ಫೆಬ್ರವರಿ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಇದರ ಪುಸ್ತಕ ವಿಭಾಗದಲ್ಲಿ ಭವಾಲ್ ಸನ್ಯಾಸಿಯ ಕಥೆ ಇದೆ. ಈ ಭವಾಲ್ ಸನ್ಯಾಸಿಯ ಕಥೆಯನ್ನು ನೀವು ಕೇಳಿರಬಹುದು. ಪಶ್ಚಿಮ ಬಂಗಾಳದಲ್ಲಿ ಒಂದು ಸಂಸ್ಥಾನ ಇರುತ್ತದೆ, ಅದರ ಮಾಲೀಕರಲ್ಲಿ ಎರಡನೇ ಮಗನು ಸತ್ತು ಹೋಗಿ ಎಷ್ಟೋ ವರ್ಷಗಳ ನಂತರ ಪ್ರತ್ಯಕ್ಷನಾಗುತ್ತಾನೆ. ನಾನು ಸತ್ತಿಲ್ಲ ಎಂದು ಹೇಳುತ್ತಾನೆ. ಎರಡು ಮೂರು ಕೋರ್ಟುಗಳು ಇದನ್ನು ನಿರ್ಣಯ ಮಾಡುತ್ತವೆ. ಬಹುಶಃ ಪ್ರಿವೀ ಕೌನ್ಸಿಲ್ ಅನ್ನು ತಲುಪುತ್ತದೆ: ಕೋರ್ಟಿನ ಕೊನೆಯ ತೀರ್ಮಾನದಂತೆ
ಅವನು ಸತ್ತಿರುವುದಿಲ್ಲ ಸನ್ಯಾಸಿಯೇ ಆ ಎರಡನೇ ಮಗನಾಗಿರುತ್ತಾನೆ. ಆದರೆ ಆ ಆಸ್ತಿಯನ್ನು ಅನುಭವಿಸಲು ಅವನು ಹೆಚ್ಚು ಕಾಲ ಬದುಕಿರುವುದಿಲ್ಲ.
ಈ ಕಥೆಯನ್ನು ವಿವರವಾಗಿ ತಿಳಿಯಲು ಈ ಕಸ್ತೂರಿಯನ್ನು ನೀವು ಓದಬೇಕು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!