ಹೊಸ ಹೊಸ ಭಾವನೆ ಉಕ್ಕಿಸೊ ಬಿಂದಿಗೆ ನೀ..
ಬಿಸಿ ಬಿಸಿ ಕಾಮನೆ ದಹಿಸೊ ತಂಬಿಗೆ ನೀ..
ನಿನ್ನ ಸ್ಪರ್ಶ ಸವಿಯಲು.. ಯುಗವೊಂದು ಸಾಲದು..
ನಿನ್ನ ಬಿಗಿಯ ಅಪ್ಪುಗೆಯಿಂದಾಲೆ ತಾನೇನೆ ಹಿತವಾದ ಆಲಿಂಗನ..
ನಿನ್ನ ಮತ್ತಿನ ಚುಂಬನದಿಂದಾಲೆ ತಾನೇನೆ ಮೈಯೆಲ್ಲ ರೋಮಾಂಚನ..
ನನ್ನ ಸಂಗಾತಿಯೆ ನೀನೊಮ್ಮೆ ನುಡಿದರೆ ಮುತ್ತಿನ ಸರದಂತೆ..
ಹೊಳಪು.. ತಾರೆಗಳ ಮುಟ್ಟದೇ .. ಬಿಳುಪು.. ತಿಂಗಳ ಚುಚ್ಚದೇ..
ನನ್ನ ಸಂಗಾತಿಯೆ ನೀನೊಮ್ಮೆ ನಡೆದರೆ ಹಂಸದ ನಡೆಯಂತೆ..
ವನಪು ಕಂಗಳ ಕುಕ್ಕದೇ.. ವೈಯ್ಯಾರ ಮನಸ ಹೊಕ್ಕದೇ..
ನೀನೊಂದು ಸುಂದರ ಕಾನನವು.. ನಿನ್ನ ತುಂಬೆಲ್ಲ ಹೂಗಳ ಸೌಗಂಧವು..
ನೀನೆಂದೂ ನನ್ನಯ ಶೃಂಗಾರವು.. ನಿನ್ನ ಮೆಚ್ಚೋಕೆ ನೂರೆಂಟು ಕಾರಣವು..
ಎಲ್ಲ ಕಾಲಕ್ಕು ಸಲ್ಲುವ ಸೌಂದರ್ಯ ನಿಂದೇನಾ..
ಮುತ್ತಿನಾ.. ಪಲ್ಲಕ್ಕಿ.. ಎರಿ ಹೊಗುವ.. ಬಾಬಾರೆ ಬಾಬಾರೆ ಮಧುಚಂದ್ರಕೆ..
ಹೊಸ ಹೊಸ ಭಾವನೆ ಉಕ್ಕಿಸೊ ಬಿಂದಿಗೆ ನೀ..
ಬಿಸಿ ಬಿಸಿ ಕಾಮನೆ ದಹಿಸೊ ತಂಬಿಗೆ ನೀ..
ನೀಲಿ ಬಾನಲ್ಲಿ ಇಂದು.. ತೇಲುವ ಮೋಡಕೆ ಸಂದೇಶ ಕಳಿಸಿರುವೆ..
ನಿನ್ನಯ ಚೆಲುವ ಹಾಡೋಕೆ.. ನನ್ನಯ ರಾಣಿಯ ಹೊಗಳೋಕೆ..
ಅಂದು ವಾತ್ಸಾಯ್ನ ಬರೆದ.. ಕಾವ್ಯಕ್ಕೆ ಸರಕು ನೀನೆ ಆಗಿದ್ದರೆ
ಕಥೆಯೆ ಬೇರೇನೆ ಅಲ್ಲವೆ.. ನಿನ್ನ ಸಂಗ ಬೆಲ್ಲವೆ..
ಒಂದೊಂದು ಕ್ಷಣದಲ್ಲು ಹೊಸತನ.. ಎಲ್ಲಿಂದ ನೀ ಪಡೆವೆ ಪ್ರತಿಕ್ಷಣ
ಎಂದೆಂದು ನಗುವೆಂಬ ಆಭರಣ.. ದರಿಸಿದ ಮುಖವನ್ನೆ ನೋಡುವೆ ನಾ..
ಮಾಗಿ ಕಾಲದಿ ಹಾಡುವ ಕೋಗಿಲೆ ನೀನೇನಾ..
ಎಷ್ಟೊಂದು ಚೆಲುವನ್ನು.. ನೀ ಇನ್ನು ನಿನ್ನಲ್ಲೆ ನಿನ್ನಲ್ಲೆ ತುಂಬಿರುವೆ..
ಹೊಸ ಹೊಸ ಭಾವನೆ ಉಕ್ಕಿಸೊ ಬಿಂದಿಗೆ ನೀ..
ಬಿಸಿ ಬಿಸಿ ಕಾಮನೆ ದಹಿಸೊ ತಂಬಿಗೆ ನೀ..
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!