1863 ರಲ್ಲಿ ಬೆಂಗಳೂರಲ್ಲಿ ಮುದ್ರಿತವಾದ katha Sangraha or Canarese Selections - Prose- Compiled by Daniel Sanderson ಎಂಬ ಪುಸ್ತಕವು 500 ಕ್ಕೂ ಹೆಚ್ಚು ಪುಟ ಹೊಂದಿದ್ದು Archive.org ತಾಣದಲ್ಲಿದೆ.
ಅದನ್ನು ತಿರುವಿ ಹಾಕಿದಾಗ ನಾನು ಈಗಾಗಲೇ ಓದಿದ್ದ ಒಂದು ಕತೆಯು ಅಲ್ಲಿ ಪ್ರಾರಂಭದಲ್ಲಿ ಮತ್ತೆ ಸಿಕ್ಕಿತು. ಒಬ್ಬನು ತನ್ನ ಮಕ್ಕಳಿಗೆ 17 ಆನೆಗಳನ್ನು ಬಿಟ್ಟು ಸಾಯುತ್ತಾನೆ. ಸಾಯುವಾಗ ಅವನು ಮೊದಲ ಮಗನು 1/2 ರಷ್ಟನ್ನು ಎರಡನೇ ಮಗನು 1/3 ರಷ್ಟನ್ನು ಮತ್ತು ಮೂರನೇ ಮಗನು 1/9ರಷ್ಟನ್ನು ತೆಗೆದುಕೊಳ್ಳಲು ಹೇಳುತ್ತಾನೆ . ಅದು ಹೇಗೆ ಸಾಧ್ಯ ?
ಇದಕ್ಕೆ ಒಬ್ಬ ಜಾಣನು ಹೀಗೆ ಪರಿಹಾರ ಒದಗಿಸುತ್ತಾನೆ - ತನ್ನ ಒಂದು ಆನೆಯನ್ನು ಈ 17ಕ್ಕೆ ಸೇರಿಸಿ ಆ 17 ರಿಂದ 9,6,2 ನ್ನು ಅವರಿಗೆ ಕೊಟ್ಟು ತನ್ನ ಆನೆಯನ್ನು ತಗೊಂಡು ಹೋಗುತ್ತಾನೆ!
ಈ ಲೆಕ್ಕವನ್ನು ಬೇರೆ ರೀತಿಯಲ್ಲಿ ಬಿಡಿಸಲು ಸಾಧ್ಯವಿದೆಯೇ ? ಎಂದು ನಾನು ಯೋಚಿಸಿದೆ. ಸಾಯುವ ಮನುಷ್ಯನು 1/2 , 1 /3 , 1/9 ಆನೆಗಳನ್ನು ತೆಗೆದುಕೊಳ್ಳಲು ಮಕ್ಕಳಿಗೆ ಹೇಳಿದ್ದಾನಷ್ಟೇ . ಅಂದರೆ 1/2 :1/3: 1/9 ಈ ಪ್ರಮಾಣದಲ್ಲಿ ಅಂದರೆ 9/18:6/18:2/18 ಅಂದರೆ (ಒಟ್ಟು 17/18 - ಭಿನ್ನರಾಶಿಗಳ ಛೇದಗಳಾದ 2,3,9 ಇವುಗಳ ಲಘುತಮ ಸಾಮಾನ್ಯ ಅಪವರ್ತ್ಯ 18 ರಿಂದ ಗುಣಿಸಿದಾಗ ಸಿಗುವ) 9:6:2 ಪ್ರಮಾಣದಲ್ಲಿ ಹಂಚಿಕೊಳ್ಳಲು ಹೇಳಿದ್ದಾನೆ. ಹೀಗಾಗಿ ಆ ಮೂರು ಮಕ್ಕಳು 9,6,2 ಆನೆಗಳನ್ನು ಇಟ್ಟುಕೊಂಡರೆ ಆಯ್ತು ಅಲ್ಲವೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!