ಮಾರ್ಚ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ 'ಕುಣಾಲನ ಕರುಣ ಕಥೆ ' ಎಂಬ ಲೇಖನವನ್ನು ಓದಿದೆ .ಅಶೋಕನ ಮಗ ಕುಣಾಲನ ಬಗ್ಗೆ ನನಗೆ ಗೊತ್ತಿತ್ತಾದರೂ ಇಲ್ಲಿ ಬಂದ ಒಂದು ವಾಕ್ಯವು- ರಾಮಾಯಣ ಕೈಕೆಯನ್ನು ಕನ್ನಡದ ಕುಮಾರ ರಾಮನನ್ನು ನೆನಪಿಗೆ ತರುವ - ಎಂಬ ವಾಕ್ಯವನ್ನು ಓದಿ ಕುಮಾರರಾಮನ ಬಗ್ಗೆ ನನಗೆ ಏನೂ ಗೊತ್ತಿಲ್ಲವಲ್ಲ ಎಂಬ ವಿಚಾರದಿಂದ 'ಕುಮಾರರಾಮ ' ಎಂದು archive.org ನಲ್ಲಿ ಹುಡುಕಿದಾಗ 'ಗಂಡುಗಲಿ ಕುಮಾರರಾಮ' ಎಂಬ ಪುಸ್ತಕವು ಸಿಕ್ಕಿತು. ಅದನ್ನು ಇಳಿಸಿಕೊಂಡು ಓದಿದೆ . ಅದರಲ್ಲಿ ಕುಮಾರರಾಮ ಎಂಬುವನು ಹಂಪಿಯ ವಿಜಯನಗರ ಸ್ಥಾಪಕರ ಸಂಬಂಧಿಯೂ ಹಿಂದಿನ ತಲೆಮಾರೂ ಆದ ಪರನಾರಿ ಸೋದರ ಎಂದು ಖ್ಯಾತನಾದ ರಾಯ ಕುಮಾರರಾಮನ ಬಗ್ಗೆ ತಿಳಿದುಕೊಂಡೆ.
ಪುಸ್ತಕ ವಿಭಾಗದಲ್ಲಿ ದಾಸ್ತಾವ್ ಸ್ಕೀಯ ಕ್ರೈಂ ಅಂಡ್ ಪನಿಶ್ಮೆಂಟ್ ಕಾದಂಬರಿಯ ಸಂಗ್ರಹ ಇದೆ .ಸುಮಾರು ಕೇವಲ 20 ಪುಟಗಳಲ್ಲಿ ಅದರ ಸಂಗ್ರಹ ಕೊಟ್ಟಿದ್ದಾರೆ. ಅದನ್ನು ಓದಿದೆ ಆದರೆ ' ಅಪರಾಧ ಮತ್ತು ಶಿಕ್ಷೆ' ಎಂಬ ಹೆಸರಿನಲ್ಲಿ ನ 700 + ಪುಟಗಳ ಕಾದಂಬರಿಯ ಅನುವಾದವನ್ನು ಇಳಿಸಿಕೊಂಡಿದ್ದೇನೆ, ಮುಂದೆ ಎಂದಾದರೂ ಓದುವ ವಿಚಾರದಿಂದ.
ಹಳೆ ಕಸ್ತೂರಿಗಳನ್ನು ಓದುತ್ತಾ ಇದ್ದೇನಲ್ಲ ಅಲ್ಲಿ ಅನೇಕ ಒಳ್ಳೆಯ ವಾಕ್ಯಗಳು ಸಿಕ್ಕವು. ಅವುಗಳನ್ನು ಇಲ್ಲಿ ಹಂಚಿಕೊಂಡಿಲ್ಲ. ಆದರೆ ಬರೆದುಕೊಂಡಿದ್ದೇನೆ. ಆದರೆ ಈ ಕಸ್ತೂರಿಯಲ್ಲಿ ಸಿಕ್ಕ ಒಂದು ವಾಕ್ಯವು ಇಲ್ಲಿದೆ. ಅದನ್ನು ಹಂಚಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಅನ್ನಿಸಿತು
ಮನೆ ಬಿಡದೆ ಲೋಕವನ್ನು ಅರಿಯಬಹುದು ಕಿಟಕಿಯಿಂದ ಹಣಿಕೆ ಹಾಕದೆ ಆಕಾಶವನ್ನು ಕಾಣಬಹುದು - ಲಾಓತ್ಸೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!