ಸೆಪ್ಟೆಂಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಇದರಲ್ಲಿ ಬರ್ಟ್ರಾಂಡ್ ರಸೆಲ್ ಬಗೆಗೆ ಒಂದು ಲೇಖನ ಇದೆ.ಅವರು ಬರೆದ ಪ್ರಿನ್ಸಿಪಿಯ ಮ್ಯಾಥೆಮ್ಯಾಟಿಕ ಜಗತ್ತಿನ ಪ್ರಮುಖ 100 ಪುಸ್ತಕಗಳಲ್ಲಿ ಒಂದಂತೆ. ಮೂರು ಭಾಗಗಳಲ್ಲಿರುವ ಅದನ್ನು archive.org ತಾಣದಿಂದಲೇ ಉಚಿತವಾಗಿ ಇಳಿಸಿಕೊಂಡಿದ್ದು ಓದಿ ನಿಮಗೆ ತಿಳಿಸುತ್ತೇನೆ.
ಸಂಸ್ಕೃತವು ಗ್ರೀಕ್ ಲ್ಯಾಟಿನ್ ಭಾಷೆಗಳ ಅಕ್ಕನಂತೆ . ಭಾಷಾಶಾಸ್ತ್ರಜ್ಞ ಕತ್ರೆ ಅವರ ಕುರಿತ ಲೇಖನದಲ್ಲಿ ಹೀಗೆ
ಹೇಳಲಾಗಿದೆ. ಸಂಸ್ಕೃತದ ಶೇ 40 ರಷ್ಟು ಶಬ್ದಗಳು ಪರಭಾಷೆಗಳಿಂದ ಬಂದಿವೆಯಂತೆ.
ಅಶ್ವಮೇಧವೆಂದರೇನು? ಎಂಬ ಲೇಖನದಲ್ಲಿ ಶ್ರೀರಾಮನು ರಾವಣವಧೆಯಿಂದ ಆದ ಬ್ರಹ್ಮಹೃತ್ಯಾದೋಷವನ್ನು (ರಾವಣನು ಒಬ್ಬ ಬ್ರಾಹ್ಮಣನು) ನಿವಾರಿಸಿಕೊಳ್ಳಲು ಅಶ್ವಮೇಧ ಯಾಗವನ್ನು ಮಾಡಿದ ಎಂದು ಇದೆ.
ಯಾಗವನ್ನು ಯಾರು ಯಾರು ಮಾಡಿದರು ?ಅದು ಏಕೆ ಕಠಿಣ ? ಅದರ ಲಾಭಗಳು ಏನು? ಕೊನೆಯದಾಗಿ ಮಾಡಿದವರು ಯಾರು. ಎಂದೆಲ್ಲ ಮಾಹಿತಿ ಇಲ್ಲಿದೆ . ಮೊಘಲ್ ರಾಜರ ವಿರುದ್ಧ ಹೋರಾಡಿ ಮಡಿದ ರಾಣಿ ದುರ್ಗಾವತಿಯ ಮಾಹಿತಿಯು ನಿಮಗೆ ಸಿಗುತ್ತದೆ.
ಐವಾನ್ ಸರ್ವೇವಿಚ್ ತುರ್ಗೆನೇವ್ ಎಂಬಾತನು ಬರೆದ ಮುಮೂ ಎಂಬ ನೀಳ್ಗತೆಯ ಸಂಗ್ರಹ ಪುಸ್ತಕವಿಭಾಗದಲ್ಲಿದೆ.
ಅದನ್ನು ಓದಲು ಯತ್ನಿಸಿದೆ ಆದರೆ ಯಾಕೋ ಅಪೂರ್ಣವಾಗಿತ್ತು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!