ತೀರಿಕೊಂಡವರೆಂದೂ ಮರಳಿ ಬರಲ್ಲ
ಅವರ ನೆನಪು ಮಾತ್ರ ನಮ್ಮಲ್ಲಿ ಸಾಯಲ್ಲ
ಆ ನೆನಪುಗಳೇಕೆ ಅವರೊಂದಿಗೆ ಹೋಗಲ್ಲ
ಅವ ಮರೆಯಲು ನಮಗೇಕೆ ಸಾದ್ಯವಿಲ್ಲ
ಹುಟ್ಟದು ಸಿಗುವುದು ಎಲ್ಲರಿಗೂ ಉಚಿತ
ಸಾವು ಪ್ರತಿಯೊಂದು ಜೀವಿಗೂ ಖಚಿತ
ಹುಟ್ಟು ಸಾವಿನ ಗುಟ್ಟದು ಗುಟ್ಟೇ ಖಂಡಿತ
ಇದೆಲ್ಲ ಸೃಷ್ಠಿಕರ್ತನ ನಾಟಕ ನಿಯಮಿತ
ಮರಣಾನಂತರ ಆತ್ಮಗಳೇನಾಗುವವು ತಿಳಿಯದು
ಎಂದರೆ ನೆನಪಾಗುವುದು ಆತ್ಮಕ್ಕೆ ಸಾವಿಲ್ಲ ನುಡಿಯದು
ನಿಜವಾದರೆ ಆತ್ಮಗಳು ಮರುಜನ್ಮ ಪಡೆಯುವುದು
ಮರಳುವುದಿಲ್ಲವೇಕೆ ಹಿಂದಿನ ಜನ್ಮದ ನೆನಪದು
ನಮ್ಮನ್ನಗಲಿದವರಿಗೂ ನಮ್ಮ ನೆನಪಾಗದೆ?
ಅವರೆಮ್ಮ ಬಿಟ್ಟದ್ದು ತಪ್ಪೆಂದು ಅರಿವಾಗದೆ?
ನಮ್ಮ ನೋಡಲು ಅವರಿಗೆ ಸಾದ್ಯವೆ?
ಸಾದ್ಯವಾದರೆ ಅದು ನಮಗೆ ನಿಲುಕದ ಭಾಗ್ಯವೆ?
ಅಗಲಿದವರ ನೆನಪದು ಬಂದರೆ ಒಮ್ಮೆಗೆ
ಶಾಂತಿಯದು ಇಲ್ಲದಂತಾಗುವುದು ಮನಸಿಗೆ
ನಿದ್ರೆಯದು ಬರದಾಗುವುದು ಕಣ್ಣಿಗೆ
ದುಗುಡ ಬೇಸರಗಳವು ಸೇರುವವು ಎದೆಯಗೂಡಿಗೆ
ನಾವಿರುವ ಜಗಕೆ ಅವರು ಮರಳಿ ಬಂದರೂ
ಗುರ್ತಿಸಲಾಗದ ರೂಪದಿ ಜನ್ಮ ತಾಳುವರು
ಅವರಿರುವ ಜಗಕೆ ನಾವು ಸೇರುವುದಾದರೂ
ನಾವು ಸೇರುವವರೆಗೂ ಅವರಲ್ಲೇ ಇರುವರೆ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!