ಇತ್ತೀಚಿಗೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ 51ನೇ ಸಂಪುಟದ ಎರಡನೇ ಸಂಚಿಕೆ - ಒಟ್ಟಾರೆ ಸಂಚಿಕೆ ಸಂಖ್ಯೆ 200ನ್ನು ತಿರುವಿ ಹಾಕಿದೆ , archive.org ತಾಣದಿಂದ ಇಳಿಸಿಕೊಂಡು. ಈ ಪ್ರಬುದ್ಧ ಕರ್ನಾಟಕವು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೆ .ನಾನು ಓದಿದ ಈ ಸಂಚಿಕೆಯ1969 ರಲ್ಲಿ ಪ್ರಕಟವಾಗಿದೆ.
ಭಾರತ ಸಾಹಿತ್ಯದಲ್ಲಿ ಸಾಮಾನ್ಯ ಜನರ ಬಗೆಗೆ ಪುಸ್ತಕಗಳು ಇಲ್ಲವಂತೆ ! ಸಾಮಾನ್ಯವಾಗಿ ನಮ್ಮಲ್ಲಿ ದೇವತೆಗಳ ಮತ್ತು ರಾಜರ ಚರಿತ್ರೆ ಇರುತ್ತದಂತೆ. ಸಾಮಾನ್ಯ ಜನರ ಬಗ್ಗೆ ನಾವು ತಿಳಿಯದೇ ಇರುವವರಿಗೆ ನಮ್ಮ ಉದ್ದಾರ ಆಗುವುದಿಲ್ಲವಂತೆ. ಇದು ಉತ್ತಂಗಿ ಚನ್ನಬಸಪ್ಪನವರ ಬಗ್ಗೆ ಇರುವ 'ಉತ್ತುಂಗ ಸಾಹಿತಿ ಉತ್ತಂಗಿ' ಎಂಬ ಲೇಖನದಲ್ಲಿ ಇದೆ. ನಮ್ಮ ದೇಶದಲ್ಲಿ ಜಾತಿಯ ಸಂಬಂಧ ದುರಭಿಮಾನವು ಹೆಚ್ಚಿದೆ ಅಂತೆ. ಭಾರತೀಯ ನೊಬ್ಬನ ಸರಾಸರಿ ಆಯಸ್ಸು 26 ಅಂತೆ ! (ಆಗ 26 ಇದ್ದಿರಬಹುದು) ನನ್ನ ವಯಸ್ಸಿನ 25 ವರ್ಷಗಳನ್ನು ಅವನು ವಿದ್ಯಾರ್ಜನೆಯಲ್ಲಿ ಕಳೆಯುವನು ಅಂತೆ ! ' ಎಂಟು - ಹತ್ತು ವರ್ಷ ವಯಸ್ಸಿನಕನ್ನಡ ಬಲ್ಲ ವಿದ್ಯಾರ್ಥಿಯನ್ನು ನನ್ನ ಬಳಿ ಬಿಟ್ಟರೆ ಆರೇ ತಿಂಗಳಲ್ಲಿ ಅವನಿಗೆ ಇಂಗ್ಲಿಷ್ ಓದಲು ಬರೆಯಲು ಸರಿಯಾಗಿ ಮಾತನಾಡಲು ಬರುವಂತೆ ಮಾಡಬಲ್ಲೆ' ಎಂದು ಉತ್ತಂಗಿ ಚನ್ನಬಸಪ್ಪ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡದ ಸೇರೆಗಾರರು ಎಂಬ ಲೇಖನದಲ್ಲಿ ಅಲ್ಲಿ ಜನರು - ಪ್ರಮುಖವಾಗಿ ದೇವಾಡಿಗರ ಕುರಿತು ಮಾಹಿತಿ ಸಿಗುತ್ತದೆ.
ಇಲ್ಲಿ ರಾಷ್ಟ್ರಕೂಟ ೧ ನೇ ಅಮೋಘವರ್ಷನ ರಾಮದುರ್ಗ ಶಾಸನ ಎಂಬ ಲೇಖನವೂ ಇದೆ.
ಸಂಸ್ಕೃತದಲ್ಲಿ ಗಾಯತ್ರಿ ಹೇಗೋ ಹಾಗೆ ಕನ್ನಡದಲ್ಲಿ ತ್ರಿಪದಿ ಅಂತೆ. ಹೀಗೆ ತ್ರಿಪದಿಗಳ ಬಗ್ಗೆ ಇರುವ ಇನ್ನೊಂದು ಲೇಖನದಲ್ಲಿ ಹೇಳುತ್ತಾರೆ. ನಳಂದ ವಿದ್ಯಾಪೀಠದ ಕುರಿತೂ ಒಂದು ಲೇಖನ ಇದೆ.
ಗಾಣಿಗಾಪುರ ಕ್ಷೇತ್ರದ ಶ್ರೀ ನರಸಿಂಹ ಸರಸ್ವತಿಯವರು ದತ್ತಾತ್ರೇಯನ 3 ನೇ ಅವತಾರವೆಂದು ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಪ್ರಸಿದ್ಧಿ ಆಗಿದ್ದಾರಂತೆ. (ಗುರುಚರಿತ್ರೆಯು ಅವರ ಚರಿತ್ರೆಗೆ ಸಂಬಂಧ ಪಟ್ಟ ಗ್ರಂಥವಂತೆ ) ಅವರ ಕಾಲನಿರ್ಣಯದ ಕುರಿತಾಗಿ ಇಲ್ಲಿ ಒಂದು ಲೇಖನವಿದೆ. ಗುರುಚರಿತ್ರೆಯ ಮೂಲ ಪುಸ್ತಕ ಕನ್ನಡದಲ್ಲಿ ಇದ್ದು ಅದನ್ನು ಮರಾಠಿಯಲ್ಲಿ ಮಾಡಲಾಗಿದೆ ಅಂತೆ. ಗುರುಚರಿತ್ರೆಯಲ್ಲಿ ಅನೇಕ ಕನ್ನಡ ಪದಗಳಿವೆ ಅಂತೆ. ಜ್ಞಾನೇಶ್ವರ ನಾಥ ಪಂಥದ ಗುರು ಅಂತೆ ನನಗೆ ಗೊತ್ತಿರಲಿಲ್ಲ.
ಆರ್ಥಿಕ ಮೀಮಾಂಸೆಯ ಒಂದು ಲೇಖನವೂ ಇಲ್ಲಿ ಇದೆ.
ಬಸವಣ್ಣನವರು 88 ಪವಾಡಗಳನ್ನು ಮಾಡಿದರಂತೆ. ಆ ಪವಾಡಗಳಲ್ಲಿ ವಿಜ್ಞಾನ ದರ್ಶನ ಎಂಬ ಲೇಖನವೂ ಇಲ್ಲಿ ಇದೆ.
ಪುಸ್ತಕ ಭಂಡಾರಗಳ ಬಗೆಗೆ ಒಂದು ಕಾಯದೆ ಇದೆಯಂತೆ. ಬೀದರಿನಲ್ಲಿ ಇದ್ದ ಬಹುಮನಿ ಸಾಮ್ರಾಜ್ಯದ ಮಹಮ್ಮೂದ ಗವಾನನ ಕುರಿತೂ ಈ ಭಂಡಾರಗಳ ಕಾಯದೆ ಕುರಿತೂ ಇರುವ ಪುಸ್ತಕಗಳ ಅರಿವು ನನಗೆ ಆಯಿತು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!