ಜುಲೈ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಇದರಲ್ಲಿ ಶ್ರೀರಂಗಪಟ್ಟಣದ ಕುರಿತು ಒಂದು ಲೇಖನ ಇದೆ. ಅದರಲ್ಲಿ ಹೇಳಿದ ಪ್ರಕಾರ ಶ್ರೀರಂಗಪಟ್ಟಣವು ಮೂರು ಶತಮಾನದಷ್ಟು ಕಾಲ ಮೈಸೂರು ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿಗೆ ವಿಶಿಷ್ಟಾದ್ವೈತ ಸಿದ್ದಾಂತದ ಶ್ರೀ ರಾಮಾನುಜಾಚಾರ್ಯರು ಇಲ್ಲಿಗೆ ವಲಸೆ ಬಂದು ನೆಲೆಸಿದ್ದರು.
ಶ್ರೀರಂಗಪಟ್ಟಣವು ಆದಿರಂಗನ ನೆಲೆ ಎನ್ನಿಸಿದೆ.
ಇಲ್ಲಿರುವ ದೇವಾಲಯವನ್ನು ಕ್ರಿಸ್ತಶಕ 894 ರಲ್ಲಿ ಕಟ್ಟಿದ್ದಂತೆ.
ಇಲ್ಲಿರುವ ಕೋಟೆಯು ಭಾರತದ ಅಭೇದ್ಯ ಕೋಟೆಗಳಲ್ಲಿ ಒಂದಂತೆ.
ಪುಸ್ತಕ ವಿಭಾಗದಲ್ಲಿ ಟಾಲ್ಸ್ಟಾಯ್ ಅವರ ಕಾದಂಬರಿ ಯುದ್ಧ ಮತ್ತು ಶಾಂತಿಯ ಸಂಗ್ರಹವಿದೆ. ಇದನ್ನು ಪೂರ್ತಿಯಾಗಿ ಓದಿದವರು ಕಡಿಮೆ ಅಂತೆ. ಏಕೆಂದರೆ ಈ ಕಾದಂಬರಿ ಸುಮಾರು 1500 ಪುಟಗಳನ್ನು ಹೊಂದಿದೆ. ಇದರಲ್ಲಿ ಇನ್ನೂರಕ್ಕೂ ಹೆಚ್ಚು ಪಾತ್ರಗಳಿವೆ. ಆದರೂ ಜೀವನದ ವೈಶಾಲ್ಯವನ್ನು , ಎಲ್ಲ ಬಗೆಯ ನೋವು ನಲಿವುಗಳನ್ನು, ಸ್ಪಷ್ಟವಾಗಿ ರಸವತ್ತಾಗಿ ತೋರಿಸುವ ಹಿರಿಮೆ ಈ ಕಾದಂಬರಿ ಇರುವಷ್ಟು ಬೇರಾವ ಕಾದಂಬರಿಗಳು ಇಲ್ವಂತೆ. ಈ ಕಾದಂಬರಿಯ ಭಾಗ ೧ ಮತ್ತು ೨ ಎಂದು 935 ಪುಟಗಳ ಅನುವಾದವನ್ನು ಶ್ರೀ ಓಎಲ್ ನಾಗಭೂಷಣ ಸ್ವಾಮಿ ಅವರು ಮಾಡಿದ್ದು archive.org ತಾಣದಲ್ಲಿ ಉಚಿತವಾಗಿ ಡೌನ್ಲೋಡ್ ಮಾಡುವಂತೆ ಇದೆ. ನಾನು ಮಾಡಿಕೊಂಡಿದ್ದೇನೆ. ಅದನ್ನು ಓದಿದಾಗ ವಿಶೇಷ ಏನಾದರೂ ಕಂಡರೆ ಖಂಡಿತ ಇಲ್ಲಿ ತಿಳಿಸುತ್ತೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!