ನವೆಂಬರ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ 'ನಾ ಕಂಡ ದಿಲ್ಲಿ' ಎಂಬ ಒಂದು ಲೇಖನ ಇದೆ

ನಮ್ಮ ಭಾರತ ಆಫ್ರಿಕಾ ದಕ್ಷಿಣ ಧ್ರುವ ಹಾಗೂ ದಕ್ಷಿಣ ಅಮೇರಿಕಾ ಒಂದೇಖಂಡದ ಭಾಗಗಳಾಗಿದ್ದು ನಿಮಗೆ ಗೊತ್ತೇ ? ಭಾರತವು ಏಷ್ಯಾ ಖಂಡಕ್ಕೆ ಡಿಕ್ಕಿ ಹೊಡೆದು ಹಿಮಾಲಯವು ಸೃಷ್ಟಿ ಆಯಿತಂತೆ. ಹಿಮಾಲಯವು ಈಗಲೂ ಬೆಳೆಯುತ್ತಾ ಇದೆಯಂತೆ. ಹಿಮಾಲಯವು ತುಂಬಾ ತರುಣ ಅಂತೆ. . ಈ ಖಂಡಗಳು ಹೀಗೆ ಸೃಷ್ಟಿಯಾಗಿದ್ದು ಕೇವಲ ಗಮನಿಸಿ ಕೇವಲ 10 ಕೋಟಿ ವರ್ಷಗಳ ಹಿಂದೆ ಅಂತೆ. ಈ ದೊಡ್ಡ ಖಂಡದ ಹೆಸರು ಗೊಂಡವನ. ಅದರ ಕುರಿತು ಒಂದು ಲೇಖನ ಇಲ್ಲಿ ಇದೆ. ಅದರ ತಲೆಬರಹ ಗೊಂಡವನ ಖಂಡದ ಆಶ್ರಯಕರ ಯಾತ್ರೆ.

ಆಗ್ರಾದ ತಾಜ್ಮಹಲ್ ಅನ್ನು ಶಹಜಹಾನ್ ನು ನಿಧಾನವಾದ ತನ್ನ ಹೆಂಡತಿ ಮಮ್ತಾಜ್ ನೆನಪಿಗೆ ಕಟ್ಟಿಸಿರುವುದು ನಮಗೆ ನಿಮಗೆ ಗೊತ್ತು ಆದರೆ ಅದರ ಶಿಲ್ಪಿ ಉಸ್ತಾದನು ತನ್ನ ಪ್ರಿಯತಮೆ ನಾಸಿಮ್ ಎಂಬ ಅದ್ಭುತ ಸುಂದರಿಯ ಜೊತೆಗಿನ ತನ್ನ ಅಮರ ಪ್ರೇಮದ ಕುರುಹು ಎಂದು ಅದನ್ನು ವಿಜಾಸಗೊಳಿಸಿದ್ದು ಗೊತ್ತೆ ? ಈ ಬಗ್ಗೆ ಗೌರವದ ಮಾಹಿತಿ 'ತಾಜ ಮಹಾಲ' ಎಂಬ ಲೇಖನದಲ್ಲಿ ಇದೆ.

ಕಾಕತಾಲೀಯ ನ್ಯಾಯ,ಹಾವೇರಿ ನ್ಯಾಯಗಳನ್ನು ನೀವು ಕೇಳಿರಬಹುದು. ಮುಖದಲ್ಲಿರುವ ಅಂತಹ ನ್ಯಾಯಗಳನ್ನು

'ಸಂಸ್ಕೃತದಲ್ಲಿನ ನ್ಯಾಯಗಳು' ಎಂಬ ಲೇಖನದ ಮೂಲಕ ತಿಳಿದುಕೊಳ್ಳಬಹುದು.

ಅಹಿತಕಾರಿಗಳ ಜೊತೆಗೆ ಹಿತಕರವಾಗಿ ನಡೆದುಕೊಂಡರೆ

ಅವರು ಹಿತಕಾರಿಗಳೇ ಆಗುವರು ಎಂಬ ಉಕ್ತಿಯೂ ಇಲ್ಲಿದೆ.

ಸ್ವಿಜರ್ಲ್ಯಾಂಡ್ ಕುರಿತು ಒಂದು ಲೇಖನವೂ ಇದೆ.

ನಮ್ಮ ಆರ್ಯರು ಪಾರ್ಸಿಗಳ ಸಂಬಂಧಿಕರು. ಪಾರ್ಸಿಗಳ ಭಾಷೆಯು ಸಂಸ್ಕೃತವನ್ನು ಹೋಲುತ್ತಿತ್ತು. ಅವರ ಗುರು ಜರತುಷ್ಟ್ರನು.ಅವನು ನಮ್ಮ ಗೌತಮ ಬುದ್ಧನಿಗಿಂತ 100 ವರ್ಷ ಮೊದಲು ಹುಟ್ಟಿದವನು. ಅವನು ಕೂಡ ದೇವತೆಗಳ ಕಲ್ಪನೆಯನ್ನು ನಿರಾಕರಿಸಿದವನು. ಅವನ ಕುರಿತು ಒಂದು ಲೇಖನವು ಇಲ್ಲಿದೆ.