ಕ್ಷಣ ಕ್ಷಣ ಕಾದಿಹೆ ಮಾನಸಿಯ ದರುಶನಕೆ

ಮನ ಮನ ಸೇರುವ ಆ ರಸಮಯ ಸವಿ ಸಮಯಕೆ

 

ಮನಸಿನಲಿ ಇರುವೆಲ್ಲ ನಿರೀಕ್ಷೆಯ ಪರೀಕ್ಷೆಗೆ

ಎದೆಯಲಿ ಬಲಿತಿರುವ ಭಾವದ ಸವಿ ಬಳಕೆಗೆ 

 

ಮಿತಿಯಿಲ್ಲದ ಸವಿ ಸುಂದರ ಕನಸುಗಳ ಹೆಣೆದು

ಸ್ಥಿತಿಯಿಲ್ಲದ ಮನಸಿನ ಕಾತರತೆಯ ತಡೆದು

 

ನನ್ನೆದೆಯ ತವಕವ ಕವನಗಳಲಿ ಕೊರೆದು

ಪ್ರೇಯಸಿಯ  ಮನದಿನಿಯನಾಗುವಾಸೆಯ ತಳೆದು

 

ಮನಸಾಗಿದೆ ನೂರಾರು ಪ್ರಶ್ನೆಗಳ ಗುಚ್ಛ

ಉತ್ತರ ಸಿಗೋವರೆಗೆ ನಾನೊಬ್ಬ ಅರೆ ಹುಚ್ಚ

 

ಕನ್ನಡಿ ಎದುರಾದರೆ ಅರಿಯದೆ ಮೂಡುತಿದೆ ನಗುವು

ನನ್ನ ಮನಸೆ ಹೊಗಳುವುದು ನನಗಿಲ್ಲದ ಆ ಚೆಲುವು

 

ನನಗರಿಯದೆ ಏನೊ ಎಂತೋ ತುಡಿತವು ತನುವಲಿ

ಸಹಿಸಲಾಗದ ಯಾತನೆಯ ಕೊರೆತವು ಎದೆಯಲಿ