ಸಾಮಾನ್ಯವಾಗಿ ರಾಮಾಯಣವನ್ನು ಪಾರಾಯಣ ಮಾಡುವವರು ಶ್ರೀ ರಾಮನು ರಾವಣನನ್ನು ಕೊಂದು ಸೀತೆಯೊಂದಿಗೆ ಮರಳಿ ಪಟ್ಟಾಭಿಷೇಕ ಹೊಂದುವಲ್ಲಿ ನಿಲ್ಲಿಸುತ್ತಾರಂತೆ. ಸೀತಾ ಪರಿತ್ಯಾಗವಾಗಲಿ, ಶ್ರೀ ರಾಮನ ಅವತಾರ ಸಮಾಪ್ತಿಯಾಗಲಿ,

ಮತ್ತಿತ್ತರ ಘಟನೆಗಳಾಗಲಿ ಉತ್ತರ ರಾಮಾಯಣದಲ್ಲಿ ಬರುತ್ತವಂತೆ. ಅದನ್ನು ವಾಲ್ಮೀಕಿ ಬರೆದಿಲ್ಲವಂತೆ. ಇರಲಿ.

ಶ್ರೀ ರಾಮನ ಬಗ್ಗೆ ಕೆಲವು ತಕರಾರುಗಳನ್ನು ನೀವು ಕೇಳಿರಬಹುದು. ವಾಲಿಯನ್ನು ಹಿಂದಿನಿಂದ ಕೊಂದುದರ ಬಗ್ಗೆ , ಸೀತೆಯನ್ನು ಪರಿತ್ಯಾಗ ಮಾಡಿದುದರ ಬಗ್ಗೆ, ಅಷ್ಟೇ ಏಕೆ ಶೂದ್ರನೊಬ್ಬ ತಪಸ್ಸು ಮಾಡಿದಾಗ ಅವನನ್ನು ಶ್ರೀರಾಮನು ಕೊಂದ ಬಗ್ಗೆ ನೀವು ಓದಿರಬಹುದು.

ಇತ್ತೀಚೆಗೆ ಈ ಶೂದ್ರ ಮುನಿಯ ಬಗ್ಗೆ ಶೂದ್ರಮುನಿ ಎಂಬ ಹೆಸರಿನಲ್ಲಿ ಶ್ರೀ ಸಿ ಕೆ ನಾಗರಾಜ್ ರಾವ್ ಎಂಬುವರು ಬರೆದ ನಾಟಕವನ್ನು archive.org ತಾಣದಲ್ಲಿ ಓದಿದೆ .

ಅಲ್ಲಿಂದ ಕೆಲವು ವಾಕ್ಯಗಳು ಇಲ್ಲಿ ಇವೆ.

-ಬೇರೊಬ್ಬರನ್ನು ನಿಂದಿಸುವುದು ಉತ್ತಮರ ಕೆಲಸವಲ್ಲ

  • ಉತ್ತಮವಾದದ್ದನ್ನು ಗಳಿಸುವವನು ಅದನ್ನು ಸರಿಯಾಗಿ ಉಪಯೋಗಿಸುವುದನ್ನು ವಿತರಿಸುವುದನ್ನು ತಿಳಿದಿರಬೇಕು.

•ಏನನ್ನಾದರೂ ಗಳಿಸಿ ದುರುಪಯೋಗ ಮಾಡುವುದಕ್ಕಿಂತ ಗಳಿಸದೆ ಇರುವುದು ಮೇಲು.

-ಆತ್ಮೋದ್ಧಾರಕ್ಕೆ ಮತ್ತು ಲೋಕ ಕಲ್ಯಾಣಕ್ಕೆ ಏನಾದರೂ ಮಾಡಬೇಕು.

  • ಸರಿಯಾಗಿ ಉಪಯೋಗ ಮಾಡದಿದ್ದವರು ಗಳಿಸಲು ಅಯೋಗ್ಯರು.

-ಸರಿಯಾಗಿ ಉಪಯೋಗ ಮಾಡದಿದ್ದವರು ಗಳಿಸಲು ಅಯೋಗ್ಯರು.

-ಕ್ಷಮೆಯೂ ಒಂದು ಮಹಾ ತಪಸ್ಸು, ಸಿದ್ಧಿ.