ಇತ್ತೀಚಿಗೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ 36ನೇ ಸಂಪುಟದ ನಾಲ್ಕನೇ ಸಂಚಿಕೆ - ಒಟ್ಟಾರೆ ಸಂಚಿಕೆ ಸಂಖ್ಯೆ 142ನ್ನು ತಿರುವಿ ಹಾಕಿದೆ , archive.org ತಾಣದಿಂದ ಇಳಿಸಿಕೊಂಡು. ಈ ಪ್ರಬುದ್ಧ ಕರ್ನಾಟಕವು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೆ .ನಾನು ಓದಿದ ಈ ಸಂಚಿಕೆಯ1955 ರಲ್ಲಿ ಪ್ರಕಟವಾಗಿದೆ.

ಇದರಲ್ಲಿ ಹೇಳುವ ಪ್ರಕಾರ ರಾವಣ ಕಂಸ ನಿಮಿತ್ತ ಮಾತ್ರರು , ದೇವರ ಅವತಾರಕ್ಕೆ. ಅಶರೀರವಾಣಿಗಳಿಗೆ ಕಿವಿ ಕೊಡುವುದರಿಂದ ಕೇಡಿಗೆ ಹಾದಿ ಹಾಕಿದಂತಾಗುತ್ತದೆಯೆ? ಕಂಸನು ಅದನ್ನು ಶೃದ್ಧೆಯಿಂದ ಕೇಳಿಯೇ ತನ್ನ ಅಂತರಂಗದಲ್ಲಿ ಅಡಗಿದ್ದ ಅಸುರತ್ವ ಪ್ರಕಟವಾಗುವ ಹಾಗೆ ವರ್ತಿಸಿದನೇ ? ವಿಧಿಯ ವ್ಯೂಹಕ್ಕೆ ಅವನ ಸೌಜನ್ಯದಿಂದ ಭಂಗ ಬರಬಾರದೆಂದೇ ನಾರದನನ್ನು ಕಳಿಸಲಾಯಿತೆ? ಅವನ ಮಾತನ್ನು ಕೇಳಿ ತಾನೆ ಕಂಸನು ಸೆರೆಮನೆಯಲ್ಲಿ ವಸುದೇವ ದೇವಕಿಯರನ್ನು ಇಟ್ಟುದು ? ಕೃಷ್ಣನನ್ನು ನಂದಯಶೋದೆಯರ ಬಳಿ ತಲುಪಿಸಿ ಬದಲಿಗೆ ತಂದ ಹೆಣ್ಣು ಮಗುವನ್ನು ಕೊಲ್ಲಲು ಯತ್ನಿಸುತ್ತಾನೆ - ಆಗ ಹೇಳುತ್ತಾನಂತೆ - ದೈವವು ಕೂಡ ಸುಳ್ಳು ಹೇಳುತ್ತದೆ, ಮನುಷ್ಯ ಮಾತ್ರ ಅಲ್ಲ ! ಭಗವದ್ಗೀತೆಗೆ ಶ್ರೀ ಕೃಷ್ಣನ ಜನ್ಮದಿಂದಲೇ ಅಂಕುರ ಆಯಿತಂತೆ ! ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ--ಈ ತತ್ತ್ವಗಳು ನಮ್ಮ ಲೋಕದ ಭವಿತವ್ಯದ ಬಾಳಿಗೆ ಮಾರ್ಗದರ್ಶಕ ದೀಪಗಳಂತೆ.

ಈ ಸಂಚಿಕೆಯಲ್ಲಿ ಎವರೆಸ್ಟ್ ಪರ್ವತದ ಆರೋಹಣದ ಬಗ್ಗೆ ವಿವರವಾದ ಒಂದು ಲೇಖನ ಇದೆ. ಹಾಗೆಯೇ ವಿದೇಶಿ ಸಾಹಿತ್ಯದಲ್ಲಿರುವ ರುದ್ರ ನಾಟಕಗಳ ಬಗ್ಗೆ ಕೂಡ.