ಎಪ್ರಿಲ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಅದರ 21 ನೇ ಪುಟದಲ್ಲಿ ಒಂದು ಗಣಿತ ಸಮಸ್ಯೆ ಹಾಗೂ ಅದರ ಉತ್ತರ ಇದೆ

ಅದು ಈ ತರ ಇದೆ ಒಬ್ಬನು ಮೂರು ದೇವಸ್ಥಾನಗಳಿಗೆ ಕೆಲವು ಹೂವು ತೆಗೆದುಕೊಂಡು ಹೋಗುತ್ತಾನೆ . ಆ ದೇವಸ್ಥಾನಗಳಲ್ಲಿ ದೇವರಿಗೆ ಅಷ್ಟೇ ಸಂಖ್ಯೆಯ ಹೂಗಳನ್ನು ಅರ್ಪಿಸುತ್ತಾನೆ ಅದಕ್ಕೆ ಮೊದಲು ಆ ದೇವಸ್ಥಾನಗಳ ಮುಂದೆ ಇರುವ ಕೊಳಗಳಲ್ಲಿ ಮುಳುಗಿಸಿ ತೊಳೆದಿರುತ್ತಾನೆ. ಆ ಕೊಳಗಳಲ್ಲಿ ಹೂಗಳ ಸಂಖ್ಯೆ ಮುಳುಗಿಸಿದ ಹೂಗಳ ಸಂಖ್ಯೆ ಎರಡು ಪಟ್ಟು ಆಗುತ್ತದೆ. ಮೂರನೇ ದೇವಸ್ಥಾನದ ಅಂತ್ಯದಲ್ಲಿ ಅವನ ಕೈಯಲ್ಲಿ ಯಾವುದೇ ಹೂವು. ಉಳಿದಿರುವುದಿಲ್ಲ

ಹಾಗಾದರೆ ಅವನು ಮೂಲದಲ್ಲಿ ತಂದ ಹೂಗಳು ಎಷ್ಟು? ದೇವಸ್ಥಾನಗಳಲ್ಲಿ ಏರಿಸಿದ ಹೂವುಗಳು ಎಷ್ಟು?

ಇದಕ್ಕೆ ಉತ್ತರವಾಗಿ ಮೂಲದಲ್ಲಿ ಕೊಂಡೊಯ್ಡ ಹೂಗಳು 7, ಅವನು ಪ್ರತಿ ದೇವಾಲಯದಲ್ಲಿ ಅರ್ಪಿಸಿದ್ದು 8 ಹೂ ಎಂಬ ಉತ್ತರವನ್ನು ಕೊಟ್ಟಿದ್ದಾರೆ.

ಆದರೆ 14,16 ಮತ್ತು 21 24 ಕೂಡ ಸರಿ ಅಲ್ಲವೇ? ಅಷ್ಟೇ ಅಲ್ಲ, 7:8 ರ ಪ್ರಮಾಣದಲ್ಲಿರುವ ಯಾವದೇ ಉತ್ತರಗಳು

ಸರಿ ಅಲ್ಲವೇ ?

ಭಾರತ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿನ ಹೊಸ ಭೂತಾಸಿಂಗ್ ಎಂಬಾತನ ಪ್ರೇಮ ಕಥೆ ಇಲ್ಲಿ ಬಂದಿದೆ ಅದನ್ನು ನೀವು ಓದಲೇಬೇಕು.

ಭಾರತ ಅತ್ಯಂತ ಯೋಜನಾಬದ್ಧ ನಗರ ಎಂದು ಹೆಸರಾದ ಚಂಡಿಗಢ ಬಗ್ಗೆ ಇಲ್ಲಿ ಒಂದು ಲೇಖನ ಇದೆ. ಪಂಜಾಬ್ ತುಂಡಾಗಿ ಲಾಹೋರ್ ಸಮೇತ ಪಾಕಿಸ್ತಾನಕ್ಕೆ ಹೋದ ನಂತರ ಭಾರತದಲ್ಲಿ ಉಳಿದ ಪಂಜಾಬಕ್ಕೆ ರಾಜಧಾನಿ ಇಲ್ಲದ್ದರಿಂದ ಚಂದಿಗಢವನ್ನು ಕಟ್ಟಲಾಯಿತಂತೆ.

ಚೀನಾದ ಕೆಟ್ಟ ಹೆಸರಿನ ರಾಸ್ಪುಟಿನ್ ಎಂಬ ಸಂತನ ಕುರಿತು ಲೇಖನ ಇದೆ. ರಾಸ್ಪುಟಿನ್ ಎಂದರೆ "ಹೊಲಸು ಮನುಷ್ಯ" ಎಂದು ಈತನನ್ನು ಜನರು ಕರೆದಿದ್ದರಂತೆ.