ವಿದ್ಯಾರ್ಥಿ ಇದ್ದಾಗ ಓದಿದ್ದನ್ನು ನೆನಪಿನಲ್ಲಿಡಲು ಮುಖ್ಯಾಂಶಗಳನ್ನ ಬರೆದಿಡುತ್ತಿದ್ದೆ. ಆ ಮೂರೋ ನಾಲ್ಕೋ ಪಾಯಿಂಟ್ ನೆನಪಿಟ್ಟರೆ ಬೆಳೆಸಿ ಬರೆಯೋದು ಕಷ್ಟ ಆಗುತ್ತಿರಲಿಲ್ಲ.

ಈಗ ಆ ಯುಗ ಹಾಗೆ e ಯುಗ ಹೋಗಿ ai ಯುಗ ಬಂದಾಗಿದೆ. ಇಲ್ಲಿ ಎಲ್ಲ ಬರೆಯೋ ಅವಶ್ಯಕತೆ ಇಲ್ಲ. ಮುಖ್ಯಾಂಶ ಬರೆದು ಇದನ್ನ ಸ್ವಲ್ಪ ಎಳೆದು ದೊಡ್ದದು ಮಾಡು ಎಂದು ಹೇಳಿದರೆ ಸಾಕು ai ಎಲ್ಲ ಬರೆದು ಬಿಡುತ್ತದೆ.

Computer ಅಲ್ಲಿ ಬರೆಯೋದಕ್ಕೆ ಸಾಧನಗಳು ಬಂದಾಗ ನಾವು ಸ್ಪೆಲ್ಲಿಂಗ್ ಅಥವಾ ವ್ಯಾಕರಣ ಮರೆತೆವು. ಈಗ ಚಿಕ್ಕದಾಗಿ ಬರೆದು ಹಿಗ್ಗಿಸಲು ಇಲ್ಲವೆ ಉದ್ದ ಬರೆದದ್ದನ್ನ ಚಿಕ್ಕದು ಮಾಡಲು ai ಸಿದ್ಧ ಹಸ್ತ. ನಾವು ಬರೆಯೋದನ್ನೇ ಮರೆತು ಬಿಡುತ್ತೇವಾ ಅನ್ನೋ ಸಂಶಯ ನೈಜವಾದದ್ದು.

ವಿಷಯ ಹೀಗಿರಲು ಬರವಣಿಗೆಯಲ್ಲಿ ಸ್ವಂತಿಗೆ ಹೇಗೆ ಅನ್ನೋದು ನಿಜಕ್ಕೂ ಗಂಭೀರ ಸಂಗತಿ. ಬರವಣಿಗೆ ಇನ್ನೊಬ್ಬರು ಓದಿ ಮೆಚ್ಚುವುದಕ್ಕೆ ಅದರಲ್ಲಿ ಬರಿ ವ್ಯಾಕರಣ ಇಲ್ಲವೇ ಸ್ಪೆಲ್ಲಿಂಗ್ ಸರಿ ಇದ್ದರೆ ಸಾಲದು. ವಿಷಯ ಸ್ವಂತದ್ದಿರಬೇಕು. ಸ್ವಲ್ಪ ನಾವು ಬರೆದು ಸ್ವಲ್ಪ ai ಇಂದ ಬರೆಸಿದರೂ, ವಿಷಯದಲ್ಲಿ ಸ್ವಂತಿಕೆ ಇದ್ದರೆ ಅದೇ ವಿಶೇಷ.