3ನೇಯ ದಿನ ನಾವುಗಳು ಹೋಟೆಲ್ ನಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿ ಒಂದು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಗುರುವಾಯುರುನಿಂದ ಸುಮಾರು 30 ಕಿ.ಮೀ ದೂರ ಇರುವ ತ್ರಿಸ್ಸುರ್ ಗೆ ಪಯಣ.
ತ್ರಿಸ್ಸುರ್ ನಲ್ಲಿ ಈ ಕೆಳಕಂಡ ದೇವಾಲಯಗಳಿವೆ. ತಿರುವಂಬಾಡಿ ಶ್ರೀ ಕೃಷ್ಣ ದೇವಸ್ಥಾನ ( ಬೆಳಿಗ್ಗೆ 4.30 ರಿಂದ 11.00 ರವರೆಗೆ ಸಂಜೆ 4.30 ರಿಂದ 8.00ರವರೆಗೆ), Vadakkunatha Swamy (ಶಿವ), ಈ ದೇವಾಲಯ ಬಹಳಷ್ಟು ವಿಶಾಲವಾದ ಜಾಗದಲ್ಲಿ ಇದೆ, ಇಲ್ಲಿ ಅನೇಕ ದೇವಾಲಯ ಇದೆ. ಭಗವತಿ ಅಮ್ಮನವರ ದೇವಸ್ಥಾನ, Paramekkavu (ಭದ್ರಾಕಾಳಿ ) temple ಗಳನ್ನು ವೀಕ್ಷಿಸಿ ಗುರುವಾಯುರುಗೆ ಪಯಣ.
ಕೇರಳದಲ್ಲಿ ವಿಶೇಷ ತಿಂಡಿಗಳು :
APPAM (ಬಾಂಡ್ಲಿ ದೋಸೆ ), IDIYAPPAM (ಒತ್ತು ಶ್ಯಾವಿಗೆ), PANYARAM (ಪಡ್ಡು ಸ್ವೀಟ್ / ಖಾರ Spicy ), KOZHUKATTAI (ಹಬೆ ಕಡಬು ಸ್ವೀಟ್ / ಖಾರ ), PUTTU (ಕೊಬ್ಬರಿ ಇಡ್ಲಿ ) UPPUMAVU (ಉಪ್ಪಿಟ್ಟು). ಎಳೆಯಾಡ (ಕುಚ್ಚಿದ ಕಡುಬು)
ಸಂಜೆಯ ವೇಳೆ ನಮ್ಮಲ್ಲಿ ಹಾಗೆ ವೈವಿಧ್ಯಮಯವಾದ ತಿಂಡಿ ಇರುವುದಿಲ್ಲ. Snacks ಅಂದರೆ ನೇಂದ್ರ ಬಾಳೆಹಣ್ಣಿನ ಬೊಂಡ / ಎಳೆಯಾಡ ಜಾಸ್ತಿ, ಜೊತೆಗೆ ಎಲ್ಲಾ ಕಡೆ ದೋಸೆ.
ಸಂಜೆ ನಾವುಗಳು ಹಿರಿಯ ನಾಗರೀಕರ ದರ್ಶನಕ್ಕಾಗಿ ಮಧ್ಯಾಹ್ನ 2.30ಕ್ಕೆ ಸರದಿಯಲ್ಲಿ ಕುಳಿತುಕೊಂಡು 4.30ರ ದರ್ಶನ ಪಡದೆವು.
4ನೇಯ ದಿನ ನಮ್ಮ ಊರಿನ ಕಡೆ ಪಯಣ. ಮಧ್ಯಾಹ್ನ ತ್ರಿಸ್ಸುರು ರೈಲ್ವೆ ನಿಲ್ದಾಣದಿಂದ 3.20ಕ್ಕೆ ಏರ್ನಕುಲಂ - ಬೆಂಗಳೂರು ವಂದೇ ಭಾರತ್ ರೈಲುನಲ್ಲಿ ಹೊರಟೆವು. ರೈಲುನಲ್ಲಿ ನಮ್ಮ ಸೀಟ್ ನಲ್ಲಿ ಕುಳಿತ ಕೂಡಲೇ ವಾಟರ್ ಬಾಟಲ್ ಕೊಟ್ಟು, ನಂತರ snacks. (ಅದರಲ್ಲಿ ಒಂದು ಆಂಬೊಡೆ, ಚಿಪ್ಸ್, ಚಿಕ್ಕಿ ಜೊತೆಗೆ ಕಾಫಿ /ಟೀ.)
ರಾತ್ರಿ 7.00ರ ಸುಮಾರುಗೆ ಊಟ, ನಂತರ ಐಸ್ಕ್ರೀಂ. ರಾತ್ರಿ 11.00ಕ್ಕೆ ಬೆಂಗಳೂರು ಕೇಂದ್ರೀಯ ನಿಲ್ದಾಣ.
(ದಯವಿಟ್ಟು ಅಕ್ಷರದಲ್ಲಿ ತಪ್ಪಿದ್ದರೆ ಕ್ಷಮಿಸಿ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!