ಡಿಸೆಂಬರ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.

ಮಹಾತ್ಮ ಗಾಂಧೀಜಿ ಕುರಿತು 'ಗಾಂಧೀಜಿಗೆ ಮನಸೋತ ಸೋಮಾಲಿ ' ಎಂಬ ಒಂದು ಲೇಖನ ಇದೆ. ಆಗ ಗಾಂಧೀಜಿಯವರನ್ನು ಬ್ರಿಟಿಷರು ಜೈಲಿಗೆ ಹಾಕಿದ್ದರು. ಒಬ್ಬ ಹಿಂದೂ ಅಥವಾ ಮುಸ್ಲಿಂ ಗಾಂಧೀಯ ಜೈಲಿಗೆ  ವಾರ್ಡನ್ ಇರಬಾರದೆಂದು ಬ್ರಿಟಿಷರು  ಒಬ್ಬ ಸೊಮಾಲಿಯಾ ದೇಶದವನನ್ನು ಆ ಜೈಲಿಗೆ ವಾರ್ಡನ್ ಮಾಡುತ್ತಾರೆ. ಗಾಂಧೀಜಿ ಅವನ ಮೇಲೆ ಹೇಗೆ ಪ್ರಭಾವ ಬೀರಿದರು ಮತ್ತು ಗಾಂಧೀಜಿ ಜೈಲಿನಲ್ಲಿದ್ದಾಗ ಹೇಗಿರುತ್ತಿದ್ದರು ಎಂದು ಈ  ಲೇಖನ ಓದಿದರೆ ಗೊತ್ತಾಗುತ್ತದೆ.

ಇದರಲ್ಲಿ 'ಧೀರರ ನಾಡು ನಾರ್ವೆ' ಎಂಬ ಒಂದು ಲೇಖನ ಇದೆ. ಇದನ್ನು ಓದಿ ನಾರ್ವೆ ಜನರ ವಿಶೇಷ ತಿಳಿದುಕೊಂಡೆ. ಇಲ್ಲಿನ ಒಂದು ಸ್ಮಾರಕದ ಚಿತ್ರವನ್ನೂ ನೋಡಿದೆ. ಈ ಸ್ಮಾರಕದ ಚಿತ್ರವನ್ನು ನಾನು ನೋಡಿದ್ದೆನಾದರೂ  ಅದು ಇಲ್ಲಿಯದೆಂದು ಗೊತ್ತಿರಲಿಲ್ಲ. 

'ಇದುವೆ ಜೀವ ಇದು ಜೀವನ' ಎಂಬ ಅಂಕಣದಲ್ಲಿ  use less water ಎಂಬ ಬೋರ್ಡನ್ನು useless water ಎಂದು ಬರೆದಿದ್ದನ್ನು ತಿಳಿದೆ.

ನೆಹರೂ ಅವರ ಪತ್ನಿ ವಿಯೋಗ ಕುರಿತು Discovery of india  ದಲ್ಲಿ ಬರೆದದ್ದು ಇಲ್ಲಿ ಬಂದಿದೆ. 

ಇಂಗ್ಲೆಂಡಿನ ರಾಜನೊಬ್ಬ ತನ್ನ ಪ್ರೀತಿಯ ಹೆಣ್ಣಿಗಾಗಿ ಸಿಂಹಾಸನವನ್ನು ತ್ಯಾಗ ಮಾಡಿದ ಸಂಗತಿ ನೀವು ಕೇಳಿರಬಹುದು. ಆ ಸಂಗತಿಯನ್ನು ಇಲ್ಲಿನ ಪುಸ್ತಕ ವಿಭಾಗದಲ್ಲಿ ನೀವು ಓದಬಹುದು.