ಈಗ 'ಕ್ಯಾ ಖೂಬ ಲಗತೆ ಹೋ' ಪೂರ್ಣ ಹಾಡಿನ ಅನುವಾದ ಮುಗಿಸಿದ್ದೇನೆ . ಈ ಹಾಡಿನ ಸಂಖ್ಯೆ - ನಾನು ಕೊಟ್ಟದ್ದು 204 . ಇದು ನಾನು ಪೂರ್ಣಗೊಳಿಸಿದ 112ನೇ ಹಾಡು
ನನ್ನ ಅನುವಾದ ಇಲ್ಲಿದೆ:-
ಏನು ಚಂದ ಕಾಣ್ತಿಯೇ
ಬಾಳ ಚಂದ ಕಾಣ್ತಿಯೇ
ಹೇಳು ಪುನಃ , ಹೇಳ್ತಾ ಇರು, ಇಷ್ಟ ಕೇಳೋಕೆ
ನೀನು ತುಂಬಾ ಚೆಂದ ಕಣೇ
ನೀನು ನನ್ನ ಜೀವ ಕಣೇ ||
ಹೊಗಳುತ ಇರುವೆ ಎಲ್ಲಿ ತನಕ
ಹೇಳು, ಎಲ್ಲಿ ತನಕ
ನನ್ನ ಎದೆಯಲ್ಲಿ ಉಸಿರು ಇರುವ ತನಕ
ಇರುವೆನು ಎಲ್ಲಿಯ ತನಕ ನಿನ್ನ ಮನದಿ,
ನಾ ನಿನ್ನ ಮನದಿ
ಸೂರ್ಯನು ಇರುವ ತನಕ ಆಗಸದಿ , ನೀಲಾಗಸದಿ ||
ಖುಷಿಯಾಯಿತೆ ನಿನಗೆ ನನ್ನ ಪಡೆದು ?
ನೀ ನನ್ನ ಪಡೆದು
ದಾಹ ಕಂಡ ಹೃದಯ ಪಡೆದಿದೆ ಇಂದು ಸಾಗರವ
ಹೃದಯದಲ್ಲಿ ಇನ್ನೇನು ಬಯಕೆ ಇದೆ
ಪ್ರತಿ ಬದುಕಲ್ಲಿ ನೀನೆ ಇರು ನನ ನಲ್ಲ
ನನ ನಲ್ಲ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!