ್ರೀ ಕೃಷ್ಣನಿಗೆ ಅಭಿಷೇಕ ಮಾಡಿದ ಎಣ್ಣೆ ಸಿಗುತ್ತದೆ. ಈ ಎಣ್ಣೆ ವಾತ ರೋಗಕ್ಕೆ ಔಷಧಿ.
ಇಲ್ಲಿ ಹಿರಿಯ ನಾಗರೀಕರಿಗೆ ಬೆಳಿಗ್ಗೆ 4.30 ಇಂದ 6.00 ಗಂಟೆ ಸಂಜೆ 4.30 ರಿಂದ 6.00 ಗಂಟೆಯವರೆಗೆ ಉಚಿತ ದರ್ಶನ ಇರುತ್ತದೆ. ಸರ್ವ ದರ್ಶನಕ್ಕೆ ಸುಮಾರು 4.00 ರಿಂದ 5.00 ತಾಸು ಕಾಯಬೇಕು. ರೂ. 1,000/-ಕ್ಕೆ Special ticket ನಲ್ಲಿ ಬೇಗ ದರ್ಶನವಾಗುತ್ತದೆ. ಜೊತೆಗೆ ದೇವಸ್ಥಾನದಲ್ಲಿ ಉಚಿತ ಊಟ ಇರುತ್ತದೆ. ಮುಖ್ಯವಾಗಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು ಹಾಗೂ ದಾರಿಯ ಮಧ್ಯೆ ಉಚಿತ ಮಜ್ಜಿಗೆ ಕೊಡುತ್ತಿರುತ್ತಾರೆ.
ನಾವುಗಳು online ನಲ್ಲಿ (https://guruvayurdevaswom.in) ಟಿಕೆಟ್ ತೆಗಿದಿದ್ದೆವು.
ಚಿತ್ರ: RanjithSiji (Wikimedia Commons)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!