ಜೂನ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಇದರಲ್ಲಿ 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಗೆಗೆ ಅನೇಕ ವಿವರಗಳು ಸಿಗುತ್ತವೆ.
ಡಚ್ಚರು ಯುದ್ಧ ಮಾಡದೇ ತಮ್ಮ ರಾಜ್ಯವನ್ನು ಬೆಳೆಸಿದರಂತೆ. ಅದು ಹೇಗೆ ಎಂದು ಇಲ್ಲಿ ಓದಿ.
ನಾಯಿ ಮನುಷ್ಯನ ಗೆಳೆಯನಾದದ್ದು 8000 ವರ್ಷಗಳ ಹಿಂದೆ ಅಂತೆ.
ಜಗತ್ತಿನ ಪ್ರಮುಖ ಭಾಷೆಗಳು ಯಾವುವು ? ಹೆಚ್ಚು ಜನ ಮಾತಾಡುವಂಥವು? ಹೆಚ್ಚು ಜನರ ಮಾತೃ ಭಾಷೆಗಳು ?
ತಿಳಿಯಲು ಇಲ್ಲಿನ ಒಂದು ಲೇಖನ ಓದಿ.
ಈ ಸಂಚಿಕೆಯಲ್ಲಿ ಧಾರವಾಡ ಶಹರದ ಕುರಿತು ಒಂದು ಲೇಖನವೂ ಇದೆ.
'ಅಮೃತಸರ ಸ್ವತಂತ್ರವಾದಾಗ ' ಎಂಬ ಒಂದು ಲೇಖನ ಇದೆ. ಅದರಲ್ಲಿ ಅಮೃತಸರ 1919 ರಲ್ಲಿ ಸ್ವತಂತ್ರವಾಗಿದ್ದ ಸಂಗತಿ ಇದೆ. ಇದು ನನಗೆ ಗೊತ್ತಿರಲಿಲ್ಲ. ನಿಮಗೆ?
ಮನುಷ್ಯ 600 ವರ್ಷ, ಹೌದು ಆರು ನೂರು ವರ್ಷ, ಬದುಕಬಹುದಂತೆ . 1926 ರಲ್ಲಿ ರಷ್ಯಾದಲ್ಲಿ 29,000 ಶತಾಯುಷಿಗಳು ಇದ್ದರಂತೆ. ಮದುವೆಯ ಶತಮಾನೋತ್ಸವ ಆಚರಿಸಿದ ಗಂಡ ಹೆಂಡಿರ ಒಗೆಗೆ ಮತ್ತು ಒಟ್ಟಾರೆ ಶತಾಯುಷಿಗಳ ಬಗೆಗೆ ಇಲ್ಲಿ ಒಂದು ಲೇಖನ ಸಿಗುತ್ತದೆ !
1956 ರಲ್ಲಿನ ಕನ್ನಡ ಸಾಹಿತ್ಯ ಕುರಿತು ಇಲ್ಲಿ ಒಂದು ಲೇಖನವಿದೆ. ನಾವು ವಿಚಾರ ಮಾಡುವುದು ತುಂಬಾ ಕಡಿಮೆಯಂತೆ. ನೀವೆಷ್ಟು ವಿಚಾರಶೀಲರಿದ್ದೀರಿ ಎಂಬ ಲೇಖನವೂ ಇದೆ.
ಬಲ್ಜಾಕನು ಜಗತ್ತಿನಲ್ಲಿ ಶ್ರೇಷ್ಠ ಕಾದಂಬರಿಕಾರನಂತೆ. ಬಲ್ಜಾಕನ ಕಾದಂಬರಿ ಯುಜೆನಿ ಗ್ರಾಂಡೆ ಎಂಬುದರ ಸಂಗ್ರಹ ಅನುವಾದ ಶ್ರೀ ವಿ ಎಂ ಇನಾಮ್ದಾರ್ ಅವರು ಮಾಡಿದ್ದು, ಪುಸ್ತಕ ವಿಭಾಗದಲ್ಲಿ ಇದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!