ಪ್ರಬುದ್ಧ ಕರ್ನಾಟಕ 45ನೇ ಸಂಪುಟದ 4ನೇ ಸಂಚಿಕೆ ( ಒಟ್ಟಾರೆ 178ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1964ರಲ್ಲಿ ಪ್ರಕಟವಾಗಿದೆ . ಇದರಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಬಹಳಷ್ಟು ಲೇಖನಗಳಿವೆ. ಅವರು ನಲವತ್ತಕ್ಕಿಂತ ಕಡಿಮೆ ವರ್ಷ ಬದುಕಿದ್ದರು. ಹಾಗಾಗಿ ಕೆಲವರು ಅವರನ್ನು ಸಂಪೂರ್ಣವಾಗಿ ತಿಳುವಳಿಕೆ,ಅನುಭವ ಹೊಂದಿದವರಲ್ಲ ಎಂದು ಅಕ್ಷೇಪಿಸಿದ್ದು ಉಂಟು.
'ಅಹಿಂಸಾ ಪರಮೋಧರ್ಮ ' ಅಲ್ಲವೇ ? ಹಾಗೆಂದು ತಿಳಿದು ನಮ್ಮ ದೇಶ ಅವನತಿಯನ್ನು ಹೊಂದಿತೆ? ನಮ್ಮ ದೇಶವು ಅಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲಿಲ್ಲವೇ? ಅಹಿಂಸಾ ತತ್ವವು ಯಾವಾಗಲೂ ಸರಿ ಅಲ್ಲವೇ? ಬೌದ್ಧ ಯುಗದ ಪರಿಣಾಮವಾಗಿ ನಾವು 600-700 ವರ್ಷಗಳ ಕಾಲ ಅತಿ ಸೌಮ್ಯ ಆದೆವೆ? ಬೌದ್ಧಧರ್ಮದ ಈ ಮಾರಕ ಪರಿಣಾಮವನ್ನು ಮನಗಂಡೇ
ಶ್ರೀ ಸ್ವಾಮಿ ವಿವೇಕಾನಂದರು ಒಮ್ಮೆ ಸಿಟ್ಟಿಗೆದ್ದು Buddhism has brought ruin upon India ಅಂದರೆ? ಈ ಪರಿಸ್ಥಿತಿ ಯನ್ನು ಸುಧಾರಿಸಲು ಶ್ರೀ ಶಂಕರಾಚಾರ್ಯರು ಪ್ರಯತ್ನಿಸಿದರೆ ? ಬೌದ್ಧರ ಅಹಿಂಸಾವಾದ, ಚಾರ್ವಾಕರ ಅತಿ ಪ್ರಾಪಂಚಿಕತೆ, ಶಂಕರರ ಮಾಯಾವಾದ--ಎಲ್ಲವೂ ಸೇರಿಕೊಂಡು ಭಾರತೀಯರನ್ನು ಕೇವಲ ನಿರ್ವೀರ್ಯರಾದ ಪಶುಗಳನ್ನಾಗಿ ಮಾಡಿದವೆ! ದೇಶದ ಮೇಲೆ ಪರದೇಶದವರು, ಪರಮತೀಯರು ದಾಳಿಮಾಡಿ ಮನೆಯ ಬಾಗಿಲಿಗೆ ಬಂದರೂ, ನಮ್ಮ ಗುಡಿಗೋಪುರಗಳನ್ನು ಧ್ವಂಸ ಮಾಡಿದರೂ, ಸ್ತ್ರೀಪುತ್ರರನ್ನು ಕೆಡಿಸಿದರೂ ಭಾರತೀಯರು ಸುಮ್ಮನೆ ಇದ್ದರೆ ?
ಈ ಜನಾಂಗದ ಪುನರುದ್ಧಾರವಾಗಬೇಕಾದರೆ ಅವರ
ನೈತಿಕ ಪುನರುದ್ಧಾರ, ಮಾನಸಿಕ ಪರಿವರ್ತನೆಯೊಂದೇ ಮಾರ್ಗವೆಂದು ವೈಷ್ಣವ
ಭಕ್ತಿಪಂಥ ಉದಯವಾಯಿತು. ಮಾಧ್ವ, ರಾಮಾನುಜರು ಭಕ್ತಿ ಪಂಥವನ್ನು
ಜನರಲ್ಲಿ ಬಿತ್ತಿ ಈ ದೇಶದ ಜನಜೀವನವನ್ನು ಉದ್ಧಾರದ ಪಥದಲ್ಲಿ ನಿಲ್ಲಿಸಿದರು.
ಅದರಲ್ಲೂ ಕರ್ಣಾಟಕದಲ್ಲಿ ಬಸವಣ್ಣನವರ ಕಾಲದಲ್ಲಿ ಉಂಟಾದ ಧಾರ್ಮಿಕ, ಆರ್ಥಿಕ, ಸಾಮಾಜಿಕ ಕ್ರಾಂತಿ ಯಾನ ದೇಶದ ಇತಿಹಾಸದಲ್ಲೂ ಸುವರ್ಣಾಕ್ಷರಗಳಿಂದ ಬರೆದಿಡುವ ಮಹಾ ಅಧ್ಯಾಯ! ಕಾಯಕದ ಹಿರಿಮೆಯನ್ನು, ಭಕ್ತಿಯ
ಮಹಿಮೆಯನ್ನು, ಇಹಪರಗಳು ಬೇರೆಯಲ್ಲ ಎಂಬ ಉಪನಿಷತ್ ಸತ್ಯವನ್ನು, ಸ್ತ್ರೀಪುರುಷರ ಸಮಾನತೆಯನ್ನು, ಸಕಲ ವರ್ಣ, ಆಶ್ರಮಗಳು ಒಂದೇ ಎಂಬ ಉಚ್ಚ ನೀತಿಯನ್ನು ಮನೆಮನೆಗೂ ಹಬ್ಬಿಸಿದ. ಮಹಾಕಾರ್ಯ ಬಸವಾದಿ
ಪ್ರಮಥರದು. ಕೊನೆಗೆ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಭಾರತೀಯರನ್ನು ಸುಧಾರಿಸಲು ಬಂದರೆ ?
ಈ ಎಲ್ಲ ವಿಚಾರಗಳು ಇಲ್ಲಿನ ಒಂದು ಲೇಖನದಲ್ಲಿ ಇವೆ.
ಅವರು ದರಿದ್ರನಾರಾಯಣ ಎಂಬ ಹೊಸ ದೇವತೆಯನ್ನು ಕಂಡುಹಿಡಿದರು.
ವಿವೇಕಾನಂದರ ಬಗ್ಗೆ ಅನೇಕ ವಿಚಾರಗಳು ಇಲ್ಲಿ ಇವೆ. ನೀವೇ ಓದಿ ತಿಳಿದುಕೊಳ್ಳಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!