ಮಾರ್ಚ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ನಾವೆಲ್ಲ ಸತ್ಯ ನಾರಾಯಣನ ವ್ರತ ಮಾಡುತ್ತೀವಿ ಆದರೆ ಈ ವ್ರತ ಸುಮಾರು ಎರಡು ನೂರೇ ವರ್ಷ ಹಳೆಯದು ಎಂದು ನಿಮಗೆ ಗೊತ್ತೇ ? ಇದು 'ಸತ್ಯ- ನಾರಾಯಣ ಯಾರು? ' ಎಂಬ ಲೇಖನದಲ್ಲಿದೆ.

ಮಜ್ಜಿಗೆಯಲ್ಲಿ ನಾಲ್ಕು ಬಗೆಗಳಿವೆ ಅಂತೆ. ನೀರು ಎಷ್ಟು ಹಾಕುತ್ತೀರೋ, ಬೆಣ್ಣೆಯನ್ನು ತೆಗೆಯುತ್ತೀರೋ ಎಂಬುದನ್ನು ಅವಲಂಬಿಸಿ. ನಾಲ್ಕು ಬಗೆಯ ಮಜ್ಜಿಗೆಗಳಿಗೆ ಏನು ಹೆಸರು, ಹಾಗೂ ಅವರಿಂದ ಆರೋಗ್ಯಕ್ಕೆ ಏನು ಲಾಭ ಎಂಬುದನ್ನು ಮಜ್ಜಿಗೆ ಎಂಬ ಲೇಖನದಲ್ಲಿ ನೋಡಿರಿ.

'ಕ್ಷೇತ್ರ ರಾಜ ಕಾಶಿ' ಎಂಬ ಒಂದು ಲೇಖನವು ಇಲ್ಲಿ ಭಾರತದ ಸಂಯುಕ್ತ ಸಂಸ್ಕೃತಿಯ ಬೀಜಾರೋಪನವಾಯಿತು

ಅಡಿ ಬರಹದೊಂದಿಗೆ ಇಲ್ಲಿದೆ.

ಎತ್ತರದ ಅಣೆಕಟ್ಟು ಭಾಕರಾ ಬಗೆಗೆ ಒಂದು ಲೇಖನವಿದೆ . ಅದರ ತಲೆ ಬರಹ - ಭಾಕಡಾ ಅಣೆಕಟ್ಟು.

ಪುಸ್ತಕ ವಿಭಾಗದಲ್ಲಿ ಗಳಗನಾಥರ ಕಾದಂಬರಿ 'ಕುಮುದಿನಿ' ಯ ಸಂಗ್ರಹ ಇದೆ. ಈ ಕಾದಂಬರಿಯಿಂದ ಎಚ್ಚಮ ನಾಯಕನ ಪರಿಚಯ ನಿಮಗೆ ಆಗುತ್ತದೆ. (ಈಗಾಗಲೇ ನಿಮಗೆ ಇರದಿದ್ದರೆ). ನಾನು ಓದಿದ ಈ ಕಸ್ತೂರಿಯ ಕೊನೆ ಪುಟಗಳು ನಾಪತ್ತೆ ಆಗಿದ್ದರಿಂದ ನನಗೆ ಈ ಕತೆಯು ನನಗೆ ಪೂರ್ತಿ ಸಿಗಲಿಲ್ಲ . ಬೇರೆಡೆ ನೋಡಬೇಕೇನೋ.