ಸೆಪ್ಟೆಂಬರ್ 1956ರ ಕಸ್ತೂರಿ (ಅದು ಕಸ್ತೂರಿಯ ಮೊದಲ ಸಂಚಿಕೆ) ಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅದರಲ್ಲಿ 'ರಾಮಾಯಣದ ವಿವಿಧ ಅವತಾರಗಳು' ಎಂಬ ಲೇಖನ ಇದ್ದು ಅದರಲ್ಲಿ ನಾವು ತಿಳಿದಿರುವ ರಾಮಾಯಣದಲ್ಲಿ ಇಲ್ಲದ ಅನೇಕ ಸಂಗತಿಗಳಿವೆ. ಉದಾಹರಣೆಗೆ ಸೀತೆ ರಾವಣನ ಮಗಳು. ಅವಳು ದನ ಕಾಯುತ್ತಿದ್ದಾಗ ರಾಮನಿಗೆ ಭೆಟ್ಟಿಯಾದಳು. ಇನ್ನೊಂದರಲ್ಲಿ ರಾಮ-ರಾವಣರ ಯುದ್ಧವೇ ನಡೆಯುವುದಿಲ್ಲ. (ಮತ್ತೊಂದರಲ್ಲಿ ರಾವಣನು ಸೀತೆಗೆ ಬಲವಂತ ಮಾಡಿ ಅವಳೊಂದಿಗೆಸಂಬಂಧ ಇಟ್ಟುಕೊಂಡಿರುತ್ತಾನೆ. ಅದಕ್ಕೇ ರಾಮನು ಸಿಟ್ಟಿಗೆದ್ದು ರಾವಣನನ್ನು ಕೊಲ್ಲುತ್ತಾನಂತೆ. - ಬೇರೆಲ್ಲೊ ನಾನು ಓದಿದ್ದು ) . ಸೀತೆಗೆ ರಾವಣನಲ್ಲಿ ಪ್ರೇಮ ಇತ್ತು, ಅದಕ್ಕೆ ಅವಳನ್ನು ಶ್ರೀರಾಮನು ತ್ಯಜಿಸಿದನು. ಹನುಮನು ಬ್ರಹ್ಮಚಾರಿ ಅಲ್ಲ ಇತ್ಯಾದಿ ಇತ್ಯಾದಿ.

ಕೆಲವು ಪುಟಗಳಲ್ಲಿ ಕಸ್ತೂರಿ ಮಾಸ ಪತ್ರಿಕೆಯ ಹೆಸರನ್ನು ಪರಾಗ ಎಂದು ಮುದ್ರಿಸಿದ್ದಾರೆ ! ಅದು ಈ ಪತ್ರಿಕೆಗೆ ಉದ್ದೇಶಿಸಿದ ಮೂಲ ಹೆಸರಂತೆ.

ಚಕೋರ ಪಕ್ಷಿಯ ಕುರಿತು ಒಂದು ಲೇಖನ ಇದೆ.

ಬೊಜ್ಜಿಗೆ ವ್ಯಾಯಾಮವೇ ಪರಿಹಾರ ಎಂಬ ಲೇಖನವೂ ಇದೆ.

ಒಂದು ಕಾಲಕ್ಕೆ ಅಲ್ಯೂಮಿನಿಯಂ ಲೋಹವುಬಂಗಾರಕ್ಕಿಂತ ತುಟ್ಟಿ ಇದ್ದುದು ನಿಮಗೆ ಗೊತ್ತೇ ?

ಚದುರಂಗ ಆಟದ ಕುರಿತೂ ಒಂದು ಲೇಖನ ಇದೆ.

ಬಸಿರಿಯರು ಗಂಡು ಹುಟ್ಟಬೇಕೆಂದು ಅಶ್ವತ್ಥ ಪ್ರದಕ್ಷಿಣೆ ಹಾಕುವುದರಿಂದ ವ್ಯಾಯಾಮ ಹೊರತು ಬೇರೆ ಲಾಭವಿಲ್ಲ ಎಂದು ಕೂಡ ಒಂದು ಲೇಖನದಲ್ಲಿ ಹೇಳಲಾಗಿದೆ.

ತಾವೋ ಎಂಬ ಬೌದ್ಧ ಧರ್ಮಿಯು ಭಾರತದಲ್ಲಿ ಹುಟ್ಟಿ ಚೀನಾಕ್ಕೆ ಹೋದ ವಿಷಯ ನನಗೆ ಇವತ್ತೇ ಈ ಕಸ್ತೂರಿಯಿಂದ ತಿಳಿಯಿತು. ತಾ-ವೊನಿಗೆ ನಿಜವಾದ ಶ್ರೇಷ್ಠತೆ ತಪಸ್ಸಿನಲ್ಲಿರದೆ ಸಂಪೂರ್ಣ ಚಿತ್ತಶುದ್ಧಿ ಮತ್ತು ಜ್ಞಾನಗಳಲ್ಲಿದೆ ಎಂಬ ನಂಬಿಗೆಯಾಯಿತು ಅಂತೆ.

ಕಲಕತ್ತಾ ನಗರದ ಕುರಿತು ಇಲ್ಲಿ ಒಂದು ಲೇಖನ ಇದೆ.

ಪುಸ್ತಕ ವಿಭಾಗದಲ್ಲಿ ವಿ. ಸೀ. ಬರೆದ ಪಂಪಾಯಾತ್ರೆ ಎಂಬ ಪುಸ್ತಕದ ಸಂಗ್ರಹ ಇದೆ.