ಪ್ರಬುದ್ಧ ಕರ್ನಾಟಕ 33 ನೇ ಸಂಪುಟದ 2 ನೇ ಸಂಚಿಕೆ ( ಒಟ್ಟಾರೆ 128 ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1951 ರಲ್ಲಿ ಪ್ರಕಟವಾಗಿದೆ .
ಈ ಹಿಂದೆ ನಾನು ಹೇಳಿದ ಹಾಗೆ ಈ ಸಂಚಿಕೆಯಲ್ಲಿ ಇರುವುದು ಎಲ್ಲವನ್ನು ಓದುತ್ತಿಲ್ಲ. ಅದಕ್ಕೆ ಕೆಳಗಡೆ ಸಮರ್ಥನೆ ಇಂದು ಇದರಲ್ಲಿ ಸಿಕ್ಕಿತು!

ಎಲ್ಲ ಗ್ರಂಥಗಳನ್ನೂ ಒಬ್ಬನೇ ತನ್ನ ಜೀವಮಾನದಲ್ಲಿ ಓದಿ ಮುಗಿಸುವುದು ತೀರ ಅಸಾಧ್ಯವಾದದ್ದು. ತನಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ, ಯಾವುದರಲ್ಲಿ ತನ್ನ ಬುದ್ಧಿ ಚುರುಕಾಗಿ ಓಡುತ್ತದೆಯೋ ಆ ವಿಷಯವನ್ನು ಕುರಿತ
ಗ್ರಂಥಗಳನ್ನು ಮಾತ್ರ ತಾನು ಆರಿಸಿಕೊಂಡು ಓದಬೇಕಾಗುತ್ತದೆ.
ಇದೂ ಕೂಡ ಕಷ್ಟಸಾಧ್ಯವಾದದ್ದೆ . ಏಕೆಂದರೆ, ಯಾವ ಅಲ್ಪವಿಷಯನೇ “ಆಗಲಿ ಅದನ್ನು ಕುರಿತ
ಗ್ರಂಥಗಳ ಸಂಖ್ಯೆ ಪ್ರಪಂಚದ ನಾನಾ ಭಾಷೆಗಳಲ್ಲಿ ಅಪಾರವಾಗಿದೆ. ಆದ್ದರಿಂದಇದರಲ್ಲಿ ಕೂಡ ವ್ಯಕ್ತಿ ವಿವೇಕವನ್ನು ಉಪಯೋಗಿಸಿ ಮುಖ್ಯವೆಂದು ಕಾಣುವ:
ಗ್ರಂಥಗಳನ್ನು ಮಾತ್ರ ನೋಡಬೇಕಾಗುತ್ತದೆ.

ಆಮೇಲೆ ಒಂದು ಕಥೆಯಲ್ಲಿ ಈ ಕೆಳಗಿನ ಸಾಲುಗಳು ಸಿಕ್ಕವು.

ತನ್ನ ಹೆಸರು ಶಾಶ್ವತವಾಗಿ ನಿಲ್ಲುವಂತೆ ಗುರುತೊಂದನ್ನು ಬಿಟ್ಟು ಹೋಗಬೇಕೆಂದು ಪ್ರತಿಯೊಬ್ಬ ಬಯಸುತ್ತಾನೆ. ಜನಗಳ ಮೂರ್ತಿಯಾಗಿ ಮೆರೆಯಬೇಕೆಂಬುದೇ ಜೀವನೋತ್ಸಾಹಕ್ಕೆ ಕಾರಣವಾದ ಆಂತರ್ಯದ ಆಕಾಂಕ್ಷೆ . “As you have come to this world, leave some mark behind '' ಎಂದು ಸ್ವಾಮಿ ವಿವೇಕಾನಂದ ಹೇಳುತ್ತಾರೆ. ಆದರೆ ತಮ್ಮ ನಂತರ ತಮ್ಮ ಗುರುತು ಉಳಿಯಬಾರದೆಂದು ಕೆಲವರು ವಿಚಾರ ಮಾಡುತ್ತಾರೆ.