ನವೆಂಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ ವ್ಯಾಟಿಕನ್ ನಗರದ ಬಗ್ಗೆಯೂಬೆಂಗಳೂರಿನ ಲಾಲ್ಬಾಗ್ ತೋಟದ ಬಗ್ಗೆಯೂ ಲೇಖನಗಳಿವೆ.

ಭಾರತವನ್ನು ಬಿಟ್ಟು ಬ್ರಿಟಿಷರು ಹಲಗಲಿ ಮುಂಬೈಯಲ್ಲಿ1946ರ ನೌಕಾದಂಗೆ ಒಂದು ಪ್ರಬಲ ಕಾರಣವಂತೆ. ಆ ದಂಗೆಯ ಬಗ್ಗೆ ಇಲ್ಲಿ ಒಂದು ಲೇಖನ ಇದೆ.

ಚೀನಾದ ಮೇಲೆ ಜಪಾನ್ ಆಕ್ರಮಣ ಮಾಡಿತ್ತಂತೆ. ಆಗ ಕೊಟ್ನಿಸ್ ಎಂಬ ಡಾಕ್ಟರ್ ಚೀನಾಕೆ ಸಹಾಯ ಮಾಡಲು ಅಲ್ಲಿಗೆ ಹೋದಂತೆ. ಇದು ನಂತರ ಡಾಕ್ಟರ್ ಕೊಟ್ನಿಸ್ ಕೇ ಅಮರ್ ಕಹಾನಿ ಎಂಬ ಚಲನಚಿತ್ರವು ಆದದ್ದು ನಿಮಗೆ ಗೊತ್ತಿರಬೇಕು. ಈ ಕೊಟ್ನೀಸ್ ಗೆ ಚೀನಾ ದೇಶದಲ್ಲಿ ಹುಟ್ಟಿದ ಮಗ - ಅವನ ಹೆಸರು - ಇಂಗ್ ಹುವಾ - ಅಂದರೆ ಭಾರತ ಚೀನಾ. ಈತ ಭಾರತಕ್ಕೆ ಬಂದು ಹೋದನಂತೆ. ಈ ಬಗ್ಗೆ ಈ ಕಸ್ತೂರಿಯಲ್ಲಿ ಒಂದು ಲೇಖನ ಸಿಗುತ್ತದೆ.

ಅಪ್ಸರೆಯರು ಈಜಿಪ್ಟ್ ನಿಂದ ಬಂದ ನರ್ತಕಿಯರು ಎಂದು

'ಅಪ್ಸರೆಯರು ಯಾರು ? ' ಎಂಬ ಲೇಖನದಲ್ಲಿ ಹೇಳಲಾಗಿದೆ.

'ಮುಂಗಲಿ ಹಾವಿಗೆ ಶತ್ರುವೆ ? ' ಎಂಬ ಲೇಖನದಲ್ಲಿ ಅಲ್ಲ ಎಂದು ಹೇಳಲಾಗಿದೆ.

ಲೇಡಿ ಗೊಡೈವಾ ಬಗ್ಗೆ ಎಲ್ಲಿಯೋ ಓದಿದ್ದೆ. ಆಕೆ ಮತ್ತು ಪೀಪಿಂಗ್ ಟಾಮ್ ಬಗ್ಗೆ ಇಲ್ಲಿ 'ಲೇಡಿ ಗೋಡಿವಾ' ಎಂಬ ಲೇಖನದಲ್ಲಿ ಮಾಹಿತಿ ಇದೆ.