ಇದೀಗ 'ಏಕ ಪ್ಯಾರ ಕಾ ನಗಮಾ ಹೈ' ಹಾಡನ್ನು ಮೂಲ ಧಾಟಿಯಲ್ಲಿ ಹಾಡಲು ಬರುವಂತೆ ನಾನು ಅನುವಾದ ಮಾಡಿದ್ದೇನೆ. (ನನ್ನ ಸಂಖ್ಯೆ 590) ಅದು ಇಲ್ಲಿದೆ.


ಒಂದು ಪ್ರೇಮದ ಹಾಡು ಇದು ತೆರೆಗಳ ಉಕ್ಕು ಇದು
ಬದುಕಿದೂ ಮತ್ತೇನೂ ಅಲ್ಲ ನಿನ್ನ ನನ್ನ ಕಥೆ ತಾನು|| ಪ II

ಏನೋ ಪಡೆದು ಕಳೆಯುವುದು
ಏನೋ ಕಳೆದು ಪಡೆಯುವುದು
ಜೀವನದ ಅರ್ಥವು ತಾ
ಬಂದು ಹೋಗುವುದು
ಎರಡು ಗಳಿಗೆ ಬಾಳಿನಲ್ಲಿ
ಯುಗವನ್ನು ಕಾಣುವುದು
ಬದುಕಿದು ಮತ್ತೇನು ಅಲ್ಲ
ನಿನ್ನ ನನ್ನ ಕಥೆ ತಾನು ||


ನೀ ನದಿಯ ಧಾರೆ ಕಣೇ
ನಾ ನಿನ್ನ ಪಾಲಿಗೆ ತೀರ
ನೀ ನನ್ನ ಆಸರೆಯು
ನಾ ನಿನ್ನ ಆಸರೆಯು
ಕಣ್ಣಲ್ಲಿ ಕಡಲು ಇದೆ
ಆಸೆಗಳ ನೀರು ಇದೆ
ಬದುಕಿದೂ ಮತ್ತೇನೂ ಅಲ್ಲ ನಿನ್ನ ನನ್ನ ಕಥೆ ತಾನು ||


ಬಿರುಗಾಳಿ ಬರುತದೆ
ಬಂದು ಹೋಗುತದೆ
ಕೆಲ ಗಳಿಗೆಯ ಮೋಡಗಳು
ತಾ ಕವಿದು ತೆರಳುವವು
ನೆರಳು ತಾ ಉಳಿಯುವುದು
ಗುರುತೂ ಉಳಿಯುವುದು
ಬದುಕಿದು ಮತ್ತೇನು ಅಲ್ಲ ನಿನ್ನ ನನ್ನ ಕಥೆ ತಾನು ||