ಡಿಸೆಂಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಇದರಲ್ಲಿ ಒಂದು ಲೇಖನದಲ್ಲಿ ಡಾಕ್ಟರ್ ಎಸ್ ರಾಧಾಕೃಷ್ಣನ್ ಅವರು ಹೀಗೆ ಹೇಳಿದ್ದಾರೆ.
'ಧಾರ್ಮಿಕ ವಿಷಯದಲ್ಲಿ ಪ್ರತಿಪಾದನೆಯ ಹಠ ಮತ್ತು ನಿರಾಕರಣೆಯ ಹಠ ಎರಡನ್ನೂ ಬಿಡಬೇಕು.ಅವು ಸಂಕುಚಿತ ಮನಸ್ಸು ಅಥವಾ ಅಂಧಶೃದ್ಧೆಯ ಪರಿಣಾಮಗಳು.
ನಾವು ವಾಸಿಸುತ್ತಿರುವ ಜಗತ್ತಿನ ಸಮಸ್ಯೆಗಳಿಗೆ ಧರ್ಮವು ಸಂಪೂರ್ಣವಾಗಿ ಅಸಂಗತವಾಗಿದೆ. '
ಪಾಸ್ಟರ್ ನ್ಯಾಕ್ ಎಂಬ ರಷ್ಯನ್ ಲೇಖಕನಿಗೆ ಆತನ ಡಾಕ್ಟರ್ ಜೀವಾಗೋ ಕಾದಂಬರಿಗೆ ನೊಬೆಲ್ ಪ್ರಶಸ್ತಿ ಅವನಿಗೆ ಕೊಟ್ಟರಂತೆ. ಆದರೆ ಆತನ ಮೇಲೆ ಟೀಕೆಯ ಮಳೆ ಸುರಿದವಂತೆ. ಈ ಬಗ್ಗೆ ಒಂದು ಲೇಖನ ಇದೆ.
'ಪಕ್ಷಿ ಪ್ರಪಂಚದ ಧೂರ್ತ: ಕೋಗಿಲೆ' ಎಂಬ ಲೇಖನ ಇದೆ ಇಲ್ಲಿ! 'ಹರಾಮ್ ಆರಾಮ್ ಹೈ ' ಎಂಬುದು ಅದರ ತತ್ವವಂತೆ.
' ದೇವರು ಸರ್ವ ಶಕ್ತನಲ್ಲ ' ಎಂಬ ಲೇಖನದಲ್ಲಿ ಆತ ಆತ್ಮಹತ್ಯೆ ಮಾಡಿಕೊಳ್ಳಲಾರ ಎಂದು ಹೇಳಿದೆ.
ಸ್ವಾಮಿ ವಿವೇಕಾನಂದರನ್ನು ಅಮೇರಿಕಕ್ಕೆ ಕಳಿಸಿದವರು ಕನ್ನಡಿಗರಂತೆ. ಇದನ್ನು 'ಅವರು ವಿವೇಕಾನಂದರನ್ನು ಅಮೇರಿಕಕ್ಕೆ ಕಳಿಸಿದರು' ಲೇಖನದಲ್ಲಿ ಓದಬಹುದು.
ಪುಸ್ತಕ ವಿಭಾಗದಲ್ಲಿ 'ಶಿವಾಜಿಯಿಂದ ಔರಂಗಜೇಬನ ಮುಖಭಂಗ' ಇದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!