ಜುಲೈ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಬರ್ಮಾದೇಶವು ಭಾರತದಲ್ಲಿ ಸೇರ್ಪಡೆಯಾಗುತ್ತಂತೆ. ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ಇದೆ. ನಿಜವೋ ಸುಳ್ಳೋ . ಈ ಕಸ್ತೂರಿಯಲ್ಲಂತೂ 'ಸ್ವರ್ಣ ದ್ವೀಪ ಬರ್ಮಾ ' ಎಂಬುದೊಂದು ಲೇಖನವಿದೆ . ಭಾರತೀಯರು ಇದನ್ನು ಸ್ವರ್ಣದ್ವೀಪ ಅಂತ ಕರೆದಿದ್ದಾರಂತೆ.ಈ ದೇಶದ ನಿವಾಸಿಗಳು ಚೀನಿಯರು. ಆದರೆ ಚೀನಾ ದೇಶದ ಮಾತು ನಡೆಯುವುದಿಲ್ಲ. ಭಾರತದ ಬೌದ್ಧ ಧರ್ಮವನ್ನು ಇಲ್ಲಿನ ಹೆಚ್ಚು ಜನರು ಪಾಲಿಸುತ್ತಾರೆ. ಕೇವಲ 60 ವರ್ಷ ಮಾತ್ರ ಇನ್ನೊಂದು ದೇಶದ ಕೆಳಗಿದ್ದರು. ಇಲ್ಲಿನ ಜನರು ಅತ್ಯಂತ ಸುಖಿಗಳಂತೆ. ಇವರು ಉದಾರರು ಮತ್ತು ನಿಶ್ಚಿಂತರಂತೆ.
ಪುರಿ ಶಂಕರಾಚಾರ್ಯರ ಬಗ್ಗೆ ಇಲ್ಲಿ ಒಂದು ಲೇಖನ ಇದೆ. ನನಗೆ ಗೊತ್ತಿರುವ ಶಂಕರಾಚಾರ್ಯರು ಒಬ್ಬರೇ ಆದರೆ ಅವರು ದೇಶದ ನಾಲ್ಕು ದಿಕ್ಕುಗಳಲ್ಲಿ ಒಂದೊಂದು ಮಠವನ್ನು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಪುರಿ ಒಂದು. ಆ ಪುರಿಯ ಮಠಾಧೀಶರನ್ನು ಪುರಿ ಶಂಕರಾಚಾರ್ಯರು ಎನ್ನುವುದು . ಅವರು ಪಶ್ಚಿಮ ದೇಶಗಳಲ್ಲಿ ಸರ್ವಧರ್ಮಗಳ ಮೂಲ ಐಕ್ಯವನ್ನು ಪ್ರತಿಪಾದಿಸಿದ್ದಾರಂತೆ, ಕ್ರಿಸ್ತ ಹಾಗೂ ಹಿಂದೂ ಮತಗಳ ವಿಶ್ವಾಸಗಳಲ್ಲಿ ಸಾಮ್ಯವನ್ನು ತೋರಿಸಿಕೊಟ್ಟಿದ್ದಾರಂತೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!