ಗುರುವಾಯೂರಿನಲ್ಲಿ ಶ್ರೀ ಕೃಷ್ಣನಿಗೆ ಗುರುವಾಯೂರಪ್ಪನ್ ಎಂದು ಕರೆಯುತ್ತಾರೆ. ನಾವುಗಳು ದಿ. 5/5/2026ರಂದು ಗುರುವಾಯೂರಪ್ಪನ್ ದರ್ಶನಕ್ಕೆ ಬೆಳಿಗ್ಗೆ 9.30ರ ವಿಶೇಷ ದರ್ಶನ ಟಿಕೆಟ್ online ನಲ್ಲಿ ಮೊದಲೇ ಪಡೆದಿದ್ದರಿಂದ ಬೆಳಿಗ್ಗೆ 9.00ಗಂಟೆಗೆ ಗೋಪುರಂ ಗೇಟ್ ಬಳಿ ಹೋಗಿ ತಪಾಸಣೆಯು ನಂತರ ಸರದಿಯಲ್ಲಿ ದರ್ಶನ ಪಡೆದು, ಪ್ರಸಾದ ತೆಗೆದುಕೊಂಡು ಹೊರಗಡೆ ಬಂದೆವು. ಅಲ್ಲಿಯ ತಾಪಮಾಣ ಜಾಸ್ತಿಯಾದ ಕಾರಣ ಹೊರಗೆ ಕಾಲಿಡುವುದೇ ಕಷ್ಟ.
ಮುಖ್ಯವಾಗಿ, 16ನೇ ಶತಮಾನದಲ್ಲಿ ನಾರಾಯಣ ಭಟ್ಟತಿರಿ ಎಂಬ ವಿದ್ವಾಂಸರಿದ್ದರು. ಅವರ ಗುರುಗಳು ವಾತ ರೋಗದಿಂದ ನರಳುತ್ತಿದ್ದರು. ಗುರುಗಳು ಪಡುತ್ತಿರುವ ಸಂಕಟವನ್ನು ನೋಡಲಾರದೇ ತಾವೇ ವಾತ ರೋಗವನ್ನು ಪಡೆಯುತ್ತಾರೆ. ಆಗ ಅವರ ಗುರುಗಳು ನಾರಾಯಣ ಭಟ್ಟತಿರಿಯವರಿಗೆ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಭಾಗವತವನ್ನು ಬರೆಯ ಬೇಕೆಂದು, ಇದರಿಂದ ವಾತ ರೋಗದಿಂದ ಮುಕ್ತಿ ಪಡೆಯಬಹುದು ಎಂದು ತಿಳಿಸುತ್ತಾರೆ. ಅಂತೆಯೇ ನಾರಾಯಣ ಭಟ್ಟತಿರಿ ಯವರು ಭಾಗವತವನ್ನು ಬರೆಯುತ್ತಾರೆ. ಅವರು ಬರೆದ ಭಾಗವತಕ್ಕೆ "ನಾರಾಯಣೀಯಂ" ಭಾಗವತವೆಂದು, ಅವರು ಬರೆದ ಸ್ಥಳವು ಗುರುವಾಯೂರು ಶ್ರೀ ಕೃಷ್ಣನ ದರ್ಶಕ್ಕೆ ಹೋಗುವ ಸ್ಥಳದ ಎಡಭಾಗದಲ್ಲಿ ವಿವರವಾದ ಮಾಹಿತಿ ಫಲಕ ಇದೆ. ಗುರುವಾಯೂರು ಭೇಟಿಕೊಟ್ಟಾಗ ಈ ಸ್ಥಳವನ್ನು ನೋಡಲೇಬೇಕು (ಮಾಹಿತಿ ಸಂಗ್ರಹ ಶ್ರೀಮತಿ ಗೀತಾ ಅತ್ತಿಗೆ). ಈಗಲೂ ಕೂಡ ದೇವಸ್ಥಾನ ಸನ್ನಿಧಿಯಲ್ಲಿ ವಾತ ಎಣ್ಣೆ ಕೊಡುತ್ತಾರೆ. ವಾತ ರೋಗ ಇದ್ದವರು ಈ ಎಣ್ಣೆಯನ್ನು ಉಪಯೋಗಿಸಿದಲ್ಲಿ ವಾತ ರೋಗ ಪರಿಹಾರ ಖಂಡಿತ. ನಾವು ಕೂಡ ರೂ.170/-ಗಳನ್ನು ಪಾವತಿಸಿ ಎಣ್ಣೆಯನ್ನು ಪಡೆದುಕೊಂಡೆವು.
ಆ ದಿನ ಸಂಜೆ ಗುರುವಾಯೂರು ಸುತ್ತ ಮುತ್ತ ಇರುವ ಮಮ್ಮಿಯೂರು ಶ್ರೀ ಮಹಾದೇವ ಟೆಂಪಲ್, ಪಾರ್ಥಸಾರಥಿ ಟೆಂಪಲ್, ಪುಣ್ಣತ್ತೂರು Elephant ಸ್ಯಾಂಕ್ಷವರಿ, ವೆಂಕಟಾಚಲಪತಿ ದೇವಸ್ಥಾನಗಳನ್ನು ವೀಕ್ಷಿಸಿದೆವು. ಈ ಸ್ಥಳಗಳನ್ನು ವೀಕ್ಷಿಸಲು ಆಟೋಗಳು ಇವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!