೪೦ (Ruby) ನೆಯ ವರ್ಷದ ದಾಂಪತ್ಯದ ಶುಭ ಸಮಾರಂಭದ ಹೊಸ್ತಿಲಿನಲ್ಲಿ (ಜೂನ್ ೧೦ ರಂದು) ನಮ್ಮನ್ನು ಎತ್ತಿ ತಂದು ನಿಲ್ಲಿಸಿದ ಆ ಅಗೋಚರ ಶಕ್ತಿಗೆ ನಮನಗಳು. ನಿರಂತರವಾಗಿ ಓಡುತ್ತಿರುವ ಈ ಜೀವನ ಪಥದಲ್ಲಿ ಮನುಷ್ಯನ ಬಾಳು ಬಹಳ ಕಡಿಮೆ ಅವಧಿಯದು. ಹಾಗೆ ನೋಡಿದರೆ ೭೦ + ನಷ್ಟು ದೂರ ನಮ್ಮನ್ನು ನಡೆಸಿಮುನ್ನಡೆಸುತ್ತಿರುವ ಅವ್ಯಕ್ತ ಸೂತ್ರಧಾರನಿಗೆ ನಮ್ಮ ಅನಂತ ವಂದನೆಗಳು.
ಯಾರೋ ಹೇಳಿದ ಮಾತು : ಎಷ್ಟು ವರ್ಷ ಜೀವಿಸಿದೆ ಅನ್ನುವುದು ಮುಖ್ಯವಲ್ಲ ಹೇಗೆ ಜೀವಿಸಿದೆ ಎನ್ನುವುದು ಅತಿ ಮುಖ್ಯ ! ಇದನ್ನು ನಮಗೆ ನಾವೇ ಪ್ರಶ್ನೆ ಹಾಕಿಕೊಂಡಾಗ ಅದಕ್ಕೆ ಸಿಗುವ ಉತ್ತರ ನಮ್ಮನ್ನು ಧೃತಿಗೆಡಿಸುತ್ತದೆ.
ಇಷ್ಟು ವರ್ಷ ನಾವು ಮಾಡಿದ್ದಾದರೂ ಏನು ?
ವಿದ್ಯಾಭ್ಯಾಸ, ನೌಕರಿ, ಮದುವೆ, ಮಕ್ಕಳು ಅವರ ಲಾಲನೆ ಪಾಲನೆ, ವಿದ್ಯಾಭ್ಯಾಸ, ಅವರ ವೃತ್ತಿಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದು, ಮತ್ತೆ ಅವರಿಗೆ ಮುಂಜಿ- ಮದುವೆ. ಮತ್ತೆ ಅದೇ ಚಕ್ರ ಪುನರಾವರ್ತನೆ ಆಗುತ್ತದೆ. ಇದೇ ತಾನೇ ನಾವು ಬಯಸುವ ಸುಂದ ಬಾಳಿನ ಒಂದು ಆಪ್ಯಾಯಮಾನವಾದ ಕ್ಷಣ ! ಇದನ್ನು ಬಿಟ್ಟು ನಿರ್ಲಿಪ್ತರಾಗಲು ಸಾಧ್ಯವಿಲ್ಲ.
ನಾವು ಜೀವನದ ಹೋರಾಟದಲ್ಲಿ ಏನೋ ಅದು-ಇದು ಮಾಡಿದ್ದೇವೆ. ಅದು 'ಏನೋ ಮಹಾ' ಎಂದು ಹೊಗಳುವಂತಹದೂ ಅಲ್ಲ. ಇಲ್ಲವೇ, 'ಜುಜುಬಿ ಎಂದು ಅಲ್ಲಗಳೆಯುವಂತಹದು ಅಲ್ಲ' ಎನ್ನುವುದು ನನ್ನ ಭಾವನೆ. ಎಲ್ಲರೂ ಅಮಿತಾಭ್ ಆಗಲು ಸಾಧ್ಯವೇ ?
ಇದು ಒಂದು ಭಾಗ ಹೌದು. ಆದರೆ ಇದೇ ಎಲ್ಲವೂ ಅಲ್ಲ. ನಮ್ಮ ಬೌಧ್ಧಿಕ ಜೀವನದಲ್ಲಿ ಸ್ವಲ್ಪ ಕಲಿಯುವ ಅಗತ್ಯ ಇದೆ. ನಮ್ಮ ಇಂದಿನ, ಸ್ವಲ್ಪವೂ ಅರಿವಿಲ್ಲದ ನಾಳೆಗಳ ಒಡೆಯನನ್ನು ತಿಳಿಯುವ ಆ ಬೃಹತ್ ಶಕ್ತಿಗೆ ನಮಿಸುವ ಕಡೆ ಸಾಗಬೇಕು. ಇದು ನಮ್ಮ ಅಂತಿಮ ಗುರಿಯಲ್ಲವೇ ?
ಈಗಾಗಲೇ ಮೊನ್ನೆ ನಮ್ಮ ದೇಶದ ಅತಿ ಮಹತ್ವದ ಸಿನಿ-ನಾಯಕ, ದೊಡ್ಡ ಕಲಾವಿದ ಶ್ರೀ. ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್, ಜೂನ್ ೩ ರಂದು, 'ರ‍್ಯೂಬಿ ವರ್ಷದ ಆನಂದವನ್ನು ಸವಿದರು' ! ಈಗ ಅದೇ ಸುಂದರ ಕ್ಷಣಗಳಿಗೆ ನಾವು ಕಾಯಿತ್ತಿದ್ದೇವೆ. ಇರುವಷ್ಟು ದಿನ ನಮ್ಮ ಕೆಲಸ ನಾವೇ ಮಾಡಿಕೊಳ್ಳುವಷ್ಟು ಮತ್ತು ಮಕ್ಕಳಿಗೆ ಹೊರೆಯಾಗದಂತೆ ನಮ್ಮಮುಂದಿನ ಜೀವಿತ ನಡೆಯಲಿ ಎನ್ನುವ ಆಸೆಯೊಂದಿಗೆ, ಸಂಪದದ ಗೆಳೆಯರಜೊತೆಗೆ ನಮ್ಮ ಈ ಅನುಭವವನ್ನು ಹಂಚಿಕೊಂಡಿದ್ದೇವೆ.
ನಮಸ್ಕಾರಗಳು. ಇದು ಎಲ್ಲರ ಜೀವನದಲ್ಲೂ ಬರುವಂತಹ ಸನ್ನಿವೇಶ ಅಲ್ಲವೇ ! ಮದುವೆ ಜೀವನ ಒಂದು ಘಟ್ಟ. ಅದರ ಮಹತ್ವವನ್ನೂ ಅರಿಯುವುದು ಮುಖ್ಯ. ಅದರಲ್ಲಿ ಕಹಿ-ಸಿಹಿ- ಸಂಭ್ರಮ, ಸೌದರ್ಯ, ಸಂತಾಪ, ಕೋಪ-ತಾಪ, ಕಲಿಕೆ, ತ್ಯಾಗ, ಅಗಲಿಕೆ, ಮಿಲನ, ಕೊರಗು, ಎಲ್ಲವೂ ತುಂಬಿದೆ.
ಅವನ್ನು ಅದೆಷ್ಟು ಜನ ಯಶಸ್ವಿಯಾಗಿ ತಮ್ಮದನ್ನಾಗಿ ಮಾಡಿಕೊಳ್ಳುವರೋ ಅವರೇ ಧನ್ಯರು.
-ಹೊರಂಲವೆಂ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ಮಮ್ತಾ" ಎನ್ನುವ ಚಿತ್ರದ ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ !
'ಯೇ ದಿಲ್ ನಾ ಹೋತ ಬೇಚಾರ' ಎಂಬ ಕಿಶೋರ್ ಹಾಡಿದ ಹಾಡು !
ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ ಮಾಡಿದ್ದೇಕೆ ?
ಎಂಬತ್ತರ ಕೊಯ್ಲಿನ ಕಾಳುಗಳು: ಎ. ಶಿವಶಂಕರ ರಾವ್ - ಮುಖಂಡತ್ವಕ್ಕೆ, ಅದರ ಪ್ರತಿಷ್ಠೆಗೆ ಹಂಬಲಿಸಿದವರಲ್ಲ - ಎಂ. ನಾರಾಯಣ ಮೂರ್ತಿ, ಎನ್.ಎನ್. ಸಂಸ್ಕೃತಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)