ಮುನ್ನೂರರವತ್ತೈದು ದಿನಗಳು

ಒಂದು ವರ್ಷ

(ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!)

ಎಂಬತ್ತು+ ಬ್ಲಾಗ್ ಬರಹಗಳು

ಕೈಬೆರಳೆಣಿಕೆಯ ಲೇಖನಗಳು

ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು

ಭಾಗವಹಿಸಿದ ಹತ್ತಾರು ಚರ್ಚೆಗಳು

ತಿಳಿದ ಹೊಸ ವಿಷಯಗಳು ಹಲವಾರು

ಅದರಲ್ಲರಗಿಸಿಕೊಂಡವು ನಾಕಾರು

ಹೊಸ ಗೆಳೆಯರು ಒಂದಷ್ಟು!

 

ಸಿಕ್ಕಿದ ಸಂತಸ - ಎಣೆ ಇರದಷ್ಟು!

 

ಈ ಸಂತಸ ತಂದ ಸಂಪದಕ್ಕೆ ನಾನು ಇನ್ನೇನು ತಾನೇ ಹೇಳಲಿ?

 

ಬಹುಶ: ಈ ನನ್ನ ___LINK_OPEN_href="/blog/hamsanandi/28/02/2007/3301" target="_blank" title="march-1-2007"___ಮೊದಲ ಬ್ಲಾಗು ಒಂದು ವರ್ಷ ಬಾಳಿದ್ದು ನನ್ನ ___LINK_OPEN_href="/blog/hamsanandi/22/02/2008/7578" target="_blank" title="punyada phala"___ಪುಣ್ಯದ ಫಲ ವೇ ಇರಬೇಕು!

ಸಂಪದದ ಹಿಂದಿರುವ ಹರಿಪ್ರಸಾದ್ ನಾಡಿಗರಿಗೂ, ಅವರ ತಂಡಕ್ಕೂ, ಮತ್ತೆ ಈ ತಾಣ ಇಷ್ಟು ಕಳೆಕಳೆಯಾಗಿರಲು ಕಾರಣರಾದ ಇಲ್ಲಿ ಭಾಗವಹಿಸುತ್ತಿರುವ ಸಂಪದಿಗರೆಲ್ಲರಿಗೂ ನನ್ನ ನೂರು ನಮನಗಳು!

-ಹಂಸಾನಂದಿ

(ನನ್ನ (mostly) ಇಂಗ್ಲಿಷ್ ಬ್ಲಾಗ್ 

ಅಲ್ಲಿದೆ ನಮ್ಮ ಮನೆ:- http://neelanjana.wordpress.com/ )