ಇತ್ತೀಚಿಗೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ 27ನೇ ಸಂಪುಟದ ಮೂರನೇ ಸಂಚಿಕೆ - ಒಟ್ಟಾರೆ ಸಂಚಿಕೆ 125 ನ್ನು ಓದಿದೆ, archive.org ತಾಣದಿಂದ ಇಳಿಸಿಕೊಂಡು. ಈ ಪ್ರಬುದ್ಧ ಕರ್ನಾಟಕವು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೆ .ನಾನು ಓದಿದ ಈ ಸಂಚಿಕೆಯ1946 ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಮನುಷ್ಯ ರಕ್ತದ ಬಗ್ಗೆ ಒಂದು ಲೇಖನ ಇದೆ. ಅದರಲ್ಲಿ ರಕ್ತದ ಕುರಿತು ನಮ್ಮ ತಿಳುವಳಿಕೆಯ ಇತಿಹಾಸವೇ ಇದೆ. ಧರ್ಮಶಾಸ್ತ್ರ ವಿಚಾರ ಲೇಖನದಲ್ಲಿ ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಒಬ್ಬ ಮನುಷ್ಯನ ಆಸ್ತಿಯು ಸಂಪೂರ್ಣವಾಗಿ ಮಗನಿಗೆ ಸೇರಬೇಕೆ ? ಅಥವಾ ಎಲ್ಲಾ ಗಂಡು ಮಕ್ಕಳಲ್ಲೂ ಹಂಚಿಕೆ ಆಗಬೇಕೇ ? ಮಕ್ಕಳಿಲ್ಲದಿದ್ದಲ್ಲಿ ಅದು ಯಾರಿಗೆ ಸೇರಬೇಕು? ಎಂಬ ಬಗ್ಗೆ ಧರ್ಮಶಾಸ್ತ್ರಗಳು ಏನು ಹೇಳುತ್ತವೆ? ಮನುಷ್ಯನು ಸೋದರ ಮಾವನ ಮಗಳನ್ನು ಮದುವೆ ಆಗಬಹುದೇ ? ಎಂಬ ಬಗ್ಗೆಯೂ ಇದೆ.

ಇನ್ನೊಂದು ಲೇಖನದಲ್ಲಿ "ಮರಾಠಿ ನಾಟಕಕ್ಕೆ ಸ್ಫೂರ್ತಿ ಕೊಟ್ಟ ಶ್ರೇಯಸ್ಸು ಕನ್ನಡ ನಾಟಕಗಳಿಗೆ. ಸಲ್ಲತಕ್ಕದ್ದೆ೦ಬ ಮಾತು ನಿರ್ವಿವಾದವಾಗಿದ್ದು ಅದನ್ನು ಹೆಚ್ಚು ಕಡಮೆ ಎಲ್ಲರೂ ಒಪ್ಪುತ್ತಾ ರೆ." ಎಂದಿದೆ. ನಾನು ಕನ್ನಡ ನಾಟಕಗಳು ಮರಾಠಿಯಿಂದ ಹುಟ್ಟಿದವು ಎಂದು ತಿಳಿದಿದ್ದೆ!

ಹಿಂದುಸ್ಥಾನದಲ್ಲಿ ಭೌತಶಾಸ್ತ್ರದ ಬೆಳವಣಿಗೆ ಎಂಬ ಲೇಖನವು ಇಲ್ಲಿದೆ. 11 12ನೇ ಶತಮಾನದವರೆಗೆ ಭಾರತದಲ್ಲಿ ವಿಜ್ಞಾನದ ಬೆಳವಣಿಗೆ ಆಯಿತಂತೆ. ನಂತರ 20 ನೇ ಶತಮಾನದಲ್ಲಿ ಅಂದರೆ ಹೋದ ಶತಮಾನದಲ್ಲಿ ವೈಜ್ಞಾನಿಕ ಸಾಧನೆ ಮಾಡಿದ ಭಾರತೀಯ ವಿಜ್ಞಾನಿಗಳ ಮಾಹಿತಿಯೂ ಇಲ್ಲಿದೆ. 'ಹಿಂದುದೇಶದ ರಾಜಕೀಯ ಚಿತ್ರ ' ಎಂಬ ಲೇಖನದಲ್ಲಿ ಭಾರತದಲ್ಲಿ ಆದ 20ನೇ ಶತಮಾನದ ರಾಜಕೀಯ ಬೆಳವಣಿಗಳ ಬಗ್ಗೆ ಓದಬಹುದು. 'ಸಂನ್ಯಾಸಿ ಜಾದ್ರೂಪ ಮತ್ತು ಸಾರ್ವಭೌಮ ಜಹಾಂಗೀರ್‌ ' ಎಂಬ ಲೇಖನದಲ್ಲಿ "ಮೊಗಲ್ ಸಾಮ್ರಾಟ ಜಹಾಂಗೀರನು ಅವನ ತಂದೆ ಅಕ್ಬರನಂತೆ ಹಿಂದೂ ಮತಪ್ರೇಮಿ. ಅದರ ಸತ್ವವನ್ನು ಮುಸ್ಲಿಮರಿಗೆ ತಿಳಿಸಲು ಅವನು ಮಾಡಿದ ಪ್ರಯತ್ನ ಚರಿತ್ರೆಯಲ್ಲಿ ಪ್ರಸಿದ್ದವಾಗಿದೆ " ಅಂತ ಇದೆ. ಈ ಲೇಖನವನ್ನು ಓದಿ ಜಾದ್ರೂಪ ಎಂಬ ಸಂನ್ಯಾಸಿಯ ಬಗೆಗೆ ನನಗೆ ತಿಳಿದು ಬಂದಿತು. ಕೆಎಸ್ ನರಸಿಂಹಸ್ವಾಮಿ ಅವರ 'ಸೀತೆಯ ಸಂದೇಶ' ಎಂಬ ಕವನವು ಇದರಲ್ಲಿದ್ದು, ಅದರಲ್ಲಿ ಕ್ರೌಂಚ ಮಿಥುನ ಒಂದರ ಕೊಲೆಗೆ ವಾಲ್ಮೀಕಿ ಶಪಿಸಿದ ನಿಷಾದ, ರಾವಣನಾಗಿ ಹುಟ್ಟಿ, ಕಾಡಿದನು ಸೀತೆಯನು ' ಎಂಬ ಸಾಲಿದೆ! 'ಲಂಕೆಯನು ಸುಡುವುದೇ ಧರ್ಮ. ಹಿಂಸಾಜೀವಿಗಳ ತೊಡೆದು ಗೆದ್ದು ಬಾಳುವುದೇ ಅಹಿಂಸೆ' ಎಂದು ಸೀತೆ ಅಂದಳಂತೆ. ಅವಳೇ ಭಾರತ ಲಕ್ಷ್ಮಿಯಂತೆ. ಪ್ರಚಾರದ ಕುರಿತು ಇಲ್ಲಿ ಒಂದು ಪ್ರಬಂಧ ಇದೆ. ಬೆಸ್ತರ ಕರಿಯ ನಿಜವಾಗಿ ಯೋಗಿಯೆ? ಎಂಬ ಗೊರೂರು ರಾಮಸ್ವಾಮಯ್ಯಂಗಾರ್‌ ಲೇಖನದಲ್ಲಿ ಈ ಮುಂದಿನ ಮಾತಿದೆ - ರಾಮಾಯಣದಲ್ಲಿ ಕೌಸಲ್ಯೆಯ ಎದುರಿಗೆ ಭರತ “ಯಾರ ಅನುಮತಿಯಂತೆ ರಾಮನು ಕಾಡಿಗೆ ಹೋದನೋ ಅವನಿಗೆ ಕಾರಣವಿಲ್ಲದೆ. ಪಾಯಸವನ್ನೂ ಚಿಗಳಿಯನ್ನೂ ಆಡಿನ ಮಾಂಸವನ್ನೂ ತಿನ್ನು ವವನ ಗತಿಯುಂಟಾಗಲಿ ಎಂದು ಪ್ರತಿಜ್ಞೆ ಮಾಡುತ್ತಾನೆ.” ಕರಿಯನ ಅಭಿಪ್ರಾಯದಲ್ಲಿ ಮೀನು ಮಾಂಸಕ್ಕೆ ಸೇರಿದುದೇ ಅಲ್ಲ. ಅದು ಯಾರು ಬೇಕಾದರೂ ಉಪಯೋಗಿಸಬಹುದಾದ ನೀರು-ತರ್ಕಾರಿ! ಹಳತು ಹೊಸತು ಬಗ್ಗೆ ಕೈಲಾಸಂ ಅಧ್ಯಕ್ಷ ಭಾಷಣದಲ್ಲಿ ಹೇಳಿದ್ದು ಇಲ್ಲಿ ಮುದ್ರಣವಾಗಿದೆ ಹಿಂದಿನ ಕನ್ನಡ ಕಾವ್ಯಗಳಲ್ಲಿ ಹಲವೆಡೆ ಪ್ರಯೋಗವಾಗಿರುವ ಪೊಅಸುು-'ಹೊರಸು' ಎಂಬ ಪದದ ಅರ್ಥ ವಿಚಾರ ಇಲ್ಲಿ ಮಾಡಿದ್ದಾರೆ.