ನಾಲ್ಕಾರು ದಿನಗಳಿಂದ, ನಾನು ಪ್ರತಿಕ್ರಿಯೆಗಳನ್ನು ಬರೆದು ಮುಗಿಸಿ, ಅದನ್ನು ಉಳಿಸಿಕೊಳ್ಳುವಾಗ, ಈ ರೀತಿಯಾದ ಸಂದೇಶ ಬರುತ್ತಿದೆ.
Fatal error: Unsupported operand types in /home/sampada/projects/drupal6/htdocs/sites/all/modules/messaging/messaging.module on line 711
ಇದರಿಂದಾಗಿ ಏನೋ ಎಡವಟ್ಟು ಆಗಿದೆ ಎಂದು ಪುನಃ ಪ್ರತಿಕ್ರಿಯೆ ಬರೆದರೆ ಎರಡೆರಡು ಪ್ರತಿಕ್ರಿಯೆಗಳು ದಾಖಲಾಗುತ್ತವೆ.
ಹಾಗೆ ಮಾಡುವ ಗೋಜಿಗೇ ಹೋಗದೇ, ಅ ಪುಟವನ್ನು ಅಲ್ಲಿಗೆ ಮುಚ್ಚಿಬಿಟ್ಟು, ನೇರವಾಗಿ, ಆ ಮೂಲ ಬರಹದ ಪುಟವನ್ನು, ಪ್ರತ್ಯೇಕವಾದ ಕಿಂಡಿಯಲ್ಲಿ ತೆರೆದು ನೋಡಿದರೆ, ಆ ಪ್ರತಿಕ್ರಿಯೆ ಅದಾಗಲೇ ದಾಖಲಾಗಿರುವುದು ಕಂಡು ಬರುತ್ತದೆ.
ಸಂಪದಗರೆಲ್ಲರೂ ದಯವಿಟ್ಟು ಈ ಬಗ್ಗೆ ನಿಗಾವಹಿಸಿ ತಮ್ಮ ಪ್ರತಿಕ್ರಿಯೆಗಳು ನಕಲಾಗದಂತೆ ನೋಡಿಕೊಳ್ಳಿ.
ಪುಟವನ್ನು "REFRESH" ಮಾಡಬೇಡಿ.
ಅಲ್ಲದೇ, ಸಂಪದ ನಿರ್ವಾಹಕರು ದಯವಿಟ್ಟು ಇದನ್ನು ಸರಿಪಡಿಸಿ.
- ಆಸು ಹೆಗ್ಡೆ
ಪ್ರತಿಕ್ರಿಯೆ (1)